Advertisement

Love Lee Movie: ನವನಟಿಯರ ಕಣ್ಣಲ್ಲಿ ‘ಲವ್‌ ಲೀ’ ನಿರೀಕ್ಷೆ

03:07 PM Jun 11, 2024 | Team Udayavani |

ಯಾವುದೇ ಒಂದು ಸಿನಿಮಾ ಬಿಡುಗಡೆಯಾಗುತ್ತದೆ ಎಂದಾಗ ಆ ತಂಡದ ಸದಸ್ಯರು ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಾರೆ. ಅದರಲ್ಲೂ ನವ ಕಲಾವಿದರ ಎಕ್ಸೈಟ್‌ಮೆಂಟ್‌ ಸ್ವಲ್ಪ ಹೆಚ್ಚೇ ಇರುತ್ತದೆ. ಈಗ “ಲವ್‌ ಲೀ’ ಚಿತ್ರ ಇಂತಹ ಒಂದು ನಿರೀಕ್ಷೆಗೆ ಕಾರಣವಾಗಿದೆ. ಮುಖ್ಯವಾಗಿ ಚಿತ್ರದ ಇಬ್ಬರು ನಟಿಯರಿಬ್ಬರು ಈ ಚಿತ್ರದ ಮೇಲೆ ಭರ್ಜರಿ ನಿರೀಕ್ಷೆ ಇಟ್ಟಿದ್ದಾರೆ.

Advertisement

ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸ್ಟೆಫಿ ಪಟೇಲ್‌ ಹಾಗೂ ಸಮೀಕ್ಷಾ “ಲವ್‌ ಲೀ’ ಚಿತ್ರ ತಮಗೊಂದು ಬ್ರೇಕ್‌ ಕೊಡುತ್ತೆ ಎಂದು ನಂಬಿದ್ದಾರೆ.

ಪರಭಾಷಾ ನಟಿ ಸ್ಟೆಫಿ ಪಟೇಲ್‌ “ಲವ್‌ ಲೀ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದಲ್ಲಿ ಈಕೆಯ ಮೊದಲ ಚಿತ್ರವಿದು. ಈಗಾಗಲೇ ಟ್ರೇಲರ್‌, ಹಾಡುಗಳು ಹಿಟ್‌ ಆಗುವ ಮೂಲಕ ಈ ಚಿತ್ರದ ಮೇಲೆ ಸ್ಟೆಫಿ ನಿರೀಕ್ಷೆ ಇಟ್ಟಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಕನ್ನಡದ ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಇರಾದೆ ಇದೆ. ಅದಕ್ಕೆ ಪೂರಕವಾಗಿ ಕನ್ನಡವನ್ನು ಚೆನ್ನಾಗಿ ಕಲಿತಿದ್ದಾರೆ. “ನಾನು ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದೇನೆ. ಒಳ್ಳೆಯ ತಂಡ, ಪಾತ್ರ ಸಿಕ್ಕಿದೆ. ಈ ಚಿತ್ರದ ಮೂಲಕ ನನಗೆ ಕನ್ನಡದಲ್ಲೂ ಬ್ರೇಕ್‌ ಸಿಗುವ ನಿರೀಕ್ಷೆ ಇದೆ. ಇಲ್ಲಿವರೆಗೆ ನಾನು ಮಾಡಿದ ಪಾತ್ರಗಳಲ್ಲಿ “ಲವ್‌ ಲೀ’ ತುಂಬಾ ವಿಭಿನ್ನ ಪಾತ್ರ’ ಎನ್ನುವುದು ಸ್ಟೆಫಿ ಮಾತು.

ಇನ್ನು ಚಿತ್ರದಲ್ಲಿ ಸಮೀಕ್ಷಾ ಎಂಬ ನವನಟಿ ಕೂಡಾ ನಟಿಸಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ಬಿಝಿಯಾಗಿರುವ ಸಮೀಕ್ಷಾಗೆ ಈಗ “ಲವ್‌ ಲೀ’ ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ಸಹಜವಾಗಿಯೇ ಈ ಚಿತ್ರದ ಮೇಲೆ ಸಮೀಕ್ಷಾ ಕೂಡಾ ನಿರೀಕ್ಷೆ ಇಟ್ಟಿದ್ದಾರೆ. “ಈ ಚಿತ್ರದಲ್ಲಿ ಸ್ವೀಟ್‌ ಅಂಡ್‌ ಶಾರ್ಟ್‌ ಎಂಬಂತೆ ನನ್ನ ಪಾತ್ರವಿದೆ. ಆದರೆ, ಸಿನಿಮಾಕ್ಕೆ ಟ್ವಿಸ್ಟ್‌ ಕೊಡುವ ಪಾತ್ರ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.

ಅಂದಹಾಗೆ, ವಸಿಷ್ಠ ಸಿಂಹ ಈ ಚಿತ್ರದ ನಾಯಕ. “ಅಭುವನಸ ಕ್ರಿಯೇಶನ್ಸ್‌’ ಬ್ಯಾನರಿನಲ್ಲಿ ರವೀಂದ್ರ ಕುಮಾರ್‌ ಬಂಡವಾಳ ಹೂಡಿ ನಿರ್ಮಿಸುತ್ತಿರುವ “ಲವ್‌ ಲಿ’ ಸಿನಿಮಾಕ್ಕೆ ಯುವ ಪ್ರತಿಭೆ ಚೇತನ್‌ ಕೇಶವ್‌ ನಿರ್ದೇಶನ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next