Advertisement

ಆಭರಣ ವಿನ್ಯಾಸದಲ್ಲಿ ವಿಪುಲ ಅವಕಾಶ

10:24 PM Jun 18, 2019 | mahesh |

ಆಭರಣಗಳು ಎಲ್ಲರಿಗೂ ಪ್ರಿಯ. ಅದರಲ್ಲೂ ವಿನೂತನ ವಿನ್ಯಾಸಗಳ ಆಭರಣಗಳತ್ತ ಎಲ್ಲರ‌ ಗಮನ ಇರುತ್ತದೆೆ. ಹೀಗಿರುವ ಮಾರುಕಟ್ಟೆಯಲ್ಲಿ ನೂತನ ವಿನ್ಯಾಸಗಳಿಗೆ ಎಲ್ಲಿಲ್ಲದ ಬೇಡಿಕೆ. ಈ ಕಾರಣದಿಂದಾಗಿ ನೂತನ ವಿನ್ಯಾಸಗಳನ್ನು ಮಾಡುವ ಕ್ರಿಯಾತ್ಮಕ ವಿನ್ಯಾಸಕಾರರಿಗೂ ಉತ್ತಮ ಅವಕಾಶವಿದೆ. ಈ ಮೂಲಕ ಆಭರಣ ವಿನ್ಯಾಸ ಕೋರ್ಸ್‌ಗಳ ವ್ಯಾಪ್ತಿಯೂ ಹೆಚ್ಚಿದೆ.

Advertisement

ಯಾರೆಲ್ಲ ಕಲಿಯಬಹುದು/ ಯಾವ ರೀತಿಯ ಕೋರ್ಸ್‌?
ಭಾರತದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಈ ಕೋರ್ಸ್‌ ಲಭ್ಯವಿದೆ. 6 ತಿಂಗಳ ಅಥವಾ 1 ವರ್ಷದ ಕೋರ್ಸ್‌ ಇದಾಗಿದೆ. ಪ್ಲಾಟಿನಂ, ಬಂಗಾರ, ಬೆಳ್ಳಿ ಹೀಗೆ ನಾನಾ ಲೋಹಗಳ ವಿನ್ಯಾಸವನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ. ಆಭರಣ ವಿನ್ಯಾಸ ಕೋರ್ಸ್‌ ಕಲಿತವರಿಗೆ ಉತ್ತಮ ಉದ್ಯೋಗವಕಾಶವಿದ್ದು, ಒಳ್ಳೆಯ ಸಂಬಳವೂ ಲಭಿಸುತ್ತದೆ. ಪಿ.ಯು.ಸಿ ಅಥವಾ ಡಿಗ್ರಿ ಮಾಡಿದ ಯಾರು ಕೂಡ ಈ ಕೋರ್ಸ್‌ಗಳಿಗೆ ಸೇರಿಕೊಳ್ಳಬಹುದು.

ಮೂರು ರೀತಿಯ ಕೋರ್ಸ್‌
ಆಭರಣ ವಿನ್ಯಾಸ ಕೋರ್ಸ್‌ಗಳಲ್ಲಿ 3 ವಿಧಗಳಿವೆ. ಅವುಗಳೆಂದರೆ ಡಿಪ್ಲೋಮಾ ಕೋರ್ಸ್‌, ಪದವಿ ಪೂರ್ವ ಕೋರ್ಸ್‌ಗಳು , ಲಲಿತ ಕಲೆ ಸ್ನಾತಕೋತ್ತರ ಪದವಿಯಲ್ಲಿ ಆಭರಣ ವಿನ್ಯಾಸ ಕೋರ್ಸ್‌ಗಳನ್ನು ಕಲಿಯಬಹುದು. ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ವಿನ್ಯಾಸಗಳನ್ನು ಕಲಿಯಬಹುದು. ನಮ್ಮಲ್ಲಿ ಈ ಕೋರ್ಸ್‌ನ ಅರಿವು ಮತ್ತು ಬೇಡಿಕೆ ಕಡಿಮೆ. ಆದರೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.

ಆಭರಣ ವಿನ್ಯಾಸ ಕೋರ್ಸ್‌ ಕಲಿಸುವ ಶಿಕ್ಷಣ ಸಂಸ್ಥೆಗಳು
ಲಂಡನ್‌ ಜುವೆಲರಿ ಸ್ಕೂಲ್‌, ಇಂಡಿಯಾನ ಯುನಿವರ್ಸಿಟಿ ಆಫ್ ಬ್ಲೂಮಿಂಗ್ಟನ್‌, ಬರ್ಮಿಂಗ್‌ಹ್ಯಾಮ್‌ ವಿ.ವಿ. ಸೇರಿದಂತೆ ವಿದೇಶಗಳ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಆಭರಣ ವಿನ್ಯಾಸ ಕೋರ್ಸ್‌ಗಳಿವೆ.

ಭಾರತದ ಜೆ.ಡಿ. ಇನ್‌ಸ್ಟಿಟ್ಯೂಟ್‌, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಜೆಮ್‌ ಆ್ಯಂಡ್‌ ಜುವೆಲರಿ, ಪರ್ಲ್ ಅಕಾಡೆಮಿ ಆಫ್ ಫ್ಯಾಶನ್‌, ಜಿ.ಎಸ್‌.ಕೆ. ಗ್ಲೋಬಲ್‌ ಪುಣೆ, ದಿಲ್ಲಿಯ ಇಂಟರ್‌ನ್ಯಾಷನಲ್‌ ಕಾಲೇಜ್‌ ಆಫ್ ಫ್ಯಾಶನ್‌ , ಸತ್ಯಂ ಫ್ಯಾಶನ್‌ ಇನ್‌ಸ್ಟಿಟ್ಯೂಟ್‌ ನೋಯ್ಡಾ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಆಭರಣ ವಿನ್ಯಾಸ ಕೋರ್ಸ್‌ಗಳಿವೆ.

Advertisement

ಕ್ರಿಯಾತ್ಮಕತೆ, ಕಲೆ ಮತ್ತು ತಂತ್ರಜ್ಜಾನ ಈ 3 ಆಭರಣ ಕೋರ್ಸ್‌ಗಳಲ್ಲಿ ಮಖ್ಯ ಪಾತ್ರ ವಹಿಸುತ್ತದೆ. ಆಭರಣ ವಿನ್ಯಾಸ ಕೋರ್ಸ್‌ಗಳು ನಮ್ಮಲ್ಲಿ ರುವ ಸೃಜನಶೀಲತೆಯನ್ನು ಹೊರ ಜಗತ್ತಿಗೆ ತಿಳಿಯುವಂತೆ ಮಾಡುತ್ತವೆ.

ಬೇಕಾದ ಅಂಶ
ಉತ್ತಮ ವಿನ್ಯಾಸಗಾರನಾಗಬೇಕಾದರೆ ತಾಳ್ಮೆ ಅತಿ ಮುಖ್ಯ. ರೇಖಾಚಿತ್ರಗಳನ್ನು ಬಿಡಿಸುವ ಕಲೆ ಕರಗತವಾಗಿದ್ದ‌ಲ್ಲಿ ಅರ್ಧದಷ್ಟು ಆಭರಣ ವಿನ್ಯಾಸ ಕಲಿಕೆ ಸುಲಭವಾದಂತೆ. ವಿವಿಧ ಬಗೆಗೆ ಆಭರಣ ವಿನ್ಯಾಸಗಳನ್ನು ಈ ಕೋರ್ಸ್‌ಗಳಲ್ಲಿ ಕಲಿಸಲಾಗುತ್ತದೆ. ಚಿತ್ರಕಲೆಯಲ್ಲಿ ಆಸಕ್ತಿ ಇರುವವರಿಗೆ ಈ ಆಭರಣ ವಿನ್ಯಾಸ ಕೆಲಸ ಒಳ್ಳೆಯದು.

-   ಧನ್ಯಶ್ರೀ ಬೋಳಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next