Advertisement
1. ಹುಚ್ಚುನಾಯಿ ಕಡಿತದಿಂದ ಉಂಟಾಗುವ ರೇಬೀಸ್ ಕಾಯಿಲೆಗೆ ಲಸಿಕೆ ಕಂಡುಹಿಡಿದ ವಿಜ್ಞಾನಿ ಲೂಯಿಸ್ ಪಾಶ್ಚರ್ ಹುಟ್ಟಿದ್ದು ಫ್ರಾನ್ಸ್‌ನಲ್ಲಿ.2. ಸೂಕ್ಷ್ಮ ಜೀವ ವಿಜ್ಞಾನ (ಮೈಕ್ರೋಬಯಾಲಜಿ)ದ ಪಿತಾಮಹ ಎಂದು ಆವರನ್ನು ಕರೆಯುತ್ತಾರೆ.
3. ಸಣ್ಣವನಿದ್ದಾಗ ಲೂಯಿಸ್‌ಗೆ ಚಿತ್ರಕಲೆಯಲ್ಲಿ ಬಹಳ ಆಸಕ್ತಿಯಿತ್ತು. 15ನೇ ವಯಸ್ಸಿನಲ್ಲಿ ಆವರು ಬಿಡಿಸಿದ್ದ ಚಿತ್ರಗಳು ಈಗ ಪ್ಯಾರಿಸ್‌ನ ಮ್ಯೂಸಿಯಂನಲ್ಲಿವೆ.
4. 26ನೇ ವಯಸ್ಸಿನಲ್ಲಿ ಮೇರಿ ಲಾರೆಂಟ್ ಎಂಬಾಕೆಯನ್ನು ಲೂಯಿಸ್ ಮದುವೆಯಾದರು. ದುರದೃಷ್ಟವಶಾತ್ ಅವರ ಐವರು ಮಕ್ಕಳಲ್ಲಿ, ಮೂವರು ಟೈಫಾಯ್ಡನಿಂದ ತೀರಿಕೊಂಡರು.
5. ಪಾಶ್ಚರೀಕರಣ ಪ್ರಕ್ರಿಯೆ ಮೂಲಕ ಹಾಲನ್ನು ಸಂರಕ್ಷಿಸುವ ವಿಧಾನವನ್ನು ಅವರು ಕಂಡು ಹಿಡಿದರು. ಪಾಶ್ಚರೀಕರಣದಲ್ಲಿ ಹಾಲನ್ನು 60 ರಿಂದ 100 ಡಿಗ್ರಿ ಸೆ. ನಡುವಿನ ತಾಪಮಾನದಲ್ಲಿ ಬಿಸಿ ಮಾಡಿ, ಸೂಕ್ಷ್ಮ ಜೀವಿಗಳನ್ನು ಕೊಲ್ಲಲಾಗುತ್ತದೆ.
6. ಈ ವಿಧಾನವನ್ನು ಮೊದಲ ಬಾರಿಗೆ, ಫ್ರೆಂಚ್ ವೈನ್ ಕಾರ್ಖಾನೆಯಲ್ಲಿ ಬಳಸಲಾಯ್ತು. ಈಗಲೂ ಪಾಶ್ಚರೀಕರಣವನ್ನು ಡೇರಿ ಮತ್ತು ಇತರೆ ಆಹಾರ ಸಂರಕ್ಷಣೆಯಲ್ಲಿ ಬಳಸಲಾಗುತ್ತದೆ.
7. ಆಂಥ್ರಾಕ್ಸ್, ರೇಬಿಸ್ ಮುಂತಾದ ಕಾಯಿಲೆಗಳಿಗೆ ಲಸಿಕೆ ಕಂಡುಹಿಡಿದ ಶ್ರೇಯ ಕೂಡಾ ಲೂಯಿಸ್‌ಗೆ ಸಲ್ಲುತ್ತದೆ.
8. ಆಂಥ್ರಾಕ್ಸ್‌ಗೆ ಲಸಿಕೆ ಕಂಡು ಹಿಡಿದಿದ್ದು ಫ್ರೆಂಚ್ ಪಶುವೈದ್ಯ ಜೀನ್ ಜೋಸೆಫ್ ಹೆನ್ರಿ ಟೌಸೆಂಟ್ ಎಂದೂ, ಅದರ ಶ್ರೇಯ ಲೂಯಿಸ್‌ಗೆ ಸಿಕ್ಕಿತೆಂದೂ ಹೇಳುವರು.
9. ಸಾಂಕ್ರಾಮಿಕ ರೋಗಗಳ ಕುರಿತಾದ ಸಂಶೋಧನೆಗಾಗಿ ಅವರು 1887ರಲ್ಲಿ ಪಾಶ್ಚರ್ ಇನ್‌ಸ್ಟಿಟ್ಯೂಟ್ ಅನ್ನು ಪ್ರಾರಂಭಿಸಿದರು.
10. ರೋಗ ಹರಡುವ ಭಯದಲ್ಲಿ ಲೂಯಿಸ್ ಯಾರೊಂದಿಗೂ ಹಸ್ತಲಾಘವ ಮಾಡುತ್ತಿರಲಿಲ್ಲವಂತೆ!