Advertisement

ಭಾರತೀಯ ಸಮಾಜದ ಸಂಶೋಧನೆಗೆ ವಿಪುಲ ಅವಕಾಶ: ಪ್ರೊ|ಪಿ.ವಿ.ಕೃಷ್ಣ ಭಟ್‌

09:14 PM Apr 10, 2019 | Team Udayavani |

ಮಂಗಳಗಂಗೋತ್ರಿ: ಭಾರತೀಯ ಸಾಮಾಜಿಕ ವ್ಯವಸ್ಥೆಯ ಬಗೆಗಿನ ಸಂಶೋಧನೆಗೆ ವಿಪುಲ ಅವಕಾಶಗಳಿವೆ.ಇಂತಹ ಅವಕಾಶಗಳನ್ನು ಬಳಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಒರಿಸ್ಸಾ ಕೋರಪುಟ್‌ ಸೆಂಟ್ರಲ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ|ಪಿ.ವಿ.ಕೃಷ್ಣ ಭಟ್‌ ಹೇಳಿದರು.

Advertisement

ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ಹಾಗೂ ಸಂಶೋ ಧನ ವಿಭಾಗದ ಆಶ್ರಯದಲ್ಲಿ ಸಮಾಜ ವಿಜ್ಞಾನದ ಎಂ.ಪಿಲ್‌.,ಪಿಎಚ್‌.ಡಿ. ಹಾಗೂ ಪಿ.ಡಿ.ಎಫ್‌. ಸಂಶೋಧನಾ ವಿದ್ಯಾರ್ಥಿಗಳಿಗೆ ಐಸಿಎಸ್‌ಎಸ್‌ಆರ್‌ ಪ್ರಾಯೋಜಕತ್ವದಲ್ಲಿ ಹತ್ತು ದಿನಗಳ ಕಾಲ ನಡೆಯಲ್ಲಿರುವ ಸಂಶೋಧನ ವಿಧಾನಶಾಸ್ತ್ರ ವಿಷಯದ ಬಗ್ಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ವ್ಯವಸ್ಥೆಯನ್ನು ಸಮರ್ಪಕವಾದ ರೀತಿಯಲ್ಲಿ ಅರ್ಥ ಮಾಡಿಕೊಳವಲ್ಲಿ ಸಮಾಜವಿಜ್ಞಾನ,ಸಾಮಾಜಿಕ ಸಂಶೋಧನೆಯ ಪಾತ್ರ ಪ್ರಮುಖವಾದುದು. ಸರಕಾರಗಳು ಇತರ ಕ್ಷೇತ್ರಗಳ ಯೋಜನೆಗಳಿಗೆ ನೀಡುವ ಮಹತ್ವವನ್ನು, ಅನುದಾನವನ್ನು ಸಮಾಜ ವಿಜ್ಞಾನ ಕ್ಷೇತ್ರದ ಸಂಶೋಧನೆ, ಯೋಜನೆಗಳಿಗೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿವೆ ಎಂದರು.

ಮುಖ್ಯ ಅತಿಥಿಯಾಗಿ ಶಿವಮೊಗ್ಗ ಅಕ್ಷರ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಡೀನ್‌ ಪ್ರೊ|ಜೆ.ಮಾದೇಗೌಡ ಮಾತನಾಡಿ,ಸಂಶೋಧಕನು ತಮ್ಮ ಸಂಶೋಧನೆಯ ಗುಣಮಟ್ಟವನ್ನು ಕಾಯ್ದುಕೊಂಡು ಉತ್ತಮವಾಗಿ ಮೂಡಿ ಬರಬೇಕಾದರೆ ಅಧ್ಯಯನ ವಿಷಯದ ಕುರಿತಂತೆ ವ್ಯಾಪಕ ಅಧ್ಯಯನ,ಆ ವಿಷಯಕ್ಕೆ ಪೂರಕವಾಗಿ ಹಿಂದೆ ನಡೆದಿ ರುವ ಅಧ್ಯಯನಗಳ ಬಗ್ಗೆಯೂ ಹೆಚ್ಚಿನ ಗಮನಹರಿಸುವುದು ಅಗತ್ಯ ಎಂದರು.

ಮಂಗಳೂರು ವಿವಿಯ ಪ್ರಭಾರ ಕುಲಪತಿ ಪ್ರೊ|ಕಿಶೋರಿ ನಾಯಕ್‌ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ವಾಣಿಜ್ಯ ವಿಭಾ ಗದ ಮುಖ್ಯಸ್ಥ ಪ್ರೊ| ಈಶ್ವರ ಪಿ.,ಪ್ರಾಧ್ಯಾಪಕ ಪ್ರೊ|ಯಡಪಡಿತ್ತಾಯ, ಪ್ರೊ| ಮುನಿರಾಜು, ಕಾರ್ಯಾಗಾರದ ಸಂಯೋಜಕ ಡಾ| ವೇದವ ಪಿ., ಡಾ| ಪರಮೇಶ್ವರ,ಡಾ| ಪ್ರೀತಿ ಕೀರ್ತಿ ಡಿ’ಸೋಜಾ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next