Advertisement
ಗುರುವಾರ ಉಡುಪಿಗೆ ಆಗಮಿಸಿದ್ದ ಸಚಿವರು ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಈಗಲೂಮೊಘಲ್ ಯುಗದಲ್ಲಿ ! “ಮೊಘಲರ ಕಾಲದಲ್ಲೂ ಅಂತರ್‌ಧರ್ಮೀಯ ವಿವಾಹ ನಡೆಯುತ್ತಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಾಯಶಃ ಅವರು ಮೊಘಲ್ ಯುಗದಲ್ಲಿ ಬದುಕುತ್ತಿರಬೇಕು ಎಂದು ಲೇವಡಿ ಮಾಡಿದರು.
ಮರಾಠ ಅಭಿವೃದ್ಧಿ ನಿಗಮಕ್ಕೆ ವಿರೋಧ ವ್ಯಕ್ತಪಡಿಸಿ ಡಿ. 5ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ಬಗ್ಗೆ ಮಾತನಾಡಿದ ಅವರು ಡಿ. 5ರಂದು ಬಂದ್ ಇಲ್ಲ. ಬಂದ್ ಮಾಡಿದರೆ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ. ಬಂದ್ ಮಾಡಬಾರದೆಂದು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ಆ ದಿನ ಟೋಲ್‌ಗಳಲ್ಲಿಯೂ ಭದ್ರತೆ ನಿಯೋಜನೆ ಮಾಡಲಿದ್ದೇವೆ ಎಂದರು. ಶಾಲಾರಂಭದ ಬಗ್ಗೆ ಚರ್ಚೆ
ಶಾಲೆ ಪುನರಾರಂಭ ಮಾಡುವ ನಿರ್ಧಾರ ಕೋವಿಡ್ ನಿಯಂತ್ರಣ ಪ್ರಮಾಣವನ್ನು ಆಧರಿಸಿದೆ. ಶಿಕ್ಷಣ ಸಚಿವರು ಕಾಲ ಕಾಲಕ್ಕೆ ಪೋಷಕರು, ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತಿ¨ªಾರೆ. ಶಾಲಾರಂಭದ ಕುರಿತು ಪರ- ವಿರೋಧವಿದೆ. ಸೂಕ್ತ ಸಮಯದಲ್ಲಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.