Advertisement
“ಲಾಟರಿ ಕಿಂಗ್’ ಎಂಬ ಕುಖ್ಯಾತಿ ಗಳಿಸಿರುವ ಮಾರ್ಟಿನ್ ಸ್ಯಾಂಟಿಗೊಗೆ ಸೇರಿದ ದೇಶಾದ್ಯಂತದ 70 ಕೇಂದ್ರಗಳಿಗೆ ಐಟಿ ಇಲಾಖೆ ಎ.30ರಂದು ದಾಳಿ ನಡೆಸಿದ್ದು, ಇದುವರೆಗಿನ ಲೆಕ್ಕಾಚಾರದಲ್ಲಿ 595 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವೆಲ್ಲವೂ ಕಪ್ಪು ಹಣ ಎಂದು ಸ್ವತಃ ಮಾರ್ಟಿನ್ ಒಪ್ಪಿಕೊಂಡಿರುವುದಾಗಿ ಐಟಿ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.ಪ್ರಮುಖ ಲಾಟರಿ ವ್ಯಾಪಾರಿಯಾಗಿದ್ದ ಈತ ಲಾಟರಿ ಫಲಿತಾಂಶವನ್ನು ತಿರುಚಿ ಬಹುಮಾನದ ಹಣವನ್ನು ತನ್ನಲ್ಲೇ ಉಳಿಸಿಕೊಳ್ಳುತ್ತಿದ್ದ. ಈ ಮೂಲಕ ಅಗಾಧ ಮೊತ್ತದ ಹಣ ಸಂಗ್ರಹಿಸಿದ್ದ. ಕೋಟ್ಯಂತರ ಮೌಲ್ಯದ ಆಸ್ತಿಪತ್ರಗಳು, 25 ಕೋಟಿ ರೂ. ಮೌಲ್ಯದ ವಜ್ರ ಸಹಿತ ಚಿನ್ನಾಭರಣ, 8.25 ಕೋಟಿ ನಗದನ್ನು ವಶ ಪಡಿಸಿಕೊಳ್ಳಲಾಗಿದೆ. ಕೆಲವೊಂದು ಆಸ್ತಿಯ ಮೌಲ್ಯವನ್ನು ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.