Advertisement

Sandalwood: ಲವ್‌ಸ್ಟೋರಿ ಎಂಬ ಎವರ್‌ಗ್ರೀನ್‌ ಜಾನರ್‌  

01:15 PM Feb 14, 2024 | Team Udayavani |

ಯಾವುದೇ ಭಾಷೆಯ ಚಿತ್ರರಂಗವನ್ನಾದರೂ ನೀವು ತೆಗೆದುಕೊಳ್ಳಿ, ಅಲ್ಲಿ ವರ್ಷಕ್ಕೆ 250 ಸಿನಿಮಾ ಬಿಡುಗಡೆಯಾದರೆ ಅದರಲ್ಲಿ ಬಹುಪಾಲು ಚಿತ್ರಗಳು ಲವ್‌ಸ್ಟೋರಿಯಿಂದ ಕೂಡಿರುತ್ತದೆ. ಅದಕ್ಕೆ ಕಾರಣ ಲವ್‌ಸ್ಟೋರಿ ಎಂಬ ಎವರ್‌ಗ್ರೀನ್‌ ಜಾನರ್‌.

Advertisement

ಕೆಲವು ಜಾನರ್‌ಗಳು ಆಗಾಗ ಟ್ರೆಂಡ್‌ ಆಗುತ್ತವೆ ಮತ್ತು ಸ್ವಲ್ಪ ಸಮಯದಲ್ಲಿ ಅದು ಮಂಕಾಗುತ್ತವೆ ಕೂಡಾ. ಆದರೆ, ಸದಾ ಟ್ರೆಂಡ್‌ನ‌ಲ್ಲಿರುವ ಮತ್ತು ಯಾವತ್ತೂ ಬೇಡಿಕೆಯಲ್ಲಿರುವ ಒಂದು ಜಾನರ್‌ ಎಂದರೆ ಅದು ಲವ್‌ ಸ್ಟೋರಿಗಳು. ಚಿತ್ರರಂಗ ಪ್ರಾರಂಭ ಆದಾಗಿನಿಂದ ಇಲ್ಲಿಯವರೆಗೂ, ಚಿರನೂತನವಾಗಿ ಉಳಿದಿರುವ ಖಾಯಂ ಟ್ರೆಂಡ್‌ ಎಂದರೆ ಅದು ಪ್ರೇಮ ಚಿತ್ರಗಳದ್ದು. ಅದರಲ್ಲೂ ಸಾಮಾಜಿಕ ಚಿತ್ರಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಅದೆಷ್ಟೂ ಚಿತ್ರಗಳು ಬಿಡುಗಡೆಯಾಗಿವೆಯೋ, ಲೆಕ್ಕ ಇಟ್ಟವರಿಲ್ಲ. ಬರೀ ಕನ್ನಡ ಮಾತ್ರವಲ್ಲ, ಎಲ್ಲಾ ಭಾಷೆಯ ಚಿತ್ರಗಳಲ್ಲೂ ದೊಡ್ಡ ಮಟ್ಟದಲ್ಲಿ ಆಳಿರುವುದು ಎಂದರೆ ಅದು

ಪ್ರೇಮಮಯ ಚಿತ್ರಗಳು. ಆ ಮಟ್ಟಿಗೆ ಪ್ರೇಮ ಚಿತ್ರಗಳೆನ್ನುವುದು ಎಲ್ಲಾ ಭಾಷೆಗಳ ಚಿರನೂತನವಾದ ಟ್ರೆಂಡ್‌ ಎಂದರೆ ತಪ್ಪಿಲ್ಲ. ಕನ್ನಡದಲ್ಲೂ ಇದುವರೆಗೂ ಅಂತಹ ಸಾವಿರಾರು ಚಿತ್ರಗಳು ಬಂದಿವೆ. ಪ್ರೇಮ ಕಥೆಗಳನ್ನು, ಚಿತ್ರಗಳನ್ನು ಹೇಗೆ ಹೇಳಿದರೂ ತಪ್ಪಾಗಲಾರದು. ಏಕೆಂದರೆ, ಯಾವುದೇ ಟ್ರೆಂಡ್‌ನ‌ ಚಿತ್ರಗಳು ಒಂದಿಷ್ಟು ದಿನಗಳಾದ ಮೇಲೆ ಸಾಕು ಎನಿಸಬಹುದು. ಆದರೆ, ಪ್ರೇಮ ಕಥೆಗಳಿಗೆ ಮಾತ್ರ ಕೊನೆ ಎಂಬುದೇ ಇಲ್ಲ. ಎಲ್ಲಾ ದಶಕಗಳಲ್ಲೂ, ಎಲ್ಲಾ ತಲೆಮಾರಿನ ಕಲಾವಿದರೂ ಲವ್‌ಸ್ಟೋರಿಗಳಲ್ಲಿ ನಟಿಸದೇ ಇರುವುದು ಬಹಳ ಕಡಿಮೆ.  ಹಾಗಾಗಿ ಪ್ರೇಮಕಥೆಗಳೆನ್ನುವುದು ಕನ್ನಡ ಚಿತ್ರರಂಗದ ಸಾರ್ವಕಾಲಿಕ ಟ್ರೆಂಡ್‌ ಎಂದರೆ ತಪ್ಪಿಲ್ಲ.

ಪ್ರೇಮಕಥೆಗಳು ಯಾಕೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಿರ್ಮಾಣವಾಗುತ್ತವೆ ಮತ್ತು ಜನ ಯಾಕೆ ಪ್ರೇಮ ಕಥೆಗಳನ್ನು ಇಷ್ಟಪಡುತ್ತಾರೆ ಎಂಬ ಕುತೂಹಲ ಸಹಜ. ಏಕೆಂದರೆ, ಇದುವರೆಗೂ ಕನ್ನಡದಲ್ಲೇ ಸಾಕಷ್ಟು ಪ್ರೇಮ ಚಿತ್ರಗಳು ಬಂದಿರಬಹುದು. ಬೇರೆ ಬೇರೆ ಜಾನರ್‌ನ ಚಿತ್ರಗಳಿಗಾದರೂ ಒಂದಿಷ್ಟು ಆಯಾಮಗಳು ಸಿಗಬಹುದು. ಆದರೆ, ಲವ್‌ಸ್ಟೋರಿ ಇರುವ ಚಿತ್ರಗಳಿಗೆ ಆಯಾಮಗಳೂ ಕಡಿಮೆ. ಏಕೆಂದರೆ, ಯಾವುದೇ ಪ್ರೇಮಕಥೆಯಾದರೂ ಪ್ರಮುಖವಾಗಿ ಇಲ್ಲಿರುವುದೇ ಎರಡೇ ಕ್ಲೈಮ್ಯಾಕ್ಸ್‌. ಮೊದಲನೆಯದು ಸುಖಾಂತ್ಯ, ಎರಡನೆಯದು ದುಖಾಂತ್ಯ.

ನೀವು ಇದುವರೆಗೂ ಬಂದ ಯಾವುದೇ ಪ್ರೇಮ ಚಿತ್ರಗಳನ್ನು ತೆಗೆದುಕೊಳ್ಳಿ. ಆ ಚಿತ್ರಕ್ಕೆ ಈ ಎರಡರಲ್ಲಿ ಒಂದು ಕ್ಲೈಮ್ಯಾಕ್ಸ್‌ ಇರುತ್ತದೆ. ಹಾಗಾಗಿ ಪ್ರೇಮಕಥೆಗಳಿಗೆ ಸಾಧ್ಯತೆಗಳು ಬಹಳ ಕಡಿಮೆ. ಚಿತ್ರ ಹೇಗೆ ಶುರುವಾದರೂ, ಮಧ್ಯೆ ಏನೆಲ್ಲಾ ಘಟನೆಗಳಾದರೂ, ಕೊನೆಗೆ ಮುಗಿಯಬೇಕಾಗಿದ್ದು ಇದರಲ್ಲಿಯೇ. ಪ್ರೇಮಕಥೆಗಳಿಗೆ ಇರುವುದು ಎರಡೇ ಸಾಧ್ಯತೆಯಾದರೂ, ಹಲವು ಆಯಾಮಗಳಿವೆ. ಅದೇ ಕಾರಣಕ್ಕೆ ಪ್ರೇಮಕಥೆಗಳು ಯಾವತ್ತೂ ಹಳಸಲು ಎನಿಸುವುದಿಲ್ಲ. ಪ್ರೇಮಕಥೆಯೊಂದನ್ನು ನೀವು ಯಾವುದೇ ಹಿನ್ನೆಲೆಯಲ್ಲಿಟ್ಟು ಬೇಕಾದರೂ ಚಿತ್ರ ಮಾಡಬಹುದು.

Advertisement

ಪ್ರೀತಿಯನ್ನು ಫ್ಯಾಮಿಲಿ ಕಥೆಯಲ್ಲಿಡಬಹುದು. ಆ್ಯಕ್ಷನ್‌ ಚಿತ್ರದಲ್ಲಿಡಬಹುದು, ಕಾಮಿಡಿಯನ್ನಾಗಿ ಮಾಡಬಹುದು, ಹಾರರ್‌ ಆಗಿ ಪರಿವರ್ತಿಸಬಹುದು. ಹಾಗಾಗಿ ಪ್ರೀತಿ ಒಂಥರಾ ನೀರಿದ್ದಂತೆ, ಅದನ್ನು ಯಾವುದಕ್ಕೆ ಬೇಕಾದರೂ ಬೆರೆಸಬಹುದು. ಇದೇ ಕಾರಣದಿಂದ ಚಿತ್ರರಂಗಕ್ಕೆ ಬರುವ ಬಹುತೇಕರು ಮೊದಲು ಲವ್‌ಸ್ಟೋರಿಯನ್ನು ಪ್ರಯತ್ನಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next