Advertisement

ಗಾಜಿನ ಮನೆಯಲ್ಲಿ ಅರಳಿರುವ ಲೋಟಸ್‌ ಮಹಲ್‌

11:09 AM Oct 02, 2018 | |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ಆಯೋಜಿಸುವ ದಸರಾ ಫ‌ಲಪುಷ್ಪ ಪ್ರದರ್ಶನ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಭಿತ್ತಿಚಿತ್ರ ಹಾಗೂ ದಸರಾ ಗೋಲ್ಡ್‌ ಕಾರ್ಡ್‌ನ ಮಾದರಿಯನ್ನು ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಎನ್‌.ಮಹೇಶ್‌ ಬಿಡುಗಡೆ ಮಾಡಿದರು.

Advertisement

ಸಾಂಸ್ಕೃತಿಕ ಕಾರ್ಯಕ್ರಮ: ದಸರಾ ಸಾಂಸ್ಕೃತಿಕ ಉಪ ಸಮಿತಿ ವತಿಯಿಂದ ಅರಮನೆ ವೇದಿಕೆಯಲ್ಲಿ ಖ್ಯಾತನಾಮ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ.10ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ ಮುಖ್ಯಮಂತ್ರಿ ಕುಮಾರಸ್ವಾಮಿ ನೆರವೇರಿಸಲಿದ್ದಾರೆ.

ಬೆಂಗಳೂರಿನ ಡಾ.ವೀಣಾಮೂರ್ತಿ ವಿಜಯ್‌ ಮತ್ತು ತಂಡದವರಿಂದ ಗಜ ಗೌರವ ನೃತ್ಯರೂಪಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಜಾನಪದ ಜಾತ್ರೆ, ರಾಜಸ್ಥಾನದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ಕಲೆºàಲಿ ಜಾನಪದ ನೃತ್ಯ, ಪ್ರಸಿದ್ಧ ಕಲಾವಿದೆ ಲಕ್ಷ್ಮೀ ಗೋಪಾಲಸ್ವಾಮಿ ಅವರಿಂದ ನೃತ್ಯ ವೈಭವ, ಕೇರಳ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ಮೋಹಿನಿ ಆಟ್ಟಂ, ರಾಯಚೂರಿನ ಪಂ. ನರಸಿಂಹಲು ವಡವಾಟಿ ಅವರಿಂದ ಕ್ಲಾರಿಯೋನೆಟ್‌, ಬೆಂಗಳೂರಿನ ಮಂಜುಳಾ ಪರಮೇಶ್‌ ಅವರಿಂದ ನೃತ್ಯ ರೂಪಕ, ಸಂಗೀತ ನಿರ್ದೇಶಕ ಮನೋಮೂರ್ತಿ ಅವರಿಂದ ಸಂಗೀತ ಸಂಭ್ರಮ.

ಕನ್ನಡ ರಸಮಂಜರಿ: ಮೈಸೂರಿನ ಶಕ್ತಿಧಾಮದವರಿಂದ ನೃತ್ಯರೂಪಕ, ಹಿರಿಯ ರಂಗ ಕಲಾವಿದರಿಂದ ರಂಗಗೀತೆಗಳು, ಲಾಲ್‌ಗ‌ುಡಿ ಕೃಷ್ಣನ್‌-ಲಾಲ್‌ಗ‌ುಡಿ ವಿಜಯಲಕ್ಷ್ಮೀ ಅವರಿಂದ ಕರ್ನಾಟಿಕ್‌ ವಯೋಲಿನ್‌ ವಾದನ, ಅಂಡಮಾನ್‌-ನಿಕೋಬಾರ್‌ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದವರಿಂದ ನಿಕೋಬಾರಿ ನೃತ್ಯ, ಖ್ಯಾತ ಗಾಯಕ ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಕನ್ನಡ ರಸಮಂಜರಿ.

ಪೊಲೀಸ್‌ ಬ್ಯಾಂಡ್‌ ವಾದನ, ವಿದ್ಯಾಭೂಷಣ ಸ್ವಾಮೀಜಿ ಅವರಿಂದ ಗಾಯನ ಸುಧೆ, ಅರುಣಾಚಲ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ವಾಂಖೋ ನೃತ್ಯ, ನಾಡಿನ ಖ್ಯಾತ ಕಲಾವಿದರುಗಳಿಂದ ಸುಗಮ ಸಂಗೀತ, ಕದ್ರಿ ಗೋಪಾಲನಾಥನ್‌, ಪಂಡಿತ್‌ ರೋನು ಮಜುಂದಾರ್‌ ಅವರಿಂದ ಸ್ಯಾಕೊಫೋನ್‌-ಕೊಳಲು ಜುಗಲ್‌ ಬಂದಿ, ಪ್ರಸಿದ್ಧ ಗಾಯಕಿ ಅನುರಾಧ ಪೋಡ್ವಾಲ್‌ ಅವರಿಂದ ಭಜನ್‌ ಗಾಯನ, ಮಧ್ಯಪ್ರದೇಶದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದವರಿಂದ ಬದಾಯಿ-ಬರೇಡಿ ನೃತ್ಯ ಹಾಗೂ ದಕ್ಷಿಣ ಭಾರತ ನೃತ್ಯ ವೈಭವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Advertisement

10ರಿಂದ ಫ‌ಲಪುಷ್ಪ ಪ್ರದರ್ಶನ: ಜಿಪಂ ತೋಟಗಾರಿಕೆ ವಿಭಾಗ ಹಾಗೂ ಜಿಲ್ಲಾ ತೋಟಗಾರಿಕೆ ಸಂಘಗಳ ಸಂಯುಕ್ತಾಶ್ರಯದಲ್ಲಿ ಕುಪ್ಪಣ್ಣ ಉದ್ಯಾನ (ನಿಶಾದ್‌ ಬಾಗ್‌)ನಲ್ಲಿ ಅ.10ರಿಂದ 21ರವರೆಗೆ ದಸರಾ ಫ‌ಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಕುಪ್ಪಣ್ಣ ಉದ್ಯಾನದಲ್ಲಿ ನಿರ್ಮಿಸಲಾಗಿರುವ ಗಾಜಿನ ಮನೆಯ ಲೋಕಾರ್ಪಣೆ ಜೊತೆಗೆ 1200 ಚದರ ಮೀಟರ್‌ ವಿಸ್ತೀರ್ಣವುಳ್ಳ

ಸುಸಜ್ಜಿತ ಗಾಜಿನ ಮನೆಯಲ್ಲಿ ಏರ್ಪಡಿಸಿರುವ ಫ‌ಲಪುಷ್ಪ ಪ್ರದರ್ಶನದ ಮುಖ್ಯ ಭೂಮಿಕೆಯಲ್ಲಿ ಪುಷ್ಪಗಳಿಂದ ನಿರ್ಮಿಸಲಾಗುವ ಲೋಟಸ್‌ ಮಹಲ್‌ ಈ ಬಾರಿಯ ಆಕರ್ಷಣೆಯಾಗಲಿದೆ. ಇದಲ್ಲದೆ ಹೂವಿನ ಅಲಂಕಾರದಲ್ಲಿ ಬಲರಾಮ ದ್ವಾರ, ಅಶೋಕ ಸ್ತಂಭ, ಹೂವಿನ ಅಲಂಕಾರದಲ್ಲಿ ಮರದ ಮೇಲಿನ ಮನೆ, ಡಾಲ್‌ಫಿನ್ಸ್‌, ಹೂವಿನ ಅಲಂಕಾರದ ಫಿರಂಗಿ ಗಾಡಿಗಳು, ಪೆಂಗ್ವಿನ್‌ಗಳು ಗಮನ ಸೆಳೆಯಲಿವೆ.

ದಸರಾ ಗೋಲ್ಡ್‌ ಕಾರ್ಡ್‌ ಬಿಡುಗಡೆ: ದಸರಾ ಮಹೋತ್ಸವಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ದಸರಾ ಗೋಲ್ಡ್‌ ಕಾರ್ಡ್‌ ಬಿಡುಗಡೆ ಮಾಡಲಾಗುತ್ತಿದೆ. 3999 ರೂ. ಪಾವತಿಸಿ ಗೋಲ್ಡ್‌ ಕಾರ್ಡ್‌ ಖರೀದಿಸಿದವರಿಗೆ ದಸರೆಯ ಎಲ್ಲ ಕಾರ್ಯಕ್ರಮಗಳಿಗೂ ಉಚಿತ ಪ್ರವೇಶಾವಕಾಶ ನೀಡಲಾಗುತ್ತದೆ. 

ಗೋಲ್ಡ್‌ಕಾರ್ಡ್‌ಗಳು ಮಂಗಳವಾರದಿಂದ ಆನ್‌ಲೈನ್‌ನಲ್ಲಿ ಖರೀದಿಸಬಹುದಾಗಿದ್ದು, ಗೋಲ್ಡ್‌ಕಾರ್ಡ್‌ ಹೊಂದಿದವರಿಗೆ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಕಾರ್ಯಕ್ರಮಗಳಲ್ಲಿ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ದಸರಾ ನಡೆಯುವ ದಿನಗಳಲ್ಲಿ ಗೋಲ್ಡ್‌ಕಾರ್ಡ್‌ ಹೊಂದಿರುವವರು ಮೈಸೂರಿನ ಪ್ರವಾಸಿ ತಾಣಗಳಿಗೆ ಸಹ ಉಚಿತ ಪ್ರವೇಶ ಪಡೆಯಬಹುದು. ಗೋಲ್ಡ್‌ಕಾರ್ಡ್‌ ಕುರಿತ ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್‌ ರೂಂ ಸಂಖ್ಯೆ 08212423800, ಟೋಲ್‌ಫ್ರೀ ಸಂಖ್ಯೆ 1077, ಮೊ. 8217395364 ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next