ಪಡುಬಿದ್ರಿ: ಪಾದೆಬೆಟ್ಟು ಗ್ರಾಮದ ಕುಚ್ಚಿಗುಡ್ಡೆ ಶಾಲೆಯ ಬಳಿ ನಿರ್ಮಿತಿ ಕೇಂದ್ರದ ಮೂಲಕ ಸ್ವಯಂ ತರಬೇತಿ ಪಡೆದು ಕೊರಗ ಜನಾಂಗವೇ ತಲಾ 2 ಲಕ್ಷ ರೂ., ಗಳ ಅನುದಾನದ ಮೂಲಕ ನಿರ್ಮಿಸಿರುವ ಮನೆಗಳಲ್ಲಿ ಬಳಸಲಾದ ಮರಮಟ್ಟುಗಳು, ಬಾಗಿಲಿ ಲ್ಲದ ಕಿಟಿಕಿಗಳು ಮುಂತಾಗಿ ಒಟ್ಟಾರೆ ಕಾಮಗಾರಿಯ ಕುರಿತು ಕಾಪು ಶಾಸಕ ಲಾಲಾಜಿ ಮೆಂಡನ್ ಅತೃಪ್ತಿಯನ್ನು ವ್ಯಕ್ತಪಡಿಸಿದರು.
ನಿರ್ಮಿತಿ ಕೇಂದ್ರದ ಅರುಣ್ ಕುಮಾರ್ ಸಹವರ್ತಿಯೊಂದಿಗೆ ಮಾತ ನಾಡಿದ ಶಾಸಕರು ತನ್ನ ಅನುದಾನದಿಂದ 3 ಲಕ್ಷ ರೂ.ಗಳನ್ನು ಮತ್ತು ಪಂಚಾಯತ್ ಅನುದಾನದಿಂದ ಪ್ರತಿ ಮನೆಯ ಶೌಚಾಲಯ ನಿರ್ಮಾಣಕ್ಕಾಗಿ 3 ಲಕ್ಷ ರೂ.ಗಳನ್ನು ಹಾಗೂ 25 ಶೇ. ನಿಧಿಯಲ್ಲಿ 50 ಸಾ.ರೂ. ಗಳನ್ನು ನೀಡಲಾಗಿದ್ದು ಕಾಮಗಾರಿಯ ಗುಣಮಟ್ಟವನ್ನು ಹೆಚ್ಚಿಸಬೇಕೆಂದರು.
ಇದೇ ಸಂದರ್ಭದಲ್ಲಿ ಶಾಸಕ ಲಾಲಾಜಿ ಮೆಂಡನ್, ಕುಚ್ಚಿಗುಡ್ಡೆ ಶಾಲೆಯಿಂದ ಎಸ್‌ಟಿ ಕಾಲನಿ ರಸ್ತೆಗೆ ಲೋಕೋಪಯೋಗಿ ಇಲಾಖೆಯ 10ಲಕ್ಷ ರೂ. ಅನುದಾನದ ಕಾಮಗಾರಿ ಹಾಗೂ ಸಮಾಜಕಲ್ಯಾಣ ಇಲಾಖೆಯ 15ಲಕ್ಷ ರೂ. ಅನುದಾನದಲ್ಲಿ ಪಾದೆಬೆಟ್ಟು ಕೊರಗರ ಕಾಲನಿಗೆ ನೀರಿನ ಸೌಲಭ್ಯಕ್ಕಾಗಿ ಗುದ್ದಲಿಪೂಜೆಯನ್ನು ನೆರವೇರಿಸಿದರು.
ಪಡುಬಿದ್ರಿ ಗ್ರಾ. ಪಂ.ವ್ಯಾಪ್ತಿಯಲ್ಲಿ ಪಾದೆಬೆಟ್ಟು ಕಲಾದಿಂದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ಎಸ್‌ಟಿ ಕಾಲನಿಗೆ ಹೋಗುವ 14 ಲಕ್ಷ ರೂ. ಗಳ ರಸ್ತೆ ಕಾಮಗಾರಿಗೆ, ಐಟಿಡಿಪಿಯ 10 ಲಕ್ಷ ರೂ. ಅನುದಾನದಲ್ಲಿ ತುಳುವ ಸಂಗಮ ಕೊರಗರ ಕಾಲನಿ ರಸ್ತೆ ಅಭಿವೃದ್ಧಿ, ಪಾದೆಬೆಟ್ಟು ಬಡ್ಡೆಕರಪು ಮನೆ ಬಳಿಯಿಂದ ಐಟಿಡಿಪಿಯ 10ಲಕ್ಷ ರೂ., ಅನುದಾನದಲ್ಲಿ ಸುಬ್ರಹ್ಮಣ್ಯ ದೇವಸ್ಥಾನವನ್ನು ಹಾದು ಹೋಗುವ ರಸ್ತೆ ನಿರ್ಮಾಣಕ್ಕಾಗಿ ಶಾಸಕರು ಭೂಮಿಪೂಜೆಯನ್ನು ನೆರವೇರಿಸಿದರು.
ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ದಮಯಂತಿ ವಿ. ಅಮೀನ್, ಉಪಾಧ್ಯಕ್ಷ ವೈ.ಸುಕುಮರ್, ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾ. ಪಂ. ಅಧ್ಯಕ್ಷೆ ನೀತಾ ಗುರುರಾಜ್, ಗ್ರಾ. ಪಂ. ಸದಸ್ಯರಾದ ರವಿ ಶೆಟ್ಟಿ, ಶ್ರೀನಿವಾಸ ಶರ್ಮ, ಮಯ್ಯದಿ, ಚುಮ್ಮಿ ಕೊರಪಳು, ಲತಾ ಪಿ. ಶೆಟ್ಟಿ, ಶಿವಮ್ಮ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಮಾಕಾಂತ್ ದೇವಾಡಿಗ, ಪೂವಪ್ಪ ಪೂಜಾರಿ, ಬಾಲಕೃಷ್ಣ ದೇವಾಡಿಗ ಮತ್ತಿತರಿದ್ದರು.
ನಂದಿಕೂರು-ಪಲಿಮಾರು ರಸ್ತೆ ಅಭಿವೃದ್ದಿಗೆ ಭೂಮಿಪೂಜೆ
ಪಲಿಮಾರು ಗ್ರಾ. ಪಂ.ವ್ಯಾಪ್ತಿಯ ನಂದಿಕೂರು -ಪಲಿಮಾರು ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ 50 ಲಕ್ಷ ರೂ. ಅನುದಾನದಲ್ಲಿ ಆರ್‌ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೂ ಕಾಪು ಶಾಸಕ ಲಾಲಾಜಿ ಮೆಂಡನ್ ಭೂಮಿಪೂಜೆಯನ್ನು ನೆರವೇರಿಸಿದರು. ಪಲಿಮಾರು ಗ್ರಾ. ಪಂ. ಉಪಾಧ್ಯಕ್ಷೆ ಸುಮಂಗಲಾ ದೇವಾಡಿಗ, ರಾಯೇಶ್ ಪೈ, ಪ್ರಸಾದ್ ಪಲಿಮಾರು, ರವಿ ಕುಮಾರ್, ಗ್ರಾ. ಪಂ. ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.