Advertisement

ಅರೆಘಳಿಗೆಯೂ ಬಿಟ್ಟಿರಲಾಗದ ಪ್ರೀತಿ…

08:01 PM Sep 30, 2020 | Suhan S |

ಪ್ರೀತಿಗೆ ಇಪ್ಪತ್ತೇಳು ವರ್ಷ. ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಗ್ಯಾಸ್ಟ್ರಿಕ್‌ ಸಮಸ್ಯೆ, ಹೊಟ್ಟೆನೋವು ಮತ್ತು ವಾಂತಿಯ ಸಮಸ್ಯೆ ಅವಳನ್ನುಕಂಗಾಲು ಮಾಡಿತ್ತು. ಅದಕ್ಕಾಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಳು. ಇತ್ತೀಚೆಗೆ, ತಡೆಯಲಾರದ ಹೊಟ್ಟೆನೋವು ಬಂದುದರಿಂದ, ಆಸ್ಪತ್ರೆಗೆ ದಾಖಲಾಗಿ ಎಲ್ಲಾ ತಪಾಸಣೆ ಮಾಡಿದಾಗ, ಯಾವುದೇ ರೀತಿಯ ಸೋಂಕು ಇರಲಿಲ್ಲ. ಆದರೂ ಊಟ ಸೇರದೆ ಬಹಳ ನಿಶ್ಯಕ್ತಿ ಹೊಂದಿದ್ದಳು. ಆಗ ವೈದ್ಯರು ಮಾನಸಿಕ ಒತ್ತಡದ ಪರೀಕ್ಷೆಗೆ ನನ್ನ ಬಳಿ ಕಳಿಸಿದ್ದರು.

Advertisement

ಪ್ರೀತಿ ಸ್ನಾತಕೋತ್ತರ ಪದವೀಧರೆ,ಕೆಲಸದಲ್ಲಿದ್ದಳು. ಮನೆಯಲ್ಲಿ ಯಾವುದಕ್ಕೂಕೊರತೆಯಿಲ್ಲ.ಕೊರತೆ ಇಲ್ಲದಿರುವುದೇಕೆಲವರಿಗೆ ಸಮಸ್ಯೆಯಾಗುತ್ತದೇನೋ. ಒಂದು ಚಿಕ್ಕಕೊರತೆ ಜೀವನಕ್ಕೆ ಹರಿವು ನೀಡುತ್ತದೆ. ಅಸಲಿಗೆ ಅವಳು ಹಣಕ್ಕಾಗಿ ಕೆಲಸಕ್ಕೆ ಹೋಗಬೇಕಾಗಿರಲಿಲ್ಲ. ಅವಳು ಕೇಳಿದೆಲ್ಲಾ ಕ್ಷಣಾರ್ಧದಲ್ಲಿ ಸಿಗುತ್ತಿತ್ತು. ಒಂದು ಜೊತೆ ಬಟ್ಟೆಕೇಳಿದರೆ ಎರಡು ಜೊತೆ ಕೊಡಿಸುತ್ತಿದ್ದರು. ರಾತ್ರಿ ಐಸ್‌ಕ್ರೀಮ್‌ ತಿನ್ನಬೇಕೆನಿಸಿದರೆ, ಎಲ್ಲರೂ ಖುಷಿಯಾಗಿ ಹೊರಡುತ್ತಿದ್ದರು. ಅವಳು ಹಣಕ್ಕಾಗಿ ಅಲ್ಲ, ಆತ್ಮ ತೃಪ್ತಿಗೆಕೆಲಸ ಮಾಡುತ್ತಿದ್ದಳು ಕೆಲವು ತಿಂಗಳಿನಿಂದ, ಅವಳ ಒಪ್ಪಿಗೆ ಪಡೆದೇ ಮನೆಯಲ್ಲಿ ಮದುವೆಗಾಗಿ ಹುಡುಗನನ್ನು ಹುಡುಕುತ್ತಿದ್ದಾರೆ. ಮನೋದೈಹಿಕ ಬೇನೆಗೆಕಾರಣ ಹಠಮಾರಿ ಸ್ವಭಾವವೂಕಾರಣವಾಗುತ್ತದೆ. ಆದರೆ ಪ್ರೀತಿಯಲ್ಲಿ ಛಲವಿತ್ತು. ಹಠವಿರಲಿಲ್ಲ. ಎಷ್ಟು ಒಳ್ಳೆಯ ಹುಡುಗಿ ಈ ರೀತಿ ನರಳುತ್ತಿದ್ದಾಳಲ್ಲ ಎಂದು ಎಲ್ಲರಿಗೂ ಬೇಜಾರಾಗಿತ್ತು. ಆಪ್ತ ಸಮಾಲೋಚನೆಯ ಸಂದರ್ಭದಲ್ಲಿ,ಕಡೆಗೂ ಪ್ರೀತಿಯ ಹೊಟ್ಟೆನೋವಿಗೆ ಕಾರಣವೇನೆಂದು ಗೊತ್ತಾಯಿತು.

ಫೆಬ್ರವರಿಯಲ್ಲಿ ಪ್ರೀತಿಯ ತಾಯಿ ತೀರಿಕೊಂಡಿದ್ದರು. ಆ ನಂತರದಲ್ಲಿ ಪ್ರೀತಿಯ ತಂದೆ ಮಗಳನ್ನು ಬಹಳ ಹಚ್ಚಿಕೊಂಡಿದ್ದರು. ಒಂದುಕ್ಷಣವೂ ಬಿಟ್ಟಿರಲಾರರು. ಮಗಳು ಅಂದರೆ ಪ್ರಾಣಕ್ಕೂ ಮಿಗಿಲು. ಅವಳ ಪ್ರತಿ ಸಾಧನೆಯಲ್ಲಿ ಅವರ ಪ್ರೇರಣೆ ಇತ್ತು. ಮಗಳಿಗೆ ವರನನ್ನು ಹುಡುಕವ ಪ್ರಯತ್ನದಲ್ಲಿದ್ದರೂ, ಮಗಳ ಅಗಲಿಕೆ ಅವರಿಗೆ ತಾಯಿಯ ಸಾವಿನಷ್ಟೇ ನೋವು ಕೊಡುತ್ತಿತ್ತು. ಪ್ರೀತಿಗೆ ಮದುವೆಯಾಗಲು ಇಷ್ಟ. ಆದರೆ, ತಾನು ಬೇರೊಂದು ಮನೆಗೆ ಹೋದರೆ, ಅದರಿಂದ ತಂದೆ ನೋವು ಅನುಭವಿಸುತ್ತಾರೆ ಎಂಬ ಸಂಗತಿಯೇ ಅವಳ ಮನಸ್ಸನ್ನು ಕೊರೆಯತೊಡಗಿತು.

ಈ ಸಂದರ್ಭದಲ್ಲಿಯೇ, ಅವಳ ಬಾಲ್ಯ ಸ್ನೇಹಿತೆತೋರಿಸಿದ ಒಂದು ಹುಡುಗನ ಬಗ್ಗೆ ಒಳ್ಳೆಯ  ಅಭಿಪ್ರಾಯವಿದ್ದರೂ ಅಪ್ಪನ ಬಳಿ ಪ್ರಸ್ತಾಪ ಮಾಡಲು ಭಯವಾಗಿ ಅರೋಗ್ಯ ಹದಗೆಟ್ಟಿತ್ತು. ತಂದೆಯನ್ನುಕರೆದು ಮಾತನಾಡಿದೆ. ಅವರ ಪ್ರೀತಿ ಮಗಳಿಗೆ ಮುಳುವಾಗಿರುವುದು ಅವರಿಗೆ ಅರ್ಥವಾಯಿತು. ಮಗಳನ್ನು ಬಹಳ ಹಚ್ಚಿಕೊಳ್ಳಬೇಡಿ ಎಂದು ಹೆಂಡತಿಯೂ ಹೇಳಿದ್ದಳು. ಆಗ ನಾನು ನಿರ್ಲಕ್ಷ ಮಾಡಿದ್ದೆ. ನೀವು ಹೇಳಿದ ಮೇಲೆ ಮನಸ್ಸಿಗೆ ನಾಟಿತು ಮೇಡಂ ಎಂದರು.  ಮದುವೆಯ ನಂತರ ಮಗಳು- ಅಳಿಯನ ಮನೆಗೆ ಹೋಗುವುದಾಗಿ ತಿಳಿಸಿದರು. ಈಗ, ಅಪ್ಪಾ, ಐ ಲವ್‌ ಯು ಪಾ ಎನ್ನುವ ಸರದಿ ಪ್ರೀತಿಯದ್ದು. ­

 

Advertisement

-ಡಾ. ಶುಭಾ ಮಧುಸೂದನ್‌ ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next