Advertisement
ಮಲ್ಲಿಕಾರ್ಜುನ ಖರ್ಗೆ 9 ಬಾರಿ ಶಾಸಕರಾಗಿ ಎರಡು ಬಾರಿ ಸಂಸದರಾಗಿ ಕಲಬುರಗಿ ಅಷ್ಟೇ ಅಲ್ಲದೇ ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದರು. ರಾಜಕೀಯ ಕಾರಣಕ್ಕಾಗಿ ಅವರನ್ನು ವಿರೋಧಿಸುವವರೂ ಅಭಿವೃದ್ಧಿ ವಿಷಯದಲ್ಲಿ ಅವರ ಶ್ರಮಕ್ಕೆ ವಿರೋಧಿಸುವವರ ಸಂಖ್ಯೆ ಕಡಿಮೆ. ಆದರೂ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿರು ವುದು ಅಚ್ಚರಿಯಾದರೂ, ಅದಕ್ಕೆ ಅವರದೇ ಆದ ಕೆಲವು ನಿರ್ಧಾರಗಳೂ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
Related Articles
Advertisement
2013 ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಪ್ರಿಯಾಂಕ್ ಖರ್ಗೆ ಜಯಗಳಿಸಿದ ನಂತರ ಮಗನ ರಾಜಕೀಯ ಏಳಿಗೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಇತರ ನಾಯಕ ರನ್ನು ಕಡೆಗಣಿಸುತ್ತ ಬಂದಿದ್ದು ಕ್ಷೇತ್ರದಲ್ಲಿ ವಿರೋಧಿ ಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿತು. ಸ್ವತಃ ತಮ್ಮ ಆಪ್ತ ಸ್ನೇಹಿತನಾಗಿದ್ದ ಧರ್ಮಸಿಂಗ್ ಅವರ ಪುತ್ರ ಅಜಯ್ ಸಿಂಗ್‌ಗೆ ಮಂತ್ರಿ ಸ್ಥಾನ ಕೊಡಿಸುವ ಬದಲು ತಮ್ಮ ಪುತ್ರನಿಗೆ ಅಧಿಕಾರ ಕೊಡಿಸಿದ್ದೂ ಸಾರ್ವಜ ನಿಕವಾಗಿ ಆಕ್ಷೇಪಗಳು ಕೇಳಿ ಬರುವಂತಾಯಿತು.
ಪ್ರಿಯಾಂಕ್ ವರ್ತನೆ: ಕೇವಲ ಎರಡು ಬಾರಿ ಶಾಸಕರಾಗಿ ಎರಡೂ ಬಾರಿಯೂ ಸಚಿವರಾಗಿದ್ದ ರಿಂದ ಪ್ರಿಯಾಂಕ್ ಖರ್ಗೆ ಅವರ ನಡವಳಿಕೆಯೂ ಜಿಲ್ಲೆಯಲ್ಲಿ ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾ ಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಅತಿ ಯಾದ ದಲಿತ ಪ್ರೇಮ, ಮೇಲ್ವರ್ಗದವರ ಮೇಲಿನ ತಿರಸ್ಕಾರ ಭಾವನೆ ಕಾಂಗ್ರೆಸ್‌ನ ಮೇಲ್ವ ರ್ಗದ ಹಿರಿಯ ನಾಯಕರ ಬೇಸರಕ್ಕೂ ಕಾರಣವಾ ಯಿತು ಅಲ್ಲದೇ ಯುವ ಸಮುದಾಯದ ತಿರಸ್ಕಾ ರಕ್ಕೂ ಕಾರಣವಾ ಯಿತು ಎಂಬ ಮಾತುಗಳು ಕೇಳಿ ಬಂದವು. ಅಲ್ಲದೇ ಆಂತರಿಕ ಸತ್ಯ ಅರಿತಿದ್ದ ಕಾಂಗ್ರೆಸ್ ಕೆಲವು ನಾಯ ಕರು ಖರ್ಗೆಯವರಿಗೆ ಕ್ಷೇತ್ರ ಬದಲಾವಣೆಗೂ ಸಲಹೆ ನೀಡಿದ್ದರು. ಆದರೂ, ಅವರು ಆಪ್ತರ ಸಲಹೆ ಪುತ್ರ ವ್ಯಾಮೋಹದ ವಿರುದ್ಧ ಒಗ್ಗೂಡಿದ ವೈರಿ ಪಡೆಯನ್ನು ಗಂಭೀರವಾಗಿ ಪರಿಗಣಿಸದೇ ಚುನಾ ವಣೆ ಎದುರಿಸಿದ್ದೇ ಅವರಿಗೆ ಮುಳುವಾಯಿತು ಎಂಬ ಮಾತುಗಳು ಕೇಳಿ ಬರುತ್ತಿವೆ.
ಆಂತರಿಕ ಮುನಿಸು ಮುನಿಯಪ್ಪಗೆ ಮುಳುವುಸತತ ಆರು ಬಾರಿ ಗೆದ್ದು ದಾಖಲೆ ಬರೆದಿದ್ದ ಕೆ.ಎಚ್. ಮುನಿಯಪ್ಪ ಕೋಲಾರ ಕ್ಷೇತ್ರದಲ್ಲಿ ಪರಿಚಯವೇ ಇಲ್ಲದ ಎಸ್.ಮುನಿ ಸ್ವಾಮಿ ವಿರುದ್ಧ ಸೋಲಲು ಸ್ವಪಕ್ಷೀ ಯರ ಒಳ ಹೊಡೆತವೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಸೇರಿದಂತೆ ಐವರು ಶಾಸಕರ ವಿರೋಧ ಇದ್ದರೂ, ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದ ಕೆ.ಎಚ್.ಮುನಿಯ ಪ್ಪಗೆ ಈ ಬಾರಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿ ಕೊಂಡಿರುವುದೇ ಮುಳುವಾದಂತೆ ಕಾಣಿ ಸುತ್ತಿದೆ. ಜಿಲ್ಲೆಯಲ್ಲಿ ಜೆಡಿಎಸ್ ಜೊತೆಗೇ ನೇರ ಹೋರಾಟ ನಡೆಸಿದ್ದ ಕಾಂಗ್ರೆಸ್, ಈ ಬಾರಿ ಮೈತ್ರಿಯಿಂದ ಎರಡೂ ಪಕ್ಷಗಳ ನಾಯಕರ ಆಂತರಿಕ ಮುನಿಸು ಮುನಿ ಯಪ್ಪ ಸೋಲಿಗೆ ಕಾರಣವಾಯಿತು ಎಂಬ ಮಾತುಗಳು ಕೇಳಿ ಬರುತ್ತಿದೆ. ಮೊಯ್ಲಿ ಸೋಲಿಗೆ ಮೈತ್ರಿ ಕಾರಣ
ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ಕೂಡ ಎತ್ತಿನಹೊಳೆ ಯೋಜನೆ ಜಾರಿಗೊಳಿಸುವ ಭರವಸೆ ನೀಡಿ, ಜೆಡಿಎಸ್ ನಾಯಕರ ಪರೋಕ್ಷ ಬೆಂಬಲದಿಂದಲೇ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದರು. ಆದರೆ, ಈ ಬಾರಿ ಜೆಡಿಎಸ್ ಜೊತೆಗಿನ ಮೈತ್ರಿಯೇ ಅವ ರಿಗೂ ಮುಳುವಾಗಿದ್ದು, ಜೆಡಿಎಸ್ ಸ್ಪರ್ಧೆ ಇಲ್ಲದಿರುವುದರಿಂದ ಒಕ್ಕಲಿಗ ಸಮು ದಾಯ ಸಂಪೂರ್ಣ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೆಗೌಡರ ಬೆಂಬಲಕ್ಕೆ ನಿಂತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಶಂಕರ ಪಾಗೋಜಿ