Advertisement
ಸರಕಾರದ ಅರ್ಲಿ ವಾರ್ನಿಂಗ್ ಸಿಸ್ಟಮ್ ಯೋಜನೆಯಡಿ ಮಂಜೇಶ್ವರ ತಾಲೂಕು ಕಚೇರಿಯ ಅಧೀನದ ಕುಂಜತ್ತೂರು,ಹೊಸಬೆಟ್ಟು,ಉಪ್ಪಳ,ಇಚ್ಲಂಗೋಡು,ಬಂಬ್ರಾಣ,ಕೊಯಿಪ್ಪಾಡಿ ಗ್ರೂಪ್‌ನ ಆರು ಗ್ರಾಮ ಕಚೇರಿಗಳಲ್ಲಿ ಮೈಕ್‌ಗಳನ್ನು ಅಳವಡಿಸಲಾಗಿದೆ.ಅದೇ ರೀತಿ ರಾಜ್ಯದ ಕರಾವಳಿ ಪ್ರದೇಶದ ಗ್ರಾಮ ಕಚೇರಿಗಳಲ್ಲಿ ಮೈಕ್ ಅಳವಡಿಸಲಾಗಿದೆ.ಆದರೆ ದೇವರ ದಯದಿಂದ ಮೈಕ್ ಅಳವಡಿಸಿದ ಬಳಿಕ ಸುನಾಮಿ ಅಪ್ಪಳಿಸಿಲ್ಲ.ಆದರೆ ಈ ಬೆಲೆ ಬಾಳುವ ಮೈಕ್ ಸೆಟ್‌ಗಳನ್ನು ಕೇಳುವವರಿಲ್ಲದೆ ಅನಾಥವಾಗಿದೆ. ಕೆಲವು ಕಚೇರಿಯ ಮೈಕ್‌ಗಳು ಕಾಣದಂತೆ ಮಾಯವಾಗಿದೆ.ಉಳಿದ ಧ್ವನಿವರ್ಧಕಗಳು ತುಕ್ಕು ಹಿಡಿದು ಉಪಯೋಗ ಶೂನ್ಯವಾಗಿದೆ.ಸ್ಥಾಪಿಸಿದ ಬಳಿಕ ಮೈಕ್ ಸೆಟ್ಟಿನ ಸರ್ವೀಸ್ ನಡೆಸಲಾಗಲಿ ಅಳಿದಿದೆಯೋ ಉಳಿದಿದೆಯೋ ಎಂಬುದಾಗಿ ಈ ತನಕ ಯಾರೂ ವಿಚಾರಿಸಿಲ್ಲ ವೆನ್ನುತ್ತಾರೆ ಗ್ರಾಮ ಕಚೇರಿಯ ನೌಕಕರು.
ಗ್ರಾಮ ಕಚೇರಿಗಳಲ್ಲಿ ಮೈಕ್ ಅಳವಡಿಸಿದ ಬಳಿಕ ಇದರ ಕುರಿತು ಯಾರೂ ವಿಚಾರಿಸಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದರ ಕಡತಗಳು ಇರುವುದರಿಂದ ಈ ಕುರಿತು ಹೆಚ್ಚಿನ ಯಾವುದೇ ಮಾಹಿತಿ ಇಲ್ಲ ಎಂದು ಮಂಜೇಶ್ವರ ತಾಲೂಕು ಕಚೇರಿಯ ಪೃಕೃತಿ ವಿಕೋಪ ನಿಗ್ರಹ ವಿಭಾಗದ ಉದೋÂಗಿ ಅನಸ್ ಹೇಳಿದರು.
Related Articles
2010ರ ಮೇ 22 ರಂದು ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮ ಕಚೇರಿಗಳ ಕೆಲವು ನೌಕರರನ್ನು ಮೈಕ್‌ಗಳ ತಾಂತ್ರಿಕ ನಿರ್ವಹಣೆಯ ತರಗತಿಗಾಗಿ ಕರೆದಿದ್ದರಂತೆ.ಆ ದಿನ ಮಂಗಳೂರು ಕೆಂಜಾರಿನಲ್ಲಿ ವಿಮಾನ ದುರಂತ ನಡೆದು ಪರಿಹಾರಕ್ಕೆ ತತ್‌ಕ್ಷಣ ತೆರಳುವಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದರಂತೆ.ತರಗತಿಗೆ ಆಗಮಿಸಿದ ಹೆಚ್ಚಿನವರೆಲ್ಲರೂ ಮಂಗಳೂರಿಗೆ ಅನಿವಾರ್ಯವಾಗಿ ತೆರಳಬೇಕಾಯಿತು. ಬಳಿಕ ಈ ತನಕ ತರಗತಿ ನಡೆದಿಲ್ಲ
– ದೇವದಾಸ
ಸಹಾಯಕ ತಹಶಿಲ್ದಾರ್ ,ಮಂಜೇಶ್ವರ ತಾಲೂಕು ಹೆಡ್‌ಕಾÌರ್ಟರ್
Advertisement