Advertisement
ತಾನು ಪ್ರೀತಿಸಿದವಳು/ನು ನನ್ನನ್ನು ಮದುವೆಯಾದಗೇ, ಬೇರೆ ಯಾರನ್ನೋ ವಿವಾಹವಾದರೆ/ ತನ್ನನ್ನು ತೊರೆದು ಬೇರೆ ಯಾರನ್ನೂ ಬಯಸಿದರೆ ಅದರಿಂದ ಆಗುವ ಸಂಕಟ ನೊಂದ ಹೃದಯಕ್ಕೆ ಮಾತ್ರ ಗೊತ್ತು. ಆ ದು:ಖವನ್ನು ಇನ್ಯಾವುದೋ ರೂಪದಲ್ಲಿ ಹೊರ ಪ್ರಪಂಚಕ್ಕೆ ಹೇಳುವ ಅವರ ತುಡಿತ ನಾನಾ ವೇಗದಲ್ಲಿ, ಹಲವು ರೂಪದಲ್ಲಿರುತ್ತದೆ. ಅದು ಅರ್ಥವಾಗುತ್ತದೆ. ಒಮ್ಮೆ ಪ್ರೀತಿಸಿ ಸೋತವನು/ವಳು ಮತ್ತೆಂದೂ ಪ್ರೀತಿಸಲಾರೆ ಎಂಬುದು ಆ ಕ್ಷಣದ ಮಾತಾದರೆ, ಅದನ್ನು ದೀರ್ಘಕಾಲ ಉಳಿಸಿಕೊಂಡವರೂ ಇದ್ದಾರೆ. ಆದರೆ ಕೆಲವರು ಮತ್ತೆ ತನ್ನ ಪ್ರೀತಿಯ ಹುಡುಕಾಟದಲ್ಲಿರುತ್ತಾರೆ. ಇವೆಲ್ಲದರ ನಡುವೆ ಪ್ರೀತಿಯ ಹಾಡುಗಳು ಕೇಳುತ್ತಿದ್ದ ಕಿವಿಗಳು ಇದ್ದಕ್ಕಿಂದಂತೆ “ಪ್ಯಾಥೋಸ್’ ಗಳತ್ತ ಹೊರಲಿರುತ್ತದೆ.
Related Articles
Advertisement
ಪ್ರೀತಿ ಹಸಿರಾಗಿರುವ ವೇಳೆ ತಾವಿಬ್ಬರು ನಡೆದಾಡಿದ ಜಾಗಗಳಿಗೆ ಮತ್ತೆ ಒಂಟಿಯಾಗಿ/ಖಾಲಿ ಹೃದಯದೊಂದಿಗೆ ತೆರಳುವ “ದುಸ್ಥಿತಿ’ ಬಂದರೇ ನೆನೆದು ಯಾತನೆ ಪಡುವುದು ಮಾಮೂಲಿ. ಮತ್ತೆ ಎಂದೂ ಪ್ರೀತಿಯ ಸಹವಾಸ ಬೇಡಪೆ³ ಎಂದರೂ ಮನಸ್ಸು ಒಪ್ಪಬೇಕಲ್ವೆ. ಈ ಅಧ್ಯಯನವು ಅದನ್ನೇ ಹೇಳುತ್ತಿದೆ. ಇದರ ಪ್ರಕಾರ ಅವಳ/ನ ಗುಣವುಳ್ಳವರು ಮತ್ತೆ ನನಗೆ ಸಿಗದೇ ಇರಲಿ ಎಂದುಕೊಂಡಿರುತ್ತಾರಂತೆ. ಆದರೆ ವಿಚಿತ್ರ ಎಂದರೆ ಸ್ವಲ್ಪ ಸಮಯದ ಬಳಿಕ ಅವಳ/ನ ದೇ ಒಳ್ಳೆಯ ಗುಣ/ಕಾಳಜಿ ಇರುವ ಹುಡುಗಿ/ಗ ನನಗೆ ಪ್ರಾಪ್ತಿಸಲಿ ಎಂದು ಅಭಿಲಾಷೆ ಪಡುತ್ತಿರುತ್ತಾನೆ/ಳೆ ಎಂದು ವರದಿ ಉಲ್ಲೇಖೀಸಿದೆ. ನಾವು ಪೂರ್ಣ ಪ್ರಮಾಣದಲ್ಲಿ ಬಯಸದಿದ್ದರೂ, ಹೃದಯ ಮಾತ್ರ ಒಂಟಿಯಾಗಿರಲು ಇಚ್ಚಿಸದೇ ಮತ್ತೆ ಮಾಜಿ ಪ್ರೇಮಿಯದ್ದೇ ಗುಣವುಳ್ಳ ಪ್ರೀತಿಯನ್ನು ಸಂಪಾದಿಸುತ್ತದೆ ಎಂದಿದೆ.
ಈ ವರದಿಗೆ “ಯೆಸ್’ ಎಂದ ಪ್ರೇಮಿಗಳು
ಒಟ್ಟು 332 ಜೋಡಿಗಳನ್ನು ಸಮೀಕ್ಷೆಗೆ ಒಳಪಡಿಸಿದ್ದು, ಈಗ ಇರುವ ಪ್ರೇಮಿಯನ್ನು ನಿಮ್ಮ ಮಾಜಿ ಪ್ರೇಮಿಯ ಗುಣಲಕ್ಷಣಗಳೊಂದಿಗೆ ಹೋಲಿಕೆ ಮಾಡಿ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರಂತೆ. ಈ ವೇಳೆ ಹಳೆ ಪ್ರೇಮಿಯ ಗುಣಗಳು ಹೊಸ ಲವರ್ ಅಲ್ಲಿಯೂ ಇದ್ದು, ಪುನ: ಅಂತಹ ವ್ಯಕ್ತಿತ್ವದವರೊಂದಿಗೆ ಪ್ರೇಮಾಂಕುರವಾಗುತ್ತಿದೆ ಎಂಬುದನ್ನು ಅಷ್ಟೂ ಪ್ರೇಮಿಗಳು ಹಂಚಿಕೊಂಡಿದ್ದಾರೆ ಎಂಬ ವರದಿಯನ್ನು ಉಲ್ಲೇಖೀಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಅಂತೂ ಉಪಯೋಗಕ್ಕೆ ಬಂತು ಹಳೆ ಅನುಭವ
ಮಾಜಿ ಪ್ರೇಮಿಯಲ್ಲಿದ್ದ ಗುಣಗಳೇ ಹೊಸ ಲವರ್ ಅಲ್ಲಿ ಇದ್ದರೆ ಒಂದು ಉಪಯೋಗವಿದೆ ಎಂದು ಮಾಜಿ ಒಡೆದ ಹೃದಯ ಹೇಳುತ್ತವೆ. ಅದೇನಪ್ಪಾ ಎಂದರೆ ಪ್ರೀತಿಯಲ್ಲಿ ಕೋಪ-ಪಾಪ ಎಲ್ಲಾ ಸಹಜವೇ. ಅವರು ಎಂದಾದರೂ ಕೋಪಿಸಿಕೊಂಡಾಗ ಹೇಗೆ ಅವರನ್ನು ಒಲೈಸಬೇಕು, ಕೋಪವನ್ನು ತಣಿಸಬೇಕು ಎಂಬುದು ಇಬ್ಬರಿಗೂ ಇದ್ದ ಅನುಭವ ಇಲ್ಲಿ ಉಪಯೋಗಕ್ಕೆ ಬರುತ್ತದೆ ಎಂದಿದೆ ವರದಿ. ಮಾತ್ರವಲ್ಲದೇ ಹುಡುಗ/ಗಿಯ ಆಸೆಗಳು, ಬಯಕೆಗಳು, ಇಷ್ಟಾರ್ಥಗಳನ್ನು ಪೂರೈಸಲೂ ಹಳೆಯ ಅನುಭವ ನೆರವಿಗೆ ಬರುತ್ತವೆ ಎಂಬ ವಿಷಯವನ್ನು ಈ ವರದಿ ಗುಟ್ಟಾಗಿ ಇಟ್ಟಿಲ್ಲ.