Advertisement

Boxing: ಒಲಿಂಪಿಕ್ಸ್‌ ಅರ್ಹತೆ ಗಳಿಸಿದ ಲವ್ಲೀನಾ

12:01 PM Oct 04, 2023 | Team Udayavani |

ಹ್ಯಾಂಗ್‌ಝೂ: ವಿಶ್ವ ಚಾಂಪಿಯನ್‌ ಲವ್ಲೀನಾ ಬೊರ್ಗೊಹೇನ್‌ 75 ಕೆ.ಜಿ. ವಿಭಾಗದಲ್ಲಿ ಫೈನಲ್‌ ಹಂತಕ್ಕೇರಿದ ಸಾಧನೆ ಮಾಡಿದರಲ್ಲದೇ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದರು. ಇದೇ ವೇಳೆ ಪ್ರೀತಿ ಪವಾರ್‌ ಮತ್ತು ನರೇಂದರ್‌ ಬೆರ್ವಾಲ್‌ ಸೆಮಿಫೈನಲ್‌ ಹೋರಾಟದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

Advertisement

ಟೋಕಿಯೋ ಒಲಿಂಪಿಕ್ಸ್‌ನ ಕಂಚು ವಿಜೇತೆ ಬೊರ್ಗೊಹೇನ್‌ ಅವರು ಸೆಮಿಫೈನಲ್‌ ಹೋರಾಟದಲ್ಲಿ ಥಾಯ್ಲೆಂಡಿನ ಬೈಸನ್‌ ಮಾನಿಕೋನ್‌ ಅವರನ್ನು ಏಕಮುಖವಾಗಿ ಸಾಗಿದ ಹೋರಾಟದಲ್ಲಿ 5-0 ಅಂಕಗಳಿಂದ ಉರುಳಿಸಿ ಫೈನಲ್‌ ಹಂತಕ್ಕೇರಿದರು.

ಪ್ರೀತಿಗೆ ಕಂಚು
54 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಪ್ರೀತಿ ಪವಾರ್‌ ಚೀನದ ಚಾಂಗ್‌ ಯುವಾನ್‌ ಕೈಯಲ್ಲಿ 0-5 ಅಂತರದಿಂದ ಸೋತು ನಿರಾಶೆ ಅನುಭವಿಸಿದರು. ಯುವಾನ್‌ ಹಾಲಿ ಫ್ಲೈವೇಟ್‌ ಚಾಂಪಿಯನ್‌ ಆಗಿದ್ದರು. ನರೇಂದರ್‌ ಬೆರ್ವಾಲ್‌ ಅವರು ಇನ್ನೊಂದು ಸೆಮಿಫೈನಲ್‌ ಹೋರಾಟದಲ್ಲಿ ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ ಕಜಾಕ್‌ಸ್ಥಾನದ ಕಮಿಬಎಕ್‌ ಕುಂಕಬಯೇವ್‌ ಅವರೆದುರು 0-5ರಿಂದ ಸೋತರು.

Advertisement

Udayavani is now on Telegram. Click here to join our channel and stay updated with the latest news.

Next