Advertisement
ಸತ್ಯಂ ಪಾಂಡೆ ಮತ್ತು ಮಿತ್ತಲ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡ ಅಪರಿಚಿತರಿಬ್ಬರು ವಾಟ್ಸ್ ಆ್ಯಪ್ ಮೂಲಕ ದೂರುದಾರರೊಂದಿಗೆ ಮಾತನಾಡಿದ್ದರು. ಅನಂತರ ವಾಟ್ಸ್ ಆ್ಯಪ್‌ನಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದರು. ಒಂದು ದಿನ ದೂರುದಾರರಿಗೆ ಲಾಟರಿ ಹಣ ಬಂದಿರುವುದಾಗಿ, ಆ ಹಣವನ್ನು ಖಾತೆಗೆ ಜಮಾ ಮಾಡುವುದಾಗಿ, ಜಮಾ ಮಾಡಲು ತಾವು ನೀಡುವ 9038910423 ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡುವಂತೆ ತಿಳಿಸಿದ್ದರು. ಇದನ್ನು ನಂಬಿದ ದೂರುದಾರರು ತಮ್ಮ ಬ್ಯಾಂಕ್ ಖಾತೆಗಳಿಗೆ ಆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸಿದ್ದರು. ಇದಾದ ಅನಂತರ ದೂರುದಾರರಿಗೆ ನಿವೃತ್ತಿಯಿಂದ ಬರಬೇಕಾದ ಹಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಅ. 26ರಂದು 50,55,118 ರೂ. ಮತ್ತು ಅ. 31ರಂದು ಇಂಡಿಯನ್ ಬ್ಯಾಂಕ್ ಖಾತೆಗೆ 22,31,798 ರೂ.ಗಳು ಬಂದಿತ್ತು. ಆ ಬಳಿಕ ಅಪರಿಚಿತ ವ್ಯಕ್ತಿಗಳು ದೂರುದಾರರ ಗಮನಕ್ಕೆ ತಾರದೆ ಅ. 26ರಿಂದ ನ. 2ರ ನಡುವೆ 72,86,916 ರೂ. ಅನಧಿಕೃತವಾಗಿ ಆನ್‌ಲೈನ್ ಮೂಲಕ ವರ್ಗಾಯಿಸಿ ವಂಚಿಸಿದ್ದಾರೆ. ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Mangaluru ಲಾಟರಿ ಆಮಿಷ: 72.86 ಲ.ರೂ. ವಂಚನೆ
12:38 AM Nov 07, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.