Advertisement

Low weight Infant: ಕಡಿಮೆ ತೂಕದ ಮಗುವಿಗೆ ಜೀವ ಕೊಟ್ಟ ವೈದ್ಯರು

04:27 PM Aug 11, 2023 | Team Udayavani |

ಬಸವಕಲ್ಯಾಣ: ಇಲ್ಲಿನ ವೈದ್ಯರೊಬ್ಬರು ಸತತ 48 ದಿನಗಳ ಕಾಲ ಚಿಕಿತ್ಸೆ ನೀಡಿ ಮಗು ಬದುಕಿಸಿದ್ದಾರೆ. ಇದೀಗ ಮಗುವಿನ ಬಾಯಲ್ಲಿ ನಗು ಕಂಡರೆ ಹೆತ್ತವರ ಖುಷಿಗೆ ಪಾರವೇ ಇಲ್ಲ. ನಗರದ ಹಿರಿಯ ಮಕ್ಕಳ ವೈದ್ಯ ಡಾ|ಜಿ.ಎಸ್‌. ಭುರಾಳೆ ಅವರು ಚಿಕಿತ್ಸೆ ನೀಡುವ ಮೂಲಕ ಮಗುವನ್ನು ಬದುಕಿಸಿದ್ದಾರೆ.

Advertisement

ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಪೂಜಾ ಪವನ್‌ ಬನ್ಸೂಡೆ ಎಂಬುವವರ ಅವಧಿ ಪೂರ್ವ ಅಂದರೆ 7ನೇ ತಿಂಗಳಲ್ಲೇ ಹೆರಿಗೆ ಆಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. ಅವ ಧಿ ಪೂರ್ವ ಹೆರಿಗೆ ಆದ ಕಾರಣ ಜನಿಸಿದ ಮಗವಿನ ತೂಕ ಕೇವಲ 720 ಗ್ರಾಂ ಮಾತ್ರ ಇತ್ತು. ಇಷ್ಟೊಂದು ಕಡಿಮೆ ತೂಕದ ಮಕ್ಕಳು ಬದುಕುವುದು ಅಪರೂಪ.

ಬದುಕಿದರೂ ದೂರದ ಹೈದ್ರಾಬಾದ್‌, ಮುಂಬೈ, ಸೊಲ್ಲಾಪುರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಬೇಕಾಗುತ್ತದೆ. ಅದಕ್ಕೆ ಖರ್ಚು ಸಹ ಹೆಚ್ಚು. ಆದರೆ, ಪಾಲಕರ ಮನವಿ ಮೇರೆಗೆ ತಮ್ಮ ಆಸ್ಪತ್ರೆಯಲ್ಲಿ ಮಗುವಿಗೆ ದಾಖಲಾತಿ ಮಾಡಿಕೊಂಡ ಹಿರಿಯ ವೈದ್ಯ ಡಾ| ಜಿ.ಎಸ್‌. ಭುರಾಳೆ ಕಡಿಮೆ ಖರ್ಚಿನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿ ಮಗುವನ್ನು ಬದುಕಿಸಿದ್ದಾರೆ. ಮಗುವಿನ ನಗು ನೋಡಿ ಕುಟುಂಬದವರ ಮೊಗದಲ್ಲೂ ಸಂತಸ ಮೂಡಿದೆ. ಸದ್ಯ ಮಗುವಿನ ತೂಕ 1100 ಗ್ರಾಂಗೂ ಅಧಿಕವಾಗಿದ್ದು, ಮಗು ಆರೋಗ್ಯವಾಗಿದೆ ಎಂದು ಪಾಲಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next