Advertisement

ನ್ಯೂಸ್‌ಪ್ರಿಂಟ್‌ ಮೇಲಿನ ತೆರಿಗೆ ಇಳಿಸಿ; ಪ್ರಧಾನ ಮಂತ್ರಿಗೆ ಸಿದ್ದರಾಮಯ್ಯ ಪತ್ರ

12:23 AM Apr 28, 2022 | Team Udayavani |

ಬೆಂಗಳೂರು: ದಿನ ಪತ್ರಿಕೆಗಳಿಗೆ ಅಗತ್ಯವಾದ ಕಾಗದದ ಮೇಲಿನ ತೆರಿಗೆ ಹೊರೆ ತಗ್ಗಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ದೇಶೀಯ ಮುದ್ರಣ ಕಾಗದದ ಗುಣಮಟ್ಟ ಹೆಚ್ಚಿಸಲು ಇನ್ಸೆಂಟಿವ್‌ಗಳನ್ನು ಕೊಡಬೇಕು. ಜಿಎಸ್‌ಟಿ ಪ್ರಮಾಣ ಇಳಿಸಬೇಕು. ಪತ್ರಿಕಾ ಸಂಸ್ಥೆಗಳಿಗೆ ಮುದ್ರಣ ಕಾಗದದ ಲಭ್ಯತೆ ಸುಗಮವಾಗಿ ಮತ್ತು ಸರಳವಾಗಿರುವಂತೆ ನೀತಿ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಪತ್ರಿಕಾಲಯಗಳು ಕಾಗದದ ಮೇಲೆ ನೀಡಬೇಕಿದ್ದ ತೆರಿಗೆಯ ಪ್ರಮಾಣ ಈಗ ಶೇ. 68ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬರುವ ಮುನ್ನ ಮುದ್ರಣ ಕಾಗದದ ಮೇಲೆ ಒಟ್ಟಾರೆ ಶೇ. 3ರಷ್ಟು ಮಾತ್ರ ತೆರಿಗೆ ಬೀಳುತ್ತಿತ್ತು. ಆದರೆ ಜಿಎಸ್‌ಟಿ ಬಳಿಕ ಮುದ್ರಣ ಕಾಗದದ ಮೇಲೆ ಶೇ. 5ರಷ್ಟು ತೆರಿಗೆ ಹೇರಲಾಗಿದೆ.

ಆರ್‌ಎನ್‌ಐ ನೋಂದಾಯಿತ ಪತ್ರಿಕಾ ಸಂಸ್ಥೆಗಳಿಗೆ ಶೇ. 5ರಷ್ಟು ಜಿಎಸ್‌ಟಿ ನಿಗದಿ ಮಾಡಲಾಗಿದ್ದರೆ, ನೋಂದಾಯಿತವಲ್ಲದ ಸಂಸ್ಥೆಗಳು ಮತ್ತು ಪುಸ್ತಕ ಪ್ರಕಾಶನ ಸಂಸ್ಥೆಗಳಿಗೆ ಶೇ. 12ರಷ್ಟು ಜಿಎಸ್‌ಟಿ ನಿಗದಿ ಮಾಡಲಾಗುತ್ತಿದೆ. ಹೀಗಾಗಿ ಪತ್ರಿಕಾ ಸಂಸ್ಥೆಗಳಿಗೆ ಅಗತ್ಯ ಪ್ರಮಾಣದಲ್ಲಿ ಕಾಗದ ದೊರಕುತ್ತಿಲ್ಲ. ಇದರ ಒಟ್ಟು ಪರಿಣಾಮದಲ್ಲಿ ಪತ್ರಿಕೆಗಳ ದರ ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಕಾಗದದ ದರ ಭಾರೀ ಏರಿಕೆ
1 ಟನ್‌ ಮುದ್ರಣ ಕಾಗದವನ್ನು ಆಮದು ಮಾಡಿಕೊಳ್ಳುವ ದರ ಮೊದಲಿದ್ದ 23,000 ರೂ.ನಿಂದ ಈಗ 55ರಿಂದ 60,000 ರೂ.ಗೆ ಏರಿಕೆಯಾಗಿದೆ. ಸದ್ಯ ಶೇ. 56ರಷ್ಟು ಮುದ್ರಣ ಕಾಗದ ವಿದೇಶಗಳಿಂದ ಭಾರತಕ್ಕೆ ರಫ್ತಾಗುತ್ತಿದ್ದರೆ ಶೇ. 44ರಷ್ಟು ದೇಶದ ಒಳಗೆ ಉತ್ಪಾದನೆ ಆಗುತ್ತಿದೆ. ಕಳೆದ 2 ವರ್ಷಗಳಲ್ಲಿ ಪತ್ರಿಕೆಗಳ ಮುದ್ರಣ ವೆಚ್ಚ ಕೂಡ ದುಪ್ಪಟ್ಟಾಗಿದೆ. ಹೀಗಾಗಿ, ಕೇಂದ್ರ ಸರಕಾರ ಮುದ್ರಣ ಮಾಧ್ಯಮದ ನೆರವಿಗೆ ಧಾವಿಸಬೇಕು ಎಂದವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next