Advertisement

ಮುರ್ಕೆತ್ತಿ: ಕೃಷಿ, ಕುಡಿಯುವ ನೀರಿಗೆ ಲೋ ವೋಲ್ಟೇಜ್‌ ಸಮಸ್ಯೆ

04:05 AM Apr 26, 2019 | Team Udayavani |

ಬೆಳ್ಳಾರೆ: ಪೆರುವಾಜೆ ಗ್ರಾಮದ ಮುರ್ಕೇತ್ತಿ ಪರಿಸರದಲ್ಲಿ ಕುಡಿಯುವ ನೀರು ಹಾಗೂ ಕೃಷಿ ತೋಟಗಳಿಗೆ ನೀರುಣಿಸಲು ವಿದ್ಯುತ್‌ ಲೋ ವೋಲ್ಟೇಜ್‌ ಸಮಸ್ಯೆ ಎದುರಾಗಿದೆ. ಬೆಳ್ಳಾರೆ ಮೆಸ್ಕಾಂ ವ್ಯಾಪ್ತಿಗೊಳಪಟ್ಟ ಮುರ್ಕೆತ್ತಿ ಪರಿಸರದಲ್ಲಿ 63 ಕೆ.ವಿ. ಹಾಗೂ 25 ಕೆ.ವಿ. ವಿದ್ಯುತ್‌ ಪರಿವರ್ತಕದ ಅಗತ್ಯತೆ ಇದ್ದು, ಪರಿವರ್ತಕ ಇಲ್ಲದೇ ಇರುವುದರಿಂದ ಕೃಷಿಕರು ಹಾಗೂ ಗ್ರಾಮಸ್ಥರು ಪರದಾಡುವಂತಾಗಿದೆ. ಈ ಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ. ಕೃಷಿಯನ್ನೇ ಅವಲಂಬಿಸಿರುವ ಕೆಲವು ಕುಟುಂಬಗಳು ಹಾಗೂ ಕುಡಿಯುವ ನೀರಿಗೆ ಗ್ರಾ.ಪಂ.ನ ನಳ್ಳಿ ನೀರನ್ನೇ ಅವಲಂಬಿಸಿರುವ ಕುಟುಂಬಗಳಿವೆ. ಆದರೆ ವಿದ್ಯುತ್‌ ಲೋ ವೋಲ್ಟೆàಜ್‌ ಸಮಸ್ಯೆಯಿಂದ ರೈತರ ಕೃಷಿ ತೋಟಗಳಿಗೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

Advertisement

ಹೊಸ ಪರಿವರ್ತಕಕ್ಕೆ ಬೇಡಿಕೆ
ಈಗ ಇರುವ ಪರಿವರ್ತಕದಲ್ಲಿ ಹೆಚ್ಚಿನ ವಿದ್ಯುತ್‌ ಹೊರೆಯಾದಾಗ ಲೋ ವೋಲ್ಟೆàಜ್‌ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಇಲ್ಲಿನ ಗ್ರಾಮಸ್ಥರ ಕುಡಿಯುವ ನೀರಿನ ಯೊಜನೆಯ ಪಂಪ್‌ಸೆಟ್‌ಗಳು ಸೇರಿದಂತೆ ರೈತರ ಪಂಪ್‌ಸೆಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸಿತ್ತಿಲ್ಲ. ಮುರ್ಕೆತ್ತಿ ಪರಿಸರದಲ್ಲಿ ಲೋ ವೋಲ್ಟೆàಜ್‌ ಸಮಸ್ಯೆ ಆಗಾಗ ತಲೆದೋರುತ್ತಿರುವು ದರಿಂದ ಇಲ್ಲಿಗೆ 63 ಕೆ.ವಿ ಹಾಗೂ 25 ಕೆ.ವಿ ವಿದ್ಯುತ್‌ ಪರಿವರ್ತಕ ಅಳವಡಿಸಬೇಕೆಂದು ದ.ಕ ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್‌ನ ವತಿಯಿಂದ ಕಾರ್ಯನಿವಾಹಕ ಇಂಜಿನಿಯರ್‌ಗೆ ಬೇಡಿಕೆ ಸಲ್ಲಿಸಲಾಗಿದೆ.

ಕೈಕೊಡುವ ವಿದ್ಯುತ್‌
ಮುರ್ಕೆತ್ತಿ ಪರಿಸರದಲ್ಲಿ ಸಾಮಾನ್ಯ ಮಳೆಯಾದಾಗಲೂ ವಿದ್ಯುತ್‌ ಕೈಕೊಡುತ್ತಿದ್ದು, ಇಲ್ಲಿ ವಿದ್ಯುತ್‌ನ ಹಳೆಯ ತಂತಿಗಳನ್ನು ಇದುವರೆಗೆ ಬದಲಾವಣೆ ಮಾಡದಿರುವುದೇ ಇದಕ್ಕೆ ಕಾರಣ ವಾಗಿದೆ. ಮಳೆಗಾಲದಲ್ಲಿ ಆಗಾಗ ವಿದ್ಯುತ್‌ ಕೈಡುತ್ತಿದ್ದು, ಹಳೆಯ ತಂತಿ ಗಳನ್ನು ಬದಲಾಯಿಸಿ ಹೊಸ ತಂತಿ ಅಳವಡಿಸದಿರುವುದರಿಂದ ಸಮಸ್ಯೆ ತಲೆದೋರಿದೆ.

ಪರಿಶೀಲಿಸಿ ಸರಿಪಡಿಸುತ್ತೇವೆ
ಮುರ್ಕೆತ್ತಿ ಭಾಗದಲ್ಲಿ ಈ ಸಮಯದಲ್ಲಿ ವಿದ್ಯುತ್‌ನ ಹೆಚ್ಚಿನ ಹೊರೆಯಾದಾಗ ಸಮಸ್ಯೆ ಎದುರಾಗುತ್ತಿರಬಹುದು. ಹೆಚ್ಚುವರಿ ಪರಿವರ್ತಕ ಅಳವಡಿಸುವ ಬಗ್ಗೆ ಪರಿಶೀಲಿಸಿ ಸಮಸ್ಯೆ ಸರಿಪಡಿಸುತ್ತೇವೆ.
– ಸತೀಶ್‌, ಸಹಾಯಕ ಎಂಜಿನಿಯರ್‌, ಬೆಳ್ಳಾರೆ ಮೆಸ್ಕಾಂ

 ಸಮಸ್ಯೆ ಸರಿಪಡಿಸಿ
ಮುರ್ಕೆತ್ತಿ ಪರಿಸರದಲ್ಲಿ ಲೋವೋಲ್ಟೇಜ್‌ ಸಮಸ್ಯೆಯಿಂದ ಕುಡಿಯುವ ನೀರಿಗೆ ಹಾಗೂ ಕೃಷಿಕರಿಗೆ ತೊದರೆಯಾಗುತ್ತಿದೆ. ಮೆಸ್ಕಾಂ ಇಲಾಖೆ ಕೂಡಲೇ ಇಲ್ಲಿ 63 ಕೆ.ವಿ ಹಾಗೂ 25 ಕೆ.ವಿ ವಿದ್ಯುತ್‌ ಪರಿವರ್ತಕ ಅಳವಡಿಸಬೇಕು. ಮಳೆಗಾಲದಲ್ಲಿ ವಿದ್ಯುತ್‌ ತಂತಿಗಳು ತುಂಡಾಗಿ ವಿದ್ಯುತ್‌ ಸಮಸ್ಯೆ ತಲೆದೋರುವುದರಿಂದ ಈಗ ಇರುವ ಹಳೆಯ ತಂತಿಯನ್ನು ಬದಲಾಯಿಸಿ ಸಮಸ್ಯೆಯನ್ನು ಬಗೆಹರಿಸಬೇಕಿದೆ.
 - ಸಚಿನ್‌ರಾಜ್‌ ಶೆಟ್ಟಿ, ಅಧ್ಯಕ್ಷರು, ದ.ಕ. ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್‌

Advertisement

ಉಮೇಶ್‌ ಮಣಿಕ್ಕಾರ

Advertisement

Udayavani is now on Telegram. Click here to join our channel and stay updated with the latest news.

Next