Advertisement

ಟಿಪ್ಸ್‌ಗೆ ಹಂಬಲಿಸಿದ,ಲಿಫ್ಟ್ ಸಿಕ್ಕಿತು!

02:20 AM Feb 27, 2018 | Team Udayavani |

ವೈದ್ಯರ ಮಾತು ಕೇಳಿ ವೆಂಕಟೇಶ ಕಂಗಾಲಾದ. ಒಂದೇ ವಾರದಲ್ಲಿ ಹತ್ತು ಸಾವಿರ ರೂಪಾಯಿ ಹೊಂದಿಸೋದು ಹೇಗೆಂದು ತಿಳಿಯದೆ ಜೊತೆಗಾರರಲ್ಲಿ ಕಷ್ಟ ತೋಡಿಕೊಂಡ. ಅವರು – “ಏನ್‌ ಮಾಡೋಕಾಗುತ್ತಪ್ಪಾ, ದೇವರ ಮೇಲೆ ಭಾರ ಹಾಕಿ ಕೆಲ್ಸ ಮಾಡ್ತಾ ಹೋಗು. ಎಲ್ಲವನ್ನೂ ಅವನಿಗೇ ಬಿಡೋಣ’ ಅಂದರು. ಇವತ್ತಿಂದ ಒಂದು ವಾರ ಕಾಲ, ಒಂದೊಂದು ಬಿಲ್‌ನಿಂದ 20 ರುಪಾಯಿ ಟಿಪ್ಸ್‌ ಸಿಗುವಂತೆ ಮಾಡಪ್ಪಾ ದೇವರೇ ಎಂದು ವೆಂಕಟೇಶ ಪ್ರಾರ್ಥಿಸಿದ.

Advertisement

“ನೋಡ್ರೀ, ಕಾಯಿಲೆ ಮತ್ತು ಕಷ್ಟ ಯಾವತ್ತೂ ಮುಖ ನೋಡಿ ಬರಲ್ಲ. ಮನೆತನ, ಅಂತಸ್ತು, ಶ್ರೀಮಂತಿಕೆ, ಬಡತನ ಯಾವುದೂ ಲೆಕ್ಕಕ್ಕೆ ಬರಲ್ಲ. ನಸೀಬು ಕೆಡು¤ ಅಂದ್ರೆ ಹೀಗೆಲ್ಲಾ ಆಗಿಬಿಡುತ್ತೆ. ಆದರೆ ಅದಕ್ಕೆಲ್ಲ ಹೆದರೊRàಬಾರ್ಧು. ಏನಾಗುತ್ತೋ ಆಗಲಿ ಎಂದು ಧೈರ್ಯ ತಗೋಬೇಕು. ನಿಮ್‌ ತಾಯಿಗೆ ಕ್ಯಾನ್ಸರ್‌ ಇನ್ನೂ ಫ‌ಸ್ಟ್‌ ಸ್ಟೇಜ್‌ನಲ್ಲಿದೆ. ಹಾಗಾಗಿ ಗಾಬರಿ ಬೀಳುವ ಅಗತ್ಯವಿಲ್ಲ. ಕ್ಯಾನ್ಸರ್‌ ಮೂರನೇ ಸ್ಟೇಜ್‌ನಲ್ಲಿದ್ದರೂ, ಹೋರಾಡಿ ಗೆದ್ದವರಿದ್ದಾರೆ. ವಯಸ್ಸಾಗಿರೋದ್ರಿಂದ ಇವರು ಚಿಕಿತ್ಸೆಗೆ ಹೇಗೆ ಸ್ಪಂದಿಸ್ತಾರೋ ಗೊತ್ತಿಲ್ಲ. ಮಾತ್ರೆ, ಇಂಜಕ್ಷನ್ನು, ಓಡಾಟ… ಹೀಗೆ ನಿಮ್ಗೆ ಸ್ವಲ್ಪ ಜಾಸ್ತಿನೇ ಖರ್ಚು ಬರುತ್ತೆ. ಸ್ವಲ್ಪ ದುಡ್ಡು ಕಾಸು ಹೊಂದಿಸ್ಕೊಳ್ಳಿ. ಅಂದಾØಗೆ, ನೀವು ಏನು ಕೆಲ್ಸ ಮಾಡ್ತೀರ?’

ಅದುವರೆಗೂ ವೈದ್ಯರ ಮುಂದೆ ಕೈಕಟ್ಟಿಕೊಂಡು, ವಿಧೇಯನಾಗಿ ಕೇಳಿಸಿಕೊಳ್ಳುತ್ತಿದ್ದ ವೆಂಕಟೇಶ ಈಗ ಹೇಳುವುದೋ ಬೇಡವೋ ಎಂಬಂತೆ ತಗ್ಗಿದ ದನಿಯಲ್ಲಿ- “ಹೋಟೆಲಲ್ಲಿ ಸಪ್ಲೆç ಯರ್‌ ಆಗಿದೀನಿ ಸಾರ್‌’ ಅಂದ. ವೈದ್ಯರು ಮರುಕ್ಷಣವೇ- “ಹೌದೇನ್ರೀ, ಹಾಗಾದ್ರೆ ನಿಮ್ಗೆ ತುಂಬಾ ಕಡಿಮೆ ಸಂಬಳ ಇರುತ್ತೆ. ಹೇಗಪ್ಪಾ ದುಡ್ಡು ಹೊಂದಿಸ್ತೀರ? ಧೈರ್ಯ ಕಳ್ಕೊàಬೇಡಿ. ಯಾವುದಾದ್ರೂ ದಾರಿ ಇದೆಯಾ ನೋಡಿ…’ ಎಂದು ಹೇಳಿ ಹೋಗಿಬಿಟ್ಟರು.

ಚನ್ನರಾಯಪಟ್ಟಣ ಸಮೀಪದ ಹಿರೀಸಾವೆ ಕಡೆಯವನು ವೆಂಕಟೇಶ. ಊರಲ್ಲಿ ಅವನಿಗೆ ನಾಲ್ಕೆಕರೆ ಜಮೀನಿತ್ತು. ಆದರೆ, ಮಳೆಯನ್ನೇ ನಂಬಿ ಕೃಷಿ ಮಾಡಬೇಕಿತ್ತು. ಓದಿನಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲವಾಗಿ, ಅವನು ಕಾಲೇಜಿಗೆ ಹೋಗಲೇ ಇಲ್ಲ. ಬದಲಿಗೆ, ವಾರಿಗೆಯ ಹುಡುಗರೊಂದಿಗೆ ಸೀದಾ ಬೆಂಗಳೂರಿಗೆ ಬಂದ. ಅವರ ಸಲಹೆಯಂತೆಯೇ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿದ. ಎಷ್ಟೋ ಬಾರಿ, ಊರಿಗೆ ವಾಪಸ್‌ ಹೋಗಿ ಬಿಡಬೇಕು ಅಂದು ಕೊಳ್ಳುತ್ತಿದ್ದ. ಮರುಕ್ಷಣವೇ- ಅಲ್ಲಿ ಇಡೀ ದಿನ ಬಿಸಿಲಲ್ಲಿ ಕೆಲಸ ಮಾಡೋ ಬದಲು, ಈ ಹೋಟೆಲಿನ ಕೆಲಸವೇ ವಾಸಿ. ಇಷ್ಟಕ್ಕೂ ಹೋಟೆಲಿನಲ್ಲಿ ಸರ್ವರ್‌ ಆಗಿರೋದು ನಾನೊಬ್ನೇ ಅಲ್ಲವಲ್ಲ; ಹುಡುಕಿದ್ರೆ ಇಲ್ಲಿನ ಹೋಟೆಲುಗಳಲ್ಲಿ ಚನ್ನರಾಯ ಪಟ್ಣದವರು ನಾನೂರು ಜನ ಆದ್ರೂ ಸಿಕ್ತಾರೆ ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದ.

ಈ ಲೆಕ್ಕಾಚಾರದ ಮಧ್ಯೆ 15 ವರ್ಷಗಳೇ ಕಳೆದುಹೋಗಿದ್ದವು. ಈ ನಡುವೆ ಅವನು ಮೂರು ಹೋಟೆಲು ಗಳನ್ನು ಬದಲಿಸಿದ್ದ. ಸಂಸಾರಸ್ಥನೂ ಆಗಿದ್ದ. ಮನೆಗೆ ಮಗು ಬಂತು ಎಂದು ಸಂಭ್ರಮಿಸಿದ ಎಂಟು ತಿಂಗಳಿಗೇ ಊರಲ್ಲಿದ್ದ ತಂದೆ ತೀರಿ ಹೋಗಿದ್ದರು. ಏನೇ ಬಡತನವಿದ್ದರೂ ಸಂಪ್ರದಾಯದ ಪ್ರಕಾರ “ಕಾರ್ಯ’ಗಳನ್ನು ಮಾಡಲೇಬೇಕಲ್ಲವೆ? ಒಟ್ಟೊಟ್ಟಿಗೇ ಜೊತೆ ಯಾದ ಕಷ್ಟಗಳಿಂದ ಪಾರಾಗುವ ವೇಳೆಗೆ ವೆಂಕಟೇಶ ಐದಾರು ಕಡೆ ಸಾಲ ಮಾಡಿದ್ದ. ಚೀಟಿ ಹಾಕಿದ್ದ ಹಣವನ್ನೂ ಎತ್ತಿಕೊಂಡಿದ್ದ. ಅವನು ಹೀಗೆಲ್ಲಾ ಹೆಣಗಾಡಿ, ಉಫ್… ಎಲ್ಲವೂ ಒಂದು ಹಂತಕ್ಕೆ ಮುಗೀತು ಅಂದುಕೊಂಡಾಗಲೇ ಅಮ್ಮ ಆಸ್ಪತ್ರೆ ಸೇರಿದ್ದಳು!

Advertisement

ಅಮ್ಮನನ್ನು ಉಳಿಸಿಕೊಳ್ಳಬೇಕೆಂದರೆ, ಅವನು ಒಂದಷ್ಟು ದುಡ್ಡು ಹೊಂದಿಸಿಕೊಳ್ಳಬೇಕಿತ್ತು. ಆದರೆ ಸಾಲ ಮಾಡುವುದನ್ನು ಬಿಟ್ಟು ಮತ್ಯಾವ ದಾರಿಯೂ ಇರಲಿಲ್ಲ. ಅವನ ಜೊತೆಗಿದ್ದವರೂ ಹೆಚ್ಚಾಗಿ ಹೋಟೆಲ್‌ ನೌಕರರೇ ಆಗಿದ್ದರಿಂದ ಅವರಲ್ಲಿಯೂ ಹಣ ಸಿಗುವ ಸಾಧ್ಯತೆ ಇರಲಿಲ್ಲ. ಓನರ್‌ ಬಳಿ ಕೇಳಿದ್ದಕ್ಕೆ- ಒಂದು ತಿಂಗಳ ಸಂಬಳವನ್ನು ಅಡ್ವಾನ್ಸಾಗಿ ಕೊಡ್ತೇವೆ. ಅದಕ್ಕಿಂತ ಹೆಚ್ಚಿನದನ್ನು ಮಾಡಲು ನಮಗೂ ಸಾಧ್ಯವಿಲ್ಲ ಎಂದಿದ್ದರು.

ಕಡೆಗೆ, ಹೋಟೆ ಲಿನ ನೌಕರರೆಲ್ಲಾ ಸೇರಿ ಎರಡು ಸಾಲಿನಲ್ಲಿ ಬಿಲ್‌ ಹಣ ಸಂಗ್ರಹಿಸಿ ಕ್ಯಾಶಿಯರ್‌ಗೆ ತಲುಪಿಸುವ ಜವಾಬ್ದಾರಿ ಯನ್ನು ವೆಂಕಟೇಶನಿಗೆ ಬಿಟ್ಟುಕೊಟ್ಟಿದ್ದರು. ಅದು ಹಳೆಯ, ಹೆಸರು ಮಾಡಿದ್ದ, ದೊಡ್ಡ ಹೋಟೆಲ್‌ ಆಗಿದ್ದರಿಂದ ಗ್ರಾಹಕರಿಂದ ಸಾಕಷ್ಟು ಟಿಪ್ಸ್‌ ಸಿಗುತ್ತಿತ್ತು. 10 ಗಂಟೆ ಅವಧಿಯ ಕೆಲಸದಲ್ಲಿ ಕಡಿಮೆ ಅಂದರೂ 100 ಗ್ರಾಹಕರಿಗೆ ಬಿಲ್‌ ಕೊಡುವ ಕೆಲಸ ಇರುತ್ತಿತ್ತು. ಒಂದು ಬಿಲ್‌ನಿಂದ 5 ರುಪಾಯಿ ಟಿಪ್ಸ್‌ ಸಿಗುತ್ತದೆ ಅಂದುಕೊಂಡರೂ, ದಿನಕ್ಕೆ 500 ರುಪಾಯಿ ಸಂಪಾದನೆ ಆಗುತ್ತದೆ. ಈ ಮೇಲು ಸಂಪಾದನೆಯಿಂದ ಆಸ್ಪತ್ರೆಯ ಖರ್ಚಿಗೆ ಹಣ ಹೊಂದಿಸಬಹುದು ಎಂದು ವೆಂಕಟೇಶ ಲೆಕ್ಕ ಹಾಕಿದ. ಅವನ ಜೊತೆಗಾರರೂ ಇದೇ ಮಾತು ಹೇಳಿದ್ದರು.

ಮಗ ಸಪ್ಪಗಿರುವುದು, ಮಾತಿಗೆ ಸಿಗದೆ ತಪ್ಪಿಸಿಕೊಳ್ಳುವುದನ್ನು ವೆಂಕಟೇಶನ ತಾಯಿಯೂ ಗಮನಿಸಿದ್ದಳು. ತನಗೆ ಯಾವುದೋ ದೊಡ್ಡ ಕಾಯಿಲೆ ಬಂದಿದೆಯೆಂದು ಆಕೆಗೂ ಗೊತ್ತಾಗಿ ಹೋಗಿತ್ತು. ಒಂದು ದಿನ ವೆಂಕಟೇಶನನ್ನು ಕರೆದು- “ಮಗಾ, ಊರು ಹೋಗು ಅಂತಿದೆ. ಕಾಡು ಬಾ ಅಂತಿದೆ. ನಾನು ಬದುಕಿ ಏನು ಸಾಧಿಸ್ಬೇಕು? ನನ್ನ ಹಣೆಬರಹ ಇದ್ದಂತೆ ಆಗಲಿ. ಊರಿಗೆ ಕರ್ಕೊಂಡೋಗಿ ಬಿಟ್ಟುಬಿಡು. ಈ ಆಸ್ಪತ್ರೆ, ಚಿಕಿತ್ಸೆ ಅಂತೆಲ್ಲಾ ಸುಮ್ನೆ ಖರ್ಚು ಮಾಡ್ಕೊàಬೇಡ. ನಿನಗೂ ಮಕ್ಕಳಿದ್ದಾರೆ. ಅವರ ಭವಿಷ್ಯಾನೂ ನೋಡ್ಕೊàಬೇಕು ನೀನು. ಈ ಮುದುಕಿಯನ್ನು ಉಳಿಸಿಕೊಳ್ಳೋಕೆ ಅಂತ ಜಮೀನು ಮಾರಬೇಡ ಕಣಪ್ಪ. ಅಪ್ಪನ ಆಸ್ತಿ ಅಂತ ನಿಮ್ಗೆ ಅದೊಂದೇ ಇರೋದು. ಅದನ್ನ ಕಳ್ಕೊà ಬೇಡಿ’ ಎಂದಿದ್ದಳು. ಆ ಮಾತು ಕೇಳಿ, ಛೇ, ಅರ್ಜೆಂಟಾಗಿ ಕಾಸು ಸಿಗುವ ಇದ್ದ ಒಂದು ದಾರಿಯೂ ಮುಚ್ಚಿಹೋಯ್ತು ಎಂದು ವೆಂಕಟೇಶ ಪೇಚಾಡಿಕೊಂಡಿದ್ದ.
***
“ನೋಡ್ರಿ, ಇನ್ನೊಂದು ವಾರದಲ್ಲಿ ಎರಡು ಚೆಕಪ್‌ ಮಾಡಿಸ್ಬೇಕು. ಹತ್ತಿಪ್ಪತ್ತು ಸಾವಿರ ಖರ್ಚು ಬರಬಹುದು. ದುಡ್ಡು ಹೊಂದಿಸ್ಕೊಳ್ಳಿ, ದುಡ್ಡು ಅರೇಂಜ್‌ ಆದ ತಕ್ಷಣ ಚಿಕಿತ್ಸೆ ಶುರು ಮಾಡ್ತೇವೆ’- ವೈದ್ಯರ ಈ ಮಾತು ಕೇಳಿ ವೆಂಕಟೇಶ ಕಂಗಾಲಾದ. ಒಂದೇ ವಾರದಲ್ಲಿ ಹತ್ತು ಸಾವಿರ ಹೊಂದಿಸೋದು ಹೇಗೆಂದು ತಿಳಿಯದೆ ಜೊತೆಗಾರರಲ್ಲಿ ಕಷ್ಟ ತೋಡಿಕೊಂಡ. ಅವರು – “ಏನ್‌ ಮಾಡೋಕಾಗುತ್ತಪ್ಪಾ, ದೇವರ ಮೇಲೆ ಭಾರ ಹಾಕಿ ಕೆಲ್ಸ ಮಾಡ್ತಾ ಹೋಗು. ಎಲ್ಲವನ್ನೂ ಅವನಿಗೇ ಬಿಡೋಣ’ ಅಂದರು. ಇವತ್ತಿಂದ ಒಂದು ವಾರ ಕಾಲ, ಒಂದೊಂದು ಬಿಲ್‌ನಿಂದ 20 ರುಪಾಯಿ ಟಿಪ್ಸ್‌ ಸಿಗುವಂತೆ ಮಾಡಪ್ಪಾ ದೇವರೇ ಎಂದು ವೆಂಕಟೇಶ ಪ್ರಾರ್ಥಿಸಿದ.

ಬದುಕಿನಲ್ಲಿ ಎಲ್ಲವೂ ನಾವಂದುಕೊಂಡಂತೆ ನಡೆಯುವುದಿಲ್ಲ ವಲ್ಲ; ವೆಂಕಟೇಶನ ಕತೆಯೂ ಹೀಗೇ ಆಯಿತು. ಗ್ರಾಹಕರು
ಹೆಚ್ಚಿನ ಟಿಪ್ಸ್‌ ನೀಡಬಹುದು ಎಂದು ಅವನು ಪ್ರತಿ ಬಿಲ್‌ ಬರೆವಾಗಲೂ ಯೋಚಿಸುತ್ತಿದ್ದ. ಹೆಚ್ಚಿನವರು ಐದು ರುಪಾಯಿ ಯಷ್ಟೇ ಟಿಪ್ಸ್‌ ಇಟ್ಟು ಹೋಗುತ್ತಿದ್ದರು. ಮತ್ತೆ ಕೆಲವರು ಬಿಲ್‌ನಲ್ಲಿ ಎಷ್ಟಿದೆಯೋ ಅಷ್ಟನ್ನೇ ಇಡುತ್ತಿದ್ದರು. ಅವತ್ತು, ಸಂಜೆ ಏಳಾಗುತ್ತಾ ಬಂದರೂ ಟಿಪ್ಸ್‌ ಸಂಪಾದನೆ 200 ರುಪಾಯಿಗಳಷ್ಟೇ ಆಗಿದ್ದನ್ನು ಕಂಡು ವೆಂಕಟೇಶನಿಗೆ ಅಳು ಬಂತು. ದುಡ್ಡು ಅಡೆjಸ್ಟ್‌ ಆಗಲಿಲ್ಲ ಎಂಬ ಕಾರಣಕ್ಕೇ ಡಾಕ್ಟರು ಚಿಕಿತ್ಸೆ ನೀಡದೇ ಹೋದರೆ, ಅಮ್ಮನೂ ಕೈತಪ್ಪಿ ಹೋದರೆ ಎಂಬ ಯೋಚನೆ ಬಂದಾಗಂತೂ ಅವನ ನಿಯಂತ್ರಣ ಮೀರಿ ಕಣ್ಣೀರು ಕೆನ್ನೆಗಿಳಿಯಿತು. ಕಸ್ಟಮರ್ ನೋಡಿದ್ರೆ ಆಭಾಸ ಆಗುತ್ತೆ. ಓನರ್‌ ನೋಡಿದ್ರೆ ಖಂಡಿತ ಛೀಮಾರಿ ಹಾಕ್ತಾರೆ ಎಂದು ಮುಖ ಒರೆಸಿಕೊಳ್ಳುತ್ತಿದ್ದಾಗಲೇ ಸೂಟು ಬೂಟಿನ ಆ ಹಿರಿಯ ಹೋಟೆಲಿಗೆ ಬಂದಿದ್ದ.

ಅವನನ್ನು ನೋಡುತ್ತಿದ್ದಂತೆಯೇ ವೆಂಕಟೇಶನ ಮುಖ ಅರ ಳಿತು. ಮನುಷ್ಯ ಒಳ್ಳೆಯವನ ಥರಾ ಕಾಣಾ¤ ಇದಾನೆ. ತುಂಬಾ ಹಸಿದಿರುವಂತಿದೆ. ಅವನೇನಾದ್ರೂ ಎರಡೂ¾ರು ಥರದ ತಿಂಡಿ ಕೇಳಿದ್ರೆ 200 ರುಪಾಯಿ ಬಿಲ್‌ ಆಗಬಹುದು. ಇನ್ನೂರು ರುಪಾ ಯಿನ ತಿಂಡಿ ತಿಂದವನು 50 ರುಪಾಯಿ ಟಿಪ್ಸ್‌ ಕೊಡದೇ ಇರ್ತಾನಾ ಎಂದುಕೊಂಡೇ ಟೇಬಲ್‌ನ ಎದುರು ನಿಂತ. ಇವನು ತಿಂಡಿಗಳ ಪಟ್ಟಿ ಒಪ್ಪಿಸುವ ಮೊದಲೇ ಆ ಹಿರಿಯ- “ಒಂದ್‌ ಮಸಾಲ್‌ ದೋಸೆ ಕೊಡಿ, ಆಮೇಲೆ ಕಾಫಿ ಕೊಡ್ತೀರಂತೆ…’ ಎಂದುಬಿಟ್ಟ. ಓಹ್‌, ದೋಸೆ-ಕಾಫಿ ಸೇರಿದ್ರೆ ತೊಂಬತ್‌ ರುಪಾಯಿ ಬಿಲ್‌ ಆಗುತ್ತೆ. ಅಲ್ಲಿಗೆ ಟಿಪ್ಸ್‌ ಅಂತ ಹತ್ರುಪಾಯಿ ಸಿಗಬಹುದು ಅನ್ನಿಸಿದಾಗ, ಆ ಕ್ಷಣಕ್ಕೆ ತಾಳ್ಮೆ ಕಳೆದುಕೊಂಡ ವೆಂಕಟೇಶ- “ದೇವ್ರೇ, ಯಾಕಪ್ಪಾ ಹೀಗೆಲ್ಲ ಹಿಂಸೆ ಕೊಡ್ತಿದೀಯ?’ ಎಂದುಬಿಟ್ಟ. ಈ ಮಾತು ಕೇಳಿಸಿಕೊಂಡ ಆ ವ್ಯಕ್ತಿ- “ಯಾಕಪ್ಪಾ ಏನಾಯ್ತು? ಎಂದರು. “ಅಯ್ಯೋ, ಕಷ್ಟ ಸ್ವಾಮೀ ಕಷ್ಟ. ಒಂದೇ ಸಲ ಸಾಯೋಕೂ ಆಗ್ತಿಲ್ಲ. ನೆಮ್ಮದಿಯಿಂದ ಬದುಕೋಕೂ ಆಗ್ತಿಲ್ಲ…’ ಅಂದವನೇ ದೋಸೆ ತರಲೆಂದು ಹೋಗಿಬಿಟ್ಟ.

ನಂತರದ 15 ನಿಮಿಷವನ್ನು ಆತ ತಿಂಡಿ ತಿನ್ನುವುದರಲ್ಲಿ, ಈತ ಸರ್ವ್‌ ಮಾಡುವುದರಲ್ಲಿ ಕಳೆದರು. ಬಿಲ್‌ನ ರೂಪದಲ್ಲಿ ಆತ
100 ರುಪಾಯಿ ಕೊಟ್ಟಾಗ ಬಾಕಿ ಚಿಲ್ಲರೆಯನ್ನು ತಂದಿಟ್ಟು, ಮತ್ತೂಂದು ಟೇಬಲ್‌ಗೆ ಹೋದ ವೆಂಕಟೇಶ. ಆ ಹಿರಿಯ ಎದ್ದುಹೋದ ನಂತರ, ತಿಂದಿರೋದು ಒಂದು ದೋಸೆ. ಕೊಟ್ಟಿ ರೋದು ನೂರೇ ರುಪಾಯಿ. ಹಾಗಾಗಿ ಐದೋ, ಹತ್ತೋ ರುಪಾಯಿ ಟಿಪ್ಸ್‌ ಸಿಗಬಹುದು ಎಂಬ ಅಂದಾಜಿನಲ್ಲಿಯೇ- ಟಿಪ್ಸ್‌ ಇದ್ದ ಕವರನ್ನು ಎತ್ತಿಕೊಂಡ ವೆಂಕಟೇಶ, ಬೆಚ್ಚಿಬಿದ್ದ. ಕಾರಣ, ಅದರೊಳಗೆ 500 ರುಪಾಯಿನ ಹತ್ತು ನೋಟುಗಳಿದ್ದವು!

ಓಹ್‌, ಬಹುಶಃ ಅವರು ದುಡ್ಡು ಬಿಟ್ಟು ಹೋಗಿದ್ದಾರೆ, ವಯಸ್ಸಾಗಿದೆಯಲ್ಲ, ಹಾಗಾಗಿ ಮರೆತಿದ್ದಾರೆ. ನೂರು ರುಪಾಯಿ ಬಿಲ್‌ಗೆ ಐದ್‌ ಸಾವ್ರ ಟಿಪ್ಸ್‌ ಕೊಡಲಿಕ್ಕೆ ಅವರಿಗೇನು ತಲೆ ಕೆಟ್ಟಿಲ್ಲ ತಾನೆ? ಅಕಸ್ಮಾತ್‌ ನಾನೀಗ ಈ ದುಡ್ಡು ಕೊಡದೇ ಹೋದ್ರೆ ಆತ ಮರಳಿ ಬರಬಹುದು. ದುಡ್ಡು ಮರೆತು ಹೋಗಿದೀನ್ರೀ ಎಂದು ಓನರ್‌ಗೆ ದೂರು ಕೊಡಬಹುದು. ಇಲ್ಲಿರೋ ಸಿಸಿಟಿವಿಯಲ್ಲಿ ಎಲ್ಲವೂ ದಾಖಲಾಗಿರುತ್ತೆ. ನಾನು ದುಡ್ಡು ತಗೊಂಡೆ ಅಂತ ಗೊತ್ತಾದ್ರೆ ಓನರ್‌ ಕೆಲಸದಿಂದ ತೆಗೆದು ಹಾಕ್ತಾರೆ. ಈ ರಗಳೆಯೆಲ್ಲಾ ಯಾಕ್‌ ಬೇಕು ಅಂದುಕೊಂಡ. ಇದೇನೂ ಅರಿವಿಲ್ಲದಂತೆ ಆ ಸೂಟುಬೂಟಿನ ಮನುಷ್ಯ ಕಾರಿನತ್ತ ಹೋಗುತ್ತಿದ್ದ. “ಆ ಸಾಹೇಬ್ರು ದುಡ್ಡು ಬಿಟ್ಟು ಹೋಗಿದ್ದಾರೆ. ಕೊಟ್ಟು ಬತೇìನೆ’ ಎಂದು ಹೇಳಿ ಓಡೋಡುತ್ತಲೇ ಆ ಹಿರಿಯರನ್ನು ತಲುಪಿದ ವೆಂಕಟೇಶ -“ಸಾರ್‌, ದುಡ್ಡು ಮರೆತು ಹೋಗ್ತಿದೀರ. ತಗೊಳ್ಳಿ’ ಎಂದ.

ವೆಂಕಟೇಶನನ್ನು ಮೆಚ್ಚುಗೆಯಿಂದ ನೋಡಿದ ಆ ಹಿರಿಯ ಹೀಗೆಂದ: “ಮರೆತು ಬಂದಿದ್ದಲ್ಲ. ಈ ದುಡ್ಡನ್ನ ನಿಮ್ಗೆ ಅಂತಾನೇ ಇಟ್ಟು ಬಂದೆ. ನೀವು ಕಷ್ಟ ಇದೆ ಅಂದದ್ದನ್ನ, ಕಣ್ಣೀರು ಸುರಿಸಿದ್ದನ್ನು ಗಮನಿಸಿದೆ. ಒಂದು ಕಾಲದಲ್ಲಿ ನನ್ನ ಸ್ಥಿತೀನೂ ಹೀಗೇ ಇತ್ತು. ಒಂದು ಹೊತ್ತಿನ ಕೂಳಿಗೂ ಗತಿಯಿರಲಿಲ್ಲ. ಅಂಥಾ ಟೈಮಲ್ಲಿ ಯಾರೋ ಪುಣ್ಯಾತ್ಮರು ಸಹಾಯ ಮಾಡಿದ್ರು. ಹತ್ತು ಜನರ ನೆರವಿನಿಂದಲೇ ಕಷ್ಟಗಳಿಂದ ಪಾರಾಗಲು ಸಾಧ್ಯವಾಯ್ತು. ಹಿಂದೆ ಯಾರೋ ನನಗೆ ಮಾಡಿದ್ರಲ್ಲ, ಅಂಥದೇ ಸಹಾಯವನ್ನು ನಾನೀಗ ನಿಮಗೆ ಮಾಡಿದೀನಿ ಅಷ್ಟೆ. ಸಾಧ್ಯವಾದ್ರೆ ಇದನ್ನು ನೀವೂ ಮುಂದುವರಿಸ್ಕೊಂಡು ಹೋಗಿ. ನಿಮ್ಗೆ ಒಳ್ಳೆಯದಾಗಲಿ…’

ಇಷ್ಟು ಹೇಳಿ ಆತ ಕಾರು ಹತ್ತಿ ಹೋಗಿಯೇಬಿಟ್ಟ. ನಡೆದಿದ್ದೆಲ್ಲಾ ಕನಸೋ, ನಿಜವೋ ಎಂದು ಅರ್ಥವಾಗದೆ ನಿಂತಿದ್ದ ವೆಂಕಟೇಶನಿಗೆ ಗೆಳೆಯರ ಮಾತುಗಳು ನೆನಪಾದವು: “ಕಷ್ಟ ಬಂದಾಗ ದೇವರು ಕೈ ಬಿಡೋದಿಲ್ಲ. ಯಾವುದಾದ್ರೂ ರೂಪದಲ್ಲಿ ಬಂದು ಸಹಾಯ ಮಾಡ್ತಾನೆ…’

– ಎ.ಆರ್‌. ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next