Advertisement
ಅವರು ಸೋಮವಾರ ಮಂಗಳೂರು ತಾಲೂಕಿನ ನೀರುಮಾರ್ಗ ಶ್ರಮಿಕ ಸಂತ ಜೋಸೆಫ್ ಚರ್ಚ್ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
ಸುವರ್ಣ ಮಹೋತ್ಸವದ ಲಾಂಛನವನ್ನು ಬಿಷಪ್ ಅಲೋಶಿಯಸ್ ಡಿ’ಸೋಜಾ ಅನಾವರಣ ಮಾಡಿದರು. ನೀರುಮಾರ್ಗ ಚರ್ಚ್ ಸ್ಥಾಪನೆಗೆ ನೆರವಾದ ವಾಮಂಜೂರು ಚರ್ಚ್‌ನ ಪರವಾಗಿ ಈಗಿನ ಧರ್ಮಗುರು ಫಾ| ಜೇಮ್ಸ್ ಡಿ’ಸೋಜಾ, ನೀರುಮಾರ್ಗ ಚರ್ಚ್‌ನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಫಾ| ವಲೇರಿಯನ್ ಫ್ರಾÂಂಕ್, ಫಾ| ವಿಕ್ಟರ್ ಡಿ’ಸೋಜಾ, ಫಾ| ಗಾಡ್‌ಫಿÅà ಎ. ಸಲ್ದಾನಾ, ಹೋಲಿ ಕ್ರಾಸ್ ಕಾನ್ವೆಂಟ್‌ನ ಧರ್ಮ ಭಗಿನಿ ಸಿ| ಮೇರಿ ಜಾನ್ ಮೊಂತೇರೊ ಮತ್ತು ಸಿ| ನೀತಾ ಆಳ್ವ, 1968ರಲ್ಲಿ ಚರ್ಚ್ ಸ್ಥಾಪಿಸಲು ಜಮೀನು ಒದಗಿಸಿದ ಜಾನ್ ಪಡಿವಾಳ್ ಅವರ ಕುಟುಂಬಸ್ಥರ ಪರವಾಗಿ ಮಾರ್ಕ್ ರೊಡ್ರಿಗಸ್ ಅವರನ್ನು, ಚರ್ಚ್‌ನಲ್ಲಿ ಸೇವೆ ಸಲ್ಲಿಸಿದ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು, ಗುರುಗಳ ಸಹಾಯಕರನ್ನು ಸಮ್ಮಾನಿಸಲಾಯಿತು.
Advertisement
ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ಅರುಣ್ ಡಿ’ಸೋಜಾ ಸ್ವಾಗತಿಸಿದರು. ಚರ್ಚ್‌ನ ಧರ್ಮಗುರು ಫಾ| ಅನಿಲ್ ಡಿ’ಮೆಲ್ಲೊ ವಂದಿಸಿದರು. ಉಪಾಧ್ಯಕ್ಷ ಪ್ರಕಾಶ್ ಪಿರೇರಾ, ಕಾರ್ಯದರ್ಶಿ ಜೆರಾಲ್ಡ್ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸಾದ್ ವಾಸ್ ಕಾರ್ಯಕ್ರಮ ನಿರ್ವಹಿಸಿದರು.