Advertisement
ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ನಗರ ಪೊಲೀಸರನ್ನು ಸಂಪರ್ಕಿಸಿರುವ ಯುವತಿ, ‘ನಾನು ಲವ್ ಜಿಹಾದ್‌ಗೆ ಒಳಗಾಗಿದ್ದೇನೆ. ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ಮತ್ತು ಒತ್ತಾಯಪೂರ್ವಕ ಮತಾಂತರ ಮಾಡಲಾಗಿದೆ. ನನಗೆ ಕೂಡಲೇ ಬೆಂಗಳೂರು ಪೊಲೀಸರ ರಕ್ಷಣೆ ಕೊಡಿಸಿ. ನನ್ನ ಪ್ರಾಣ ಅಪಾಯದಲ್ಲಿದೆ’ ಎಂದು ನಗರ ಪೊಲೀಸರು, ನಗರ ಪೊಲೀಸ್ ಆಯುಕ್ತರು, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಪ್ರಧಾನ ಮಂತ್ರಿ ಕಚೇರಿಗೆ ಟ್ಯಾಗ್ ಮಾಡಿದ್ದಾರೆ.
Related Articles
Advertisement
ಏನಿದು ಲವ್ ಜಿಹಾದ್?: ಯುವತಿ ಟ್ವಿಟರ್‌ನಲ್ಲಿ ಹೇಳಿಕೊಂಡಂತೆ, ಕಾಶ್ಮೀರ ಮೂಲದ ಯುವಕನೊಬ್ಬ ಫೇಸ್‌ಬುಕ್ ನಲ್ಲಿ ಪರಿಚಯವಾಗಿದ್ದ. ಬಳಿಕ ಆತ್ಮೀಯತೆ ಬೆಳೆದು, ಆತನಿಗೆ ಹಣ ಕೂಡ ನೀಡಿದ್ದೇನೆ. ಆದರೆ, ಇದೀಗ ಹಣ ವಾಪಸ್ ಕೇಳಿದಾಗ ಬೆದರಿಕೆ ಹಾಕುತ್ತಿದ್ದಾನೆ. ಈ ಮಧ್ಯೆ ಬೆಂಗಳೂರಿಗೆ ಬಂದು ಭೇಟಿಯಾಗಿದ್ದ ಯುವಕ, ಮದುವೆಯಾಗುವುದಾಗಿ ನಂಬಿಸಿ ತನ್ನ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಈ ನಡುವೆ ಮದುವೆಯಾಗಬೇಕೆಂದಾದರೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಬೇಕು ಎಂದು ಬಲವಂತ ಮಾಡಿದ್ದಾನೆ. ಯುವತಿಗೆ ಮತಾಂತರವಾಗುವುದು ಇಷ್ಟವಿಲ್ಲದಿದ್ದರೂ ಬೆದರಿಸಿ ಧರ್ಮ ಬದಲಾವಣೆ ಮಾಡಲಾಗಿದೆ. ಆದರೂ, ಇದೀಗ ಮದುವೆಗೆ ಒಪ್ಪುತ್ತಿಲ್ಲ. ಹೀಗಾಗಿ ಆತನನ ವಿರುದ್ಧ ಕ್ರಮಕೈಗೊಳ್ಳುವಂತೆ ಯುವತಿ ಕೋರಿದ್ದಾಳೆ.