Advertisement

ವೈದ್ಯರಿಗೆ ವಿಶ್ವಾದ್ಯಂತ ಅವಕಾಶ ವಿಪುಲ: ಪ್ರೊ|ವೊಲಿವರ್‌

04:11 AM May 18, 2019 | Sriram |

ಮಂಗಳೂರು: ವೈದ್ಯಕೀಯ ಕ್ಷೇತ್ರವು ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳೊಂದಿಗೆ ಬೆಳೆಯುತ್ತಿದೆ. ಜನರ ಆರೋಗ್ಯ ಸೇವೆ ಮಾಡಲು ವೈದ್ಯರಿಗೆ ವಿಶ್ವಾದ್ಯಂತ ಅವಕಾಶ ವಿಪುಲವಾಗಿದೆ ಎಂದು ಯುಎಸ್‌ಎಯ ಕ್ವೀನ್ಸ್‌ಲ್ಯಾಂಡ್‌ ವಿ.ವಿ.ಯ ಫೌಂಡೇಶನ್‌ ಫಾರ್‌ ಅಡ್ವಾನ್ಸ್‌ಮೆಂಟ್ಆಫ್‌ ಇಂಟರ್‌ನ್ಯಾಶನಲ್ ಮೆಡಿಕಲ್ ಎಜುಕೇಶನ್‌ ಆ್ಯಂಡ್‌ ರೀಸರ್ಚ್‌ನ ಚೇರ್‌ಮನ್‌ ಪ್ರೊ| ಪಿನ್‌ಸ್ಕೈ ವಿಲಿಯಂ ವೊಲಿವರ್‌ ಅಭಿಪ್ರಾಯಪಟ್ಟರು.


Advertisement

ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಷನ್‌ ಸೆಂಟರ್‌ನಲ್ಲಿಶುಕ್ರವಾರ ನಡೆದ ಮಣಿಪಾಲ್ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ನ 26ನೇ ಘಟಿಕೋತ್ಸವದಲ್ಲಿ ಅವರು ಮುಖ್ಯಅತಿಥಿಯಾಗಿದ್ದರು.

ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆಗಳನ್ನು ತಂದು ಹೊಸ ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳಲು ಅವಕಾಶಗಳು ಹೆಚ್ಚಿವೆ. ಕೌಶಲ, ಪರಿಹಾರಗಳನ್ನು ಕಂಡುಕೊಳ್ಳುವ ಸಾಮರ್ಥ್ಯಮತ್ತು ಛಲದಿಂದ ಮುನ್ನುಗ್ಗಿದರೆ ಯಶಸ್ಸು ಸಿಗುತ್ತದೆ. ಬದ್ಧತೆಯಿಂದ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊ ಳ್ಳುವ ಮೂಲಕ ಆ ಸೇವೆಗೆ ಸಾರ್ಥಕ್ಯ ತಂದುಕೊಡಬೇಕು ಎಂದರು.

ಒಟ್ಟು 586 ಮಂದಿ ಪದವೀಧರರು ಪದವಿ ಸ್ವೀಕರಿಸಿದರು.ಪ್ರೊ ಚಾನ್ಸ್‌ಲರ್‌ ಡಾ| ಎಚ್.ಎಸ್‌. ಬಲ್ಲಾಳ್‌, ಪ್ರೊ ವೈಸ್‌ ಚಾನ್ಸ್‌ಲರ್‌ ಡಾ| ತಮ್ಮಯ್ಯ ಸಿ.ಎಸ್‌., ರಿಜಿಸ್ಟ್ರಾರ್‌ ಡಾ| ನಾರಾಯಣ ಸಭಾಹಿತ್‌, ರಿಜಿಸ್ಟ್ರಾರ್‌ (ಇವ್ಯಾಲ್ಯುವೇಶನ್‌) ಡಾ| ವಿನೋದ್‌ ವಿ. ಥಾಮಸ್‌, ಫ್ಯಾಕಲ್ಟಿ ಆಫ್‌ ಹೆಲ್ತ್ ಸೈನ್ಸಸ್‌ನ ಪ್ರೊ| ವೈಸ್‌ ಚಾನ್ಸ್‌ಲರ್‌ ಡಾ| ಪೂರ್ಣಿಮಾ ಬಾಳಿಗಾ, ಪ್ರೊ ವೈಸ್‌ ಚಾನ್ಸ್‌ಲರ್‌ ಡಾ| ಪಿಎಲ್ಎನ್‌ಜಿ ರಾವ್‌, ಸ್ಟೂಡೆಂಟ್ ಅಫೇರ್ ನಿರ್ದೇಶಕಿ ಡಾ| ಗೀತಾ ಮಯ್ಯ, ಸೆಂಟರ್‌ ಫಾರ್‌ ಡಾಕ್ಟರಲ್ ಸ್ಟಡೀಸ್‌ನ ನಿರ್ದೇಶಕಿ ಡಾ| ಶ್ಯಾಮಲಾ ಹಂದೆ ಮೊದಲಾದವರು ಉಪಸ್ಥಿತರಿದ್ದರು.

ವೈಸ್‌ ಚಾನ್ಸ್‌ಲರ್‌ ಡಾ| ಎಚ್.ವಿನೋದ್‌ ಭಟ್ ಮಾಹೆ ಚಟುವಟಿಕೆ ಗಳ ಬಗ್ಗೆ ತಿಳಿಸಿದರು. ಮಂಗಳೂರು ಕೆಎಂಸಿಯ ಡೀನ್‌ ಡಾ| ಎಂ. ವಿ. ಪ್ರಭು ಪರಿಚಯ ಮಾಡಿದರು. ಪ್ರೊವೈಸ್‌ ಚಾನ್ಸ್‌ಲರ್‌ ಡಾ| ವಿ. ಸುರೇಂದ್ರ ಶೆಟ್ಟಿ ಸ್ವಾಗತಿಸಿ, ಎಂಸಿಒಡಿಎಸ್‌ನ ಡೀನ್‌ಡಾ| ದಿಲೀಪ್‌ ಜಿ. ನಾೖಕ್‌ ವಂದಿಸಿದರು. ಡಾ| ನಿಖೀಲ್ ಡಿ’ಸೋಜಾ, ಡಾ| ನಂದಿತಾ ಶೆಣೈ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next