Advertisement

ನಿಷ್ಠಾವಂತರಿಗೆ ಕಾಂಗ್ರೆಸಿನಲ್ಲಿ ಬೆಲೆಯಿಲ್ಲ

01:21 AM Aug 05, 2019 | Lakshmi GovindaRaj |

ಕೆಂಗೇರಿ: ನಿಷ್ಠಾವಂತರಿಗೆ ಕಾಂಗ್ರೆಸ್ಸಿನಲ್ಲಿ ಬೆಲೆಯಿಲ್ಲ, ಪಕ್ಷಕಟ್ಟಲಿಕ್ಕೆ ನಾವು ಬೇಕು ಅಧಿಕಾರ ಹಂಚಿಕೆ ಮಾತ್ರ ವಲಸಿಗರಿಗೆ ಎಂದು ಮಾಜಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅಕ್ರೋಶ ವ್ಯಕ್ತಪಡಿಸಿದರು.

Advertisement

ಎಸ್‌.ಟಿ.ಸೋಮಶೇಖರ್‌ ಅಭಿಮಾನಿ ಬಳಗವು ಕೆಂಗೇರಿ ಉಪನಗರದ ಬಂಡೇಮಠದ ಶಿವಯೋಗಿ ಭವನದಲ್ಲಿ ಅಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕಳೆದ 23 ವರ್ಷದಿಂದ ಕಾಂಗ್ರೆಸ್‌ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ಜೀವನವನ್ನೆ ಮುಡಿಪಾಗಿಟ್ಟು ಕಾರ್ಯನಿರ್ವಹಿಸಿದ್ದೇನೆ. ಪಕ್ಷದ ಕಾರ್ಯವಾಗಬೇಕಾದರೆ ಸೋಮಶೇಖರ್‌ ಬೇಕು. ದೊಡ್ಡ ಕಾರ್ಯಕ್ರಮಗಳನ್ನು ಅಯೋಜಿಸಲು ಸೋಮಶೇಖರ್‌ ಬೇಕು. ಅಧಿಕಾರ ಮತ್ತು ಅನುದಾನ ನೀಡಲು ಮಾತ್ರ ಬೇಡ ಎಂದರು.

ಕಾಂಗ್ರೆಸ್‌ ಪಕ್ಷವನ್ನು ನಾನು ಕೂಡ ಬೆಳಸಿದ್ದೇನೆ ಬಳ್ಳಾರಿ ಪಾದಯಾತ್ರೆ ಕೈಗೊಂಡಾಗ, ರಾಹುಲ್‌ ಗಾಂಧಿಯವರ ರಾಜ್ಯದಲ್ಲಿ ಸಭೆಯನ್ನು ಅಯೋಜಿಸಲು, ಕಾರ್ಮಿಕ ದಿನ ಅಯೋಜಿಸಲು ಯಶವಂತಪುರವೇ ಬೇಕು ಎಂದು ಎಸ್‌.ಟಿ.ಸೋಮಶೇಖರ್‌ ಹೇಳಿದರು. ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸ್ವಂತ ಪರಿಶ್ರಮದಿಂದ ಕಟ್ಟಿದ್ದೇನೆ ಗೆದ್ದೆನೆಂದು ನಾನೆಂದು ಮನೆ ಸೇರಿಲ್ಲ ಕ್ಷೇತ್ರದ ಜನರ ಜತೆ ಇದ್ದೇನೆ. ಪ್ರಾಮಾಣಿಕವಾಗಿ ಪಕ್ಷಕ್ಕೆ ಸೇವೆಯನ್ನು ಸಲ್ಲಿಸಿದ್ದೇನೆ ಎಂದರು.

ಮಾಜಿ ಪ್ರಧಾನಿ ದೇವೇಗೌಡರ ಬದಲು ಬೆಂಗಳೂರು ಉತ್ತರಕ್ಕೆ ಕೃಷ್ಣಬೈರೇಗೌಡರು ಆಯ್ಕೆಯಾದಾಗ ಮೈತ್ರಿ ಧರ್ಮ ಪಾಲಿಸಬೇಕು ಎಂದು ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಮಾಡಿ ಬೆಂಬಲ ನೀಡಿದೆ, ಅದರಿಂದು ಅಧಿಕಾರ ಪಕ್ಷ ಕಟ್ಟದೆ ಇರುವವರ ಪಾಲಾಗಿದೆ. ನಾನು ಎಂದಿಗೂ ಸಚಿವ ಸ್ಥಾನಬೇಕೆಂದು ಕೇಳಲಿಲ್ಲ. ನನಗೆ ಬಿಡಿಎ ಅಧ್ಯಕ್ಷ ಸ್ಥಾನ ಕೊಟ್ಟರು. ಬಳಿಕ ಸಿಎಂ ಕಚೇರಿಯಿಂದ ಪತ್ರ ನೀಡುತ್ತಾರೆ.

ಅದೇನಂದರೆ ಒಂದೇ ಒಂದು ಫೈಲ್‌ ಕೂಡ ಸೋಮಶೇಖರ್‌ ಕಚೇರಿಗೆ ಹೋಗಬಾರದು ಎಂದು. ನಾನು ಬಿಡಿಎನಲ್ಲಿ ಒಂದು ಕೆಲಸ ಮಾಡಲು ಬಿಡಲಿಲ್ಲ ಇದನ್ನು ನಾನು ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್‌, ದಿನೇಶ್‌ ಗೂಂಡುರಾವ್‌ ಅವರಿಗೆ ತಿಳಿಸಿದೆ ಅದರೆ ಇವರು ಯಾರೂ ಕೂಡ ನನಗೆ ಬೆಂಬಲಿಸಲಿಲ್ಲ, ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ಅವರ ಕಚೇರಿಯಲ್ಲಿ ಶಾಸಕರ ಪತ್ರಗಳಿಗೆ ಬೆಲೆಯೇ ಇಲ್ಲ ಎಂದು ಹೇಳಿದರು.

Advertisement

ಾನು ಮತ್ತು ಬೈರತಿ ಬಸವರಾಜ್‌ ಅವರು ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಅವರಿಗೆ ಪರಿಸ್ಥಿತಿ ಮನವರಿಕೆ ಮಾಡಿದೆವು. ಆದರೆ,ಅವರು ಸ್ಪಂದಿಸದೆ, ನಮ್ಮ ಮನೆಗೆ ರಾತ್ರಿ ಹೋಗಿ ಮಾತನಾಡುತ್ತಾರೆ ಹಾಗೂ ಮುಂಬೈಗೆ ಬಂದು ಮೈತ್ರಿ ಸರ್ಕಾರದಲ್ಲಿ ಅಧಿಕಾರ ನೀಡಲಾಗುವುದು ಎನ್ನುತ್ತಾರೆ. ನಾವು ಅಧಿಕಾರಕ್ಕೆ ಆಸೆ ಬೀಳಲಿಲ್ಲ. ಜನಸೇವೆಗಾಗಿ ಬಂದವರಿಂದ ದ್ರೋಹವಾಗಿದೆ ಎಂದು ಮರುಕವಿದೆ ಎಂದರು.

ನಾನು ಪ್ರಾಮಾಣಿಕ ರಾಜಕಾರಣಿ ನೀವು ನನ್ನ ಮೇಲೆ ಸಿಬಿಐ ಅಥವಾ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಎಜೇನ್ಸಿ ಮುಖಾಂತಾರ ತನಿಖೆಗೆ ಕೊಟ್ಟರು ನನಗೆ ಭಯವಿಲ್ಲ. ಕಾನೂನು ಬಾಹಿರ ಕೆಲಸಗಳನ್ನು ಮಾಡಿಲ್ಲ ಅದಕ್ಕಾಗಿ ಯಾವುದೇ ಭಯವು ಇಲ್ಲವೆಂದರು. ಸಭೆಯಲ್ಲಿ ಬಿಬಿಎಂಪಿ ಸದಸ್ಯರಾದ ಆರ್ಯ ಶ್ರೀನಿವಾಸ್‌, ರಾಜಣ್ಣ, ವಾಸುದೇವ್‌, ಜಿಪಂ ಸದಸ್ಯರಾದ ಹನುಮಂತಯ್ಯ, ಪರ್ವೀಝ್ ಅಹಮದ್‌, ಸೇರಿದಂತೆ ಕ್ಷೇತ್ರದ ಎಲ್ಲಾ ಹದೀನೇಳು ಗ್ರಾಪಂ ಸದಸ್ಯರು ಅಧ್ಯಕ್ಷರು, ತಾಪಂ ಸದಸ್ಯರು, ಅಬಿಮಾನಿಗಳಿದ್ದರು.

ರಮೇಶ್‌ಕುಮಾರ್‌ ವಿರುದ್ಧ ವಾಗ್ಧಾಳಿ: ಸ್ಪೀಕರ್‌ ರಮೇಶ್‌ ಕುಮಾರ್‌ ರಾಜ್ಯದ ಅದರ್ಶ ವ್ಯಕ್ತಿ ಎಂಬಂತೆ ಬಿಂಬಿತರಾಗಿದ್ದಾರೆ. ಅದರೆ, ಬೈರತಿ ಬಸವರಾಜ್‌ ಅವರ ಮನೆಗೆ ಬಂದು ಈ ಅಪ್ಪ ಮಕ್ಕಳ ಸರ್ಕಾರವನ್ನು ಉರಳಿಸಬೇಕು ಎನ್ನುತ್ತಾರೆ. ನಿಖೀಲ್‌ ಕುಮಾರಸ್ವಾಮಿ, ಪ್ರಜ್ವಲ್‌ ರೇವಣ್ಣ ಮತ್ತು ದೇವೆಗೌಡರನ್ನು ಸೋಲಿಸಬೇಕು ಎಂದು ನೀವು ಹೇಳಿದ್ದು ಪಾಪ ಅವರಿಗೆ ನೆನಪಿಲ್ಲ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಮೇಲೆ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next