Advertisement

ಹುಡುಗಿ ವಿಚಾರಕ್ಕೆ ಜಗಳ: ಕತ್ತು ಸೀಳಿ ರೌಡಿಶೀಟರ್‌ ಬರ್ಬರ ಹತ್ಯೆ 

10:19 AM Nov 24, 2018 | |

ಬೆಂಗಳೂರು: ಬ್ಯಾಟರಾಯನಪುರದ ಪಂತರಪಾಳ್ಯದಲ್ಲಿ  ರೌಡಿಶೀಟರ್‌ವೊಬ್ಬನನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. 

Advertisement

ಮಂಜುನಾಥ್‌ ಅಲಿಯಾಸ್‌ ರೋಮಿಯೋ ಎಂಬಾತ ಹತ್ಯೆಗೀಡಾದವನು. ಮುರುಗೇಶ್‌ ಎಂಬಾತ ಕೃತ್ಯ  ಎಸಗಿ ಪರಾರಿಯಾಗಿದ್ದಾನೆ. 

ಹುಡುಗಿ ವಿಚಾರದಲ್ಲಿ ಈ ಹಿಂದೆ ಇಬ್ಬರಿಗೆ ಹೊಡೆದಾಟವಾಗಿದ್ದು, ಇದೇ ದ್ವೇಷದಿಂದ ಈ ಹತ್ಯೆ ನಡೆಸಲಾಗಿದೆ ಎಂದು ಹೇಳಲಾಗಿದೆ. 

ಬ್ಯಾಟಾರಾಯನಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಮಂಜುನಾಥ್‌ಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next