Advertisement
ಗಾರ್ಡನಿಂಗ್ ಮಾಡುವಾಗಲೂ ಸಾವಯವವನ್ನು ಆಯ್ದುಕೊಳ್ಳುವುದು ಉತ್ತಮ. ಹೂವಿನ ಗಿಡಗಳಿಗೆ ಯಾವುದೇ ರೀತಿಯಲ್ಲಿ ಹಾನಿಯುಂಟಾಗದೆ ಸುಂದರವಾಗಿ ಬೆಳೆಯಲು ಸಾವಯವ ಗೊಬ್ಬರಗಳು ಸಹಕಾರಿಯಾಗಿವೆ. ಈ ಗೊಬ್ಬರಗಳ ತಯಾರಿಕೆಗೆ ತುಂಬಾ ಶ್ರಮ ಪಡಬೇಕಾದ ಅಗತ್ಯವೇನಿಲ್ಲ. ಮನೆಯಲ್ಲಿರುವ ವಸ್ತುಗಳೇ ಸಾಕು.
ನಿಮ್ಮ ಉದ್ಯಾನವನದಲ್ಲಿ ಉದುರಿರುವ ಎಲೆಗಳನ್ನು ಹಾಗೇ ಇರಲು ಬಿಡಬೇಡಿ. ಅದನ್ನು ಗಿಡಗಳ ಬುಡಗಳಿಗೆ ಹಾಕಿ ಬಿಡಬೇಕು. ಅವುಗಳು ಅಲ್ಲೇ ಕೊಳೆತು ಗೊಬ್ಬರವಾಗಿ ಪರಿಣಮಿಸುತ್ತವೆ. ಅಥವಾ ಒಂದು ಹೊಂಡ ತೆಗೆದು ಅಲ್ಲಿ ತರಗೆಲೆಗಳ ಸಮೇತ ಕಸಕಡ್ಡಿಗಳನ್ನು ರಾಶಿ ಹಾಕುವುದರಿಂದ ಅಲ್ಲಿ ಗೊಬ್ಬರ ಉಂಟಾಗುತ್ತದೆ. ಅದನ್ನು ಮತ್ತೆ ಗಿಡಗಳ ಬುಡಕ್ಕೆ ಹಾಕಬಹುದು. ದನದ ಸೆಗಣಿ ಹಾಗೂ ಬೂದಿ ಉತ್ತಮ ಗೊಬ್ಬರವೆಂದು ಪರಿಗಣಿಸಲ್ಪಡುತ್ತದೆ. ತಿಂಗಳಿಗೊಮ್ಮೆ ಇವುಗಳನ್ನು ಗಿಡಗಳಿಗೆ ಹಾಕಿದರೆ ಯಾವುದೇ ರಾಸಾಯನಿಕ ವಸ್ತುಗಳ ಅಗತ್ಯ ಕಂಡು ಬರುವುದಿಲ್ಲ. ಎರೆಹುಳಗಳಂತಹ ಸಣ್ಣ ಜೀವಿಗಳು ಮಣ್ಣಿನಲ್ಲಿ ಇದ್ದರೆ ಅವುಗಳನ್ನು ನಾಶ ಮಾಡಬೇಡಿ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಇವುಗಳೂ ಸಹಕಾರಿ.
Related Articles
Advertisement
ಜೈವಿಕ ಕೀಟನಾಶಕಗಿಡಗಳಿಗೆ ಹುಳು ಬರುವುದಕ್ಕೆ ಮನೆಯಲ್ಲೇ ಕೀಟನಾಶಕಗಳನ್ನು ತಯಾರಿಸಬಹುದು. ಕಹಿಬೇವಿನ ರಸವನ್ನು ಹೂವಿನ ಗಿಡಗಳ ಎಲೆಗಳಿಗೆ ಸಿಂಪಡಿಸಿದರೆ ಹುಳು ವಿನ ಕಾಟದಿಂದ ಮುಕ್ತಿ ಪಡೆಯ ಬಹುದು. ಕಾಂಡವನ್ನು ಅಗೆಯುವ ಹುಳುಗಳಿದ್ದರೆ ಬೇವಿನ ರಸವನ್ನು ಬುಡಗಳಿಗೂ ಹಾಕಬಹುದು. - ಸುಶ್ಮಿತಾ ಶೆಟ್ಟಿ ಸಿರಿಬಾಗಿಲು