Advertisement
ಒಂ ದು ಕಲ್ಲನ್ನು ಸುಂದರ ಶಿಲ್ಪವಾಗಿಸುವ ಚಾಣಾಕ್ಷತೆ ಶಿಲ್ಪಿಗೆ ಇದ್ದಂತೆಯೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಇದೆ. ಆ ಹಿನ್ನಲೆಯಲ್ಲಿ ಶಿಕ್ಷಣದಿಂದ ದೂರವಿದ್ದ ಎಲ್ಲ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎಂಬುದಾಗಿ ಸರಕಾರ ಆದೇಶ ನೀಡಿತು. ಅದರಂತೆ ಶೈಕ್ಷಣಿಕ ರಂಗದಲ್ಲೂ ದಿನಂಪ್ರತಿ ಸಾವಿರಾರು ಅವಕಾಶಗಳು ಉದಯಿಸಿದವು.
Related Articles
ಎಲ್ಲ ರಂಗದಲ್ಲೂ ಕಾನೂನಿನ ಪದವೀಧರರಿಗೆ ಹಲವಾರು ಅವಕಾಶಗಳು ಇವೆ. ಐದು ವರ್ಷದ ಕಾನೂನು ಶಿಕ್ಷಣ ಹಾಗೂ 3 ವರ್ಷದ ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರದಲ್ಲಿ ಹಲವಾರು ಕಾನೂನು ವಿಶ್ವವಿದ್ಯಾನಿಲಯಗಳಿದ್ದು, ಕಾನೂನಿನ ವಿವಿಧ ಅಂಶಗಳನ್ನು ಹಾಗೂ ಭಾರತೀಯ ದಂಡ ಸಂಹಿತೆಯ (ಇಂಡಿಯನ್ ಪಿನಲ್ ಕೋಡ್) ಕುರಿತು ಅಧ್ಯಯನ ಕೈಗೊಳ್ಳಬಹುದು. ಈ ಕೋರ್ಸ್‌ನಲ್ಲಿ ಸ್ಪೆಷಲೆ„ಜೇಶನ್ ಆಗಿ ಸಿವಿಲ್ ಅಥವಾ ಕ್ರಿಮಿನಲ್ ಲಾ, ಅಂತಾರಾಷ್ಟ್ರೀಯ ಕಾನೂನು, ಲೇಬರ್ ಲಾ, ಸೆ„ಬರ್ ಲಾ, ಅಡ್ಮಿನಿಸ್ಟ್ರೇಟಿವ್ ಲಾ, ಪೇಟೆಂಟ್ ಲಾ ಇವೇ ಮೊದಲಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಾನೂನು ವೃತ್ತಿ ಕೈಗೊಳ್ಳಬೇಕಾದರೆ ಎಲ್‌ಎಲ್‌ಬಿ ಕೋರ್ಸ್ ಮಾಡಿರಬೇಕು.
Advertisement
ಶೈಕ್ಷಣಿಕ ಕೋರ್ಸ್ಗಳುಕಾನೂನು ಶಿಕ್ಷಣದಲ್ಲಿ ಬ್ಯಾಚುಲರ್ ಆಫ್ ಲಾ (ಎಲ್‌ಎಲ್‌ಬಿ), ಮಾಸ್ಟರ್ ಆಫ್ ಲಾ (ಎಲ್‌ಎಲ್‌ಎಮ್), ಮಾಸ್ಟರ್ ಆಫ್ ಬ್ಯುಸಿನೆಸ್ ಲಾ, ಡಾಕ್ಟರ್ ಆಫ್ ಫಿಲಾಸಫಿ(ಪಿಎಚಿx) ಕೋರ್ಸ್ ಮಾಡಬಹುದು.