Advertisement

ಲವ್ ಜಿಹಾದ್ ತಡೆಗೆ ರಾಜ್ಯದಲ್ಲಿ ಶೀಘ್ರ ಕಾನೂನು ಜಾರಿ : ಬಸವರಾಜ್ ಬೊಮ್ಮಾಯಿ

12:18 PM Nov 04, 2020 | sudhir |

ಬೆಂಗಳೂರು : ಲವ್ ಜಿಹಾದ್ ತಡೆಗೆ ರಾಜ್ಯದಲ್ಲಿ ಶೀಘ್ರ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸಿದ್ದು ಬೇರೆ ಬೇರೆ ರಾಜ್ಯಗಳ ನಿರ್ಧಾರಗಳ ಆಧಾರದ ಮೇಲೆ ನಾವು ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Advertisement

ಇತ್ತೀಚಿನ ದಿನಗಳಲ್ಲಿ ಮತಾಂತರ ಮಾಡಲು ಕೆಲವು ಶಕ್ತಿಗಳು ಸಂಘಟಿತವಾಗಿ ಯುವಕರನ್ನು ದಾರಿತಪ್ಪಿಸುವ ಕಾರ್ಯಾಚರಣೆ ಮಾಡ್ತಿವೆ. ಲವ್ ಜಿಹಾದ್ ಹೆಸರಿನಿಂದ ಪರಿವರ್ತನೆ ಸರಿಯಲ್ಲ ಅಂತಾ ಅಹಮದಾಬಾದ್ ಹೈಕೋರ್ಟ್ ಕೂಡಾ ಹೇಳಿದೆ ಬಳಿಕ ದೇಶದಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ ಈಗಿರುವ ಕಾನೂನು ಅಲ್ಲದೇ ವಿಶೇಷ ಕಾನೂನು ಆಗಬೇಕು ಅಂತಾ ಕೆಲವರು ಚಿಂತನೆ ಆರಂಭಿಸಿದ್ದಾರೆ ಕೆಲವು ರಾಜ್ಯಗಳು ಘೋಷಣೆ ಕೂಡಾ ಮಾಡಿವೆ ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ರಚನೆಯಾಗಬೇಕೆಂಬ ಚಿಂತನೆ ಕೂಡಾ ನಮ್ಮ ಸರ್ಕಾರದಲ್ಲಿ ಇದೆ. ಬೇರೆ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ ಕಾನೂನು ತಜ್ಞರ ಜೊತೆ ಕೂಡಾ ಚರ್ಚೆ ಮಾಡುತ್ತೇವೆ ಎಲ್ಲಾ ಸಲಹೆ ಸೂಚನೆ ಆಧಾರದಲ್ಲಿ ಲವ್ ಜಿಹಾದ್ ತಡೆಗೆ ಕಾನೂನು ಪ್ರಕ್ರಿಯೆಗೆ ಸರ್ಕಾರ ಮುಂದುವರಿಯಲಿದೆ ಎಂದರು.

ಇದನ್ನೂ ಓದಿ:ಸಿಎಂ ನಕಲಿ ಖಾತೆ ಸೃಷ್ಟಿಸಿ ಮಾಹೆ ಕುಲಸಚಿವರಿಗೆ ಮೇಲ್! ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ದೇಶದಲ್ಲಿ ಎಂಟು ಹತ್ತು ವರ್ಷಗಳಿಂದ ಈ ಚರ್ಚೆ ಇದೆ ಪ್ರತೀ ಪ್ರಕರಣ ಆದಾಗಲೂ ಇದು ಚರ್ಚೆಗೆ ಬರುತ್ತದೆ ಈಗ ಹೈಕೋರ್ಟ್ ವ್ಯಾಖ್ಯಾನದ ಬಳಿಕ ಕಾನೂನು ಪ್ರಕ್ರಿಯೆಯ ಚಿಂತನೆ ಆರಂಭವಾಗಿದೆ ಬೇರೆ ರಾಜ್ಯಗಳಲ್ಲಿ ಏನೇನು ಮಾಡುತ್ತಾರೆ ಅಂತಾ ನೋಡಿಕೊಂಡು ನಂತರ ನಾವು ನಮ್ಮ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next