Advertisement

ಪರಭಾಷೆಯತ್ತ ಲವ್‌ 360: ಹೊಸಬರ ಸಿನಿಮಾ ಸೂಪರ್‌ ಹಿಟ್‌

11:51 AM Aug 30, 2022 | Team Udayavani |

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಶಶಾಂಕ್‌ ನಿರ್ದೇಶನದ “ಲವ್‌ 360′ ಸಿನಿಮಾ ನಿಧಾನವಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ.

Advertisement

ಸದ್ಯ “ಲವ್‌ 360′ ಬಿಡುಗಡೆಯಾಗಿರುವ ರಾಜ್ಯದ ಬಹುತೇಕ ಎಲ್ಲ ಕೇಂದ್ರಗಳಲ್ಲೂ ವಾರಾಂತ್ಯದಲ್ಲಿ ಹೌಸ್‌ಫ‌ುಲ್‌ ಪ್ರದರ್ಶನ ಕಂಡಿರುವುದು ಚಿತ್ರತಂಡದ ಮೊಗದಲ್ಲಿ ನಗು ತರಿಸಿದೆ.

“ಲವ್‌ 360′ ಸಿನಿಮಾದ ಬಿಡುಗಡೆಯ ನಂತರ ಸಿಗುತ್ತಿರುವ ಪ್ರತಿ ಕ್ರಿಯೆ ಗಳ ಬಗ್ಗೆ ಮಾತನಾಡುವ ನಿರ್ದೇಶಕ ಶಶಾಂಕ್‌, “ಮೊದಲ ವಾರ “ಲವ್‌ 360′ ಸಿನಿಮಾಕ್ಕೆ ನಮ್ಮ ನಿರೀಕ್ಷೆಯ ಮಟ್ಟಕ್ಕೆ ಪ್ರೇಕ್ಷಕರು ಥಿಯೇಟರ್‌ಗೆ ಬರಲಿಲ್ಲ. ಇದರಿಂದ ಸಹಜವಾಗಿಯೇ ನಮಗೂ ಆತಂಕ ಶುರುವಾಗಿತ್ತು. ಒಂದೊಳ್ಳೆಯ ಸಿನಿಮಾ ಮಾಡಿದಾಗಲೂ ಪ್ರೇಕ್ಷಕರು ಥಿಯೇಟ ರ್‌ಗೆ ಬಂದು ಸಿನಿಮಾ ನೋಡುತ್ತಿಲ್ಲವಲ್ಲ ಎಂದು ನೋವಾಗಿತ್ತು. ಈ ವೇಳೆ ತುಂಬ ನೋವಿನಿಂದಲೇ ಸೋಶಿಯಲ್‌ ಮೀಡಿ ಯಾ ದಲ್ಲಿ ವಿಡಿಯೋವನ್ನೂ ಮಾಡಿ ಚಿತ್ರತಂಡದ ನೋವು ತೋಡಿಕೊಂಡಿದ್ದೆ. ಆದರೆ, ಎರಡನೇ ವಾರದ ವೇಳೆಗೆ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಥಿಯೇಟರ್‌ ಗಳಿಕೆಯಲ್ಲೂ ನಿಧಾನವಾಗಿ ಏರಿಕೆ ಕಂಡುಬಂದಿತು. ಅದರಲ್ಲೂ ಎರಡನೇ ವಾರದ ವೀಕೆಂಡ್‌ ಹೊತ್ತಿಗೆ ಸಿನಿಮಾ ರಿಲೀಸ್‌ ಆಗಿದ್ದ ಬಹುತೇಕ ಸೆಂಟರ್‌ಗಳು ಹೌಸ್‌ಫ‌ುಲ್‌ ಆಗಿದ್ದವು. ಬಾಕ್ಸಾಫಿಸ್‌ನಲ್ಲೂ ಒಳ್ಳೆಯ ಕಲೆಕ್ಷನ್‌ ಆಗುತ್ತಿದೆ’ ಎನ್ನುತ್ತಾರೆ.

“ಲವ್‌ 360′ ಸಿನಿಮಾದ ಬಿಡುಗಡೆಗೂ ಮೊದಲೇ ಸ್ಯಾಟಲೈಟ್‌ ಮತ್ತು ಡಿಜಿಟಲ್‌ ರೈಟ್ಸ್‌ ಒಳ್ಳೆಯ ಮೊತ್ತಕ್ಕೆ ಸೇಲ್‌ ಆಗಿತ್ತು. ಹೀಗಾಗಿ, ನಿರ್ಮಾಪಕರು ಕೂಡ ಆರಂಭದಲ್ಲಿಯೇ 60% ರಷ್ಟು ಸೇಫ್ ಆಗಿದ್ದರು. ಈಗ ಥಿಯೇಟರ್‌ ಕಲೆಕ್ಷನ್ಸ್‌ ಕೂಡ ಚೆನ್ನಾಗಿ ಬರುತ್ತಿರುವುದ ರಿಂದ ಹಾಕಿದ ಬಂಡವಾಳ ವಾಪಾಸ್‌ ಬಂದಿದೆ. ಹೊಸಬರನ್ನು ಹಾಕಿಕೊಂಡು ಮಾಡಿದ ಸಿನಿಮಾ, ನಿಜಕ್ಕೂ ಸೂಪರ್‌ ಹಿಟ್‌ ಆಗಿದೆ’ ಎಂದು ಖುಷಿಯ ಮಾತುಗಳನ್ನಾಡುತ್ತಾರೆ ನಿರ್ದೇಶಕ ಶಶಾಂಕ್‌.

“ಸದ್ಯ ಕನ್ನಡದಲ್ಲಿ “ಲವ್‌ 360′ ಸಿನಿಮಾಕ್ಕೆ ವಿಮರ್ಶಕರಿಂದ, ಆಡಿಯನ್ಸ್‌ ಮತ್ತು ಇಂಡಸ್ಟ್ರಿ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಬರುತ್ತಿರುವುದರಿಂದ, ಈಗಾಗಲೇ ತೆಲುಗು ಮತ್ತು ತಮಿಳಿನ ದೊಡ್ಡ ಪ್ರೊಡಕ್ಷನ್‌ ಹೌಸ್‌ಗಳಿಂದ ಸಿನಿಮಾದ ರಿಮೇಕ್‌ ಮತ್ತು ಡಬ್ಬಿಂಗ್‌ ರೈಟ್ಸ್‌ಗೆ ಆಫ‌ರ್ ಬಂದಿದೆ’ ಎನ್ನುತ್ತಾರೆ ಶಶಾಂಕ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next