Advertisement

ನಿದ್ದೆಗ್ಗೆಟ್ಟು, ಲಾಟರಿ ಗೆದ್ದವಳು…

09:49 AM May 08, 2019 | Team Udayavani |

ರಾತ್ರಿ ನಿದ್ರೆ ಬಾರದೆ ಹಾಸಿಗೆಯಲ್ಲಿ ಹೊರಳಾಡುವುದರ ಕಷ್ಟ ಏನಂತ ಅನುಭವಿಸಿದವರಿಗೇ ಗೊತ್ತು. ಸಾಮಾನ್ಯವಾಗಿ ನಿದ್ರಾಹೀನ ರಾತ್ರಿಗಳಲ್ಲಿ ಎಲ್ಲರೂ ಏನು ಮಾಡ್ತಾರೆ? ಹಾಸಿಗೆಯಲ್ಲಿ ಹೊರಳಾಡೋದು, ಪದೇ ಪದೆ ಎದ್ದು ಬಾತ್‌ರೂಮ್‌ಗೆ ಹೋಗೋದು, ಗಡಿಯಾರದ ಟಿಕ್‌ ಟಿಕ್‌ ಅನ್ನು ಲೆಕ್ಕ ಹಾಕೋದು, ಪುಸ್ತಕ ಓದೋದು, ಆ ಸಮಯದಲ್ಲೇ ಪುಸ್ತಕಗಳನ್ನು ಬರೆದು ಲೇಖಕರಾದವರೂ ಇದ್ದಾರೆ.

Advertisement

ಅಮೆರಿಕದ ಮೇರಿಲ್ಯಾಂಡ್‌ನ‌ ಮಹಿಳೆಯೊಬ್ಬಳಿಗೂ, ನಿದ್ರಾಹೀನತೆ ಸಮಸ್ಯೆ ಕಾಡುತ್ತಿತ್ತು. ನಿದ್ರೆ ಬಾರದೇ ಇದ್ದಾಗ, ಪದೇ ಪದೆ ಗಡಿಯಾರದ ಕಡೆ ನೋಡೋದು ಅವಳಿಗಿದ್ದ ಅಭ್ಯಾಸ. ನಿದ್ರೆಗೆ ಜಾರುವ ಮುನ್ನ ಸಮಯ ಎಷ್ಟಾಗಿತ್ತೆಂಬುದು ಆಕೆಯ ನೆನಪಿನಲ್ಲಿರುತ್ತಿತ್ತು. ಹಾಗೇ ಒಂದು ರಾತ್ರಿ, ಅವಳು ಕೊನೆಯ ಬಾರಿಗೆ ಗಡಿಯಾರ ನೋಡಿದಾಗ ಗಂಟೆ 11.56 ಆಗಿತ್ತು. ಮರುದಿನ ಆಕೆ, ಇರಲಿ ನೋಡೋಣ ಅಂತ ಅದೇ ಸಂಖ್ಯೆಯ ಲಾಟರಿ ಟಿಕೆಟ್‌ ಖರೀದಿಸಿದಳಂತೆ. ಅದೃಷ್ಟಕ್ಕೆ ಅವಳಿಗೆ ಜಾಕ್‌ಪಾಟ್‌ ಹೊಡೆದುಬಿಟ್ಟಿತು. ನಿದ್ರಾಹೀನತೆಯ ಶಾಪ ಅವಳಿಗೆ ಒಂದರ್ಥದಲ್ಲಿ ವರವಾಯ್ತು ಅನ್ನಬಹುದು. ಯಾಕಂದ್ರೆ, ಆ ಟೆಕ್ನಿಕ್‌ ಬಳಸಿ ಅವಳು ಲಾಟರಿ ಗೆದ್ದಿದ್ದು ಒಂದಲ್ಲ, ಎರಡು ಬಾರಿ!

Advertisement

Udayavani is now on Telegram. Click here to join our channel and stay updated with the latest news.

Next