Advertisement

ಗೇರು ಹಣ್ಣಿನ ಮೌಲ್ಯವರ್ಧನೆಗೆ ವಿಪುಲ ಅವಕಾಶ

06:45 AM Jul 24, 2017 | |

ಬ್ರಹ್ಮಾವರ: ಕರಾವಳಿಯ ಗೇರುಬೀಜ ಲೋಕಪ್ರಸಿದ್ಧ, ಆದರೆ ಗೇರು ಹಣ್ಣು ಮಾತ್ರ ತೆಂಗಿನ ಬುಡ ಅಥವಾ ತ್ಯಾಜ್ಯಕ್ಕೆ ಸೇರ್ಪಡೆ. ಅತೀ ಹೆಚ್ಚು ವಿಟಮಿನ್‌ ಸಿ ಹೊಂದಿರುವ ಗೇರುಹಣ್ಣನ್ನು ಸಂಸ್ಕರಿಸಿ ಬಳಸಿ ಜನಪ್ರಿಯವಾಗಿಸಬಹುದು ಎನ್ನುವುದು ಕೆವಿಕೆ ವಲಯ ಸಂಶೋಧನ ಕೇಂದ್ರದ ಆಹಾರ ಮತ್ತು ಪೋಷಣೆ ವಿಭಾಗದ ಡಾ| ಭಾಗೀರಥಿ ಅವರ ಅಭಿಪ್ರಾಯ.

Advertisement

ಗೇರು ಹಣ್ಣು ವಿಟಮಿನ್‌ಸಿ ಯನ್ನು ಹೇರಳವಾಗಿ ಹೊಂದಿರುವ ಆರೋಗ್ಯದಾಯಕ ಹಣ್ಣಾಗಿದ್ದು,  ಹಣ್ಣನ್ನು ಸದ್ಬಳಕೆ ಮಾಡುವ ಬಗ್ಗೆ ಕಳೆದ 10 ವರ್ಷದಿಂದ ಸಂಶೋಧನೆ ನಡೆಸಿ ಮೌಲ್ಯವರ್ಧಕ ಹಣ್ಣನ್ನಾಗಿ ರೂಪಿಸಿದ್ದಾರೆ.

ಸುಮಾರು 20 ಲಕ್ಷ ರೂ.ಗಳ ಮೂಲಭೂತ ಸೌಕರ್ಯಗಳೊಂದಿಗೆ ಪ್ರಯೋಗಾಲಯವನ್ನು ನವೀಕರಣ ಗೊಳಿಸಿ ಸಂಸ್ಕರಣ ಉಪಕರಣಗಳನ್ನು ಖರೀದಿಸಿ ಗೇರು ಹಣ್ಣನ್ನೊಳಗೊಂಡಂತೆ ಹಲವು ಸ್ಥಳೀಯ ಹಣ್ಣುಗಳ ಮೌಲ್ಯ ವರ್ಧನೆಗೆ ನಿರಂತರ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.

ಅತಿ ಬೇಗ ಹಾಳಾಗುವ ತರಕಾರಿ, ಹಣ್ಣುಗಳನ್ನು ಸಂಸ್ಕರಿಸಿ ತಯಾರಿಸುವ ಬಗ್ಗೆ ಸ್ವಸಹಾಯ ಸಂಘಗಳಿಗೆ, ಆಸಕ್ತರಿಗೆ ಹಾಗೂ ಅಲ್ಲೇ ಕಲಿಯುತ್ತಿರುವ ಡಿಪೊÉಮಾ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಾರೆ. ಅಗ್ಗದ ಹಣ್ಣು, ತರಕಾರಿಗಳಿಂದ ತಯಾರಿಸಿದ ಜಾಮ್‌, ಉಪ್ಪಿನಕಾಯಿ, ಸ್ಕ್ವಾಷ್‌, ಸಿರಪ್‌, ಕ್ಯಾಂಡಿಗಳನ್ನು ಮೌಲ್ಯವ ರ್ಧಿತ ಉತ್ಪನ್ನಗಳನ್ನಾಗಿ ಪರಿವರ್ತಿಸಿ, ಅರೋಗ್ಯಕರವಾಗಿ ಮಾರಾಟಕ್ಕೆ ಅನುವಾಗುವಂತೆ ಮಾಡುವ ವಿಧಾನವನ್ನು ಜನರಿಗೆ ತಿಳಿಸುತ್ತಾರೆ.

ಗೇರುಹಣ್ಣು ತಿನ್ನದ, ಪಪ್ಪಾಯ ತಿನ್ನದ, ಪೇರಳೆ ತಿನ್ನದ ಮಕ್ಕಳು ಇದರಿಂದ ತಯಾರಿಸಿದ ಜಾಮನ್ನು ಇಷ್ಟಪಟ್ಟು ತಿನ್ನುತ್ತಾರೆ ಎನ್ನುತ್ತಾರೆ.

Advertisement

ಸಾಧಕರು: ಮಂಗಳೂರಿನ ಶ್ಯಾಮಲಾ ಶಾಸ್ತ್ರಿ ಅವರು ಈಗಾಗಲೇ ಗೇರು ಹಣ್ಣಿನ ಸಿರಪ್‌ ತಯಾರಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಇವರು 1,500 ಲೀಟರ್‌ ನಿಂದ 2,000 ಲೀಟರ್‌ ಸಿರಪ್‌ ತಯಾರಿಸುತ್ತಾರೆ. ಗೇರು ಹಣ್ಣನ್ನು ಗುರುತಿಸಿ, ಬಳಸಿ ಎನ್ನುವುದು ಇವರ ವಿನಂತಿ.

ಉತ್ತಮ ಲಾಭ
ಸ್ವಸಹಾಯ ಸಂಘಗಳು 55,000 ದಿಂದ 60,000 ರೂ. ವೆಚ್ಚದೊಳಗೆ ಒಂದು ಘಟಕ ತಯಾರಿಸಿದರೆ ಉತ್ತಮ ಲಾಭ ಪಡೆಯಬಹುದು. ದಿನಕ್ಕೆ 50 ಕೆಜಿ ಹಣ್ಣನ್ನು ಸಿರಪ್‌ಗೆ ಬಳಸಬಹುದಾಗಿದೆ. ಒಗರು ಹೆಚ್ಚಿಗೆ ಬಾರದಂತೆ ತಯಾರಿಸಿದರೆ ಈ ಹಣ್ಣನ್ನು ಕಟ್‌ ಮಾಡಿ ಉಪ್ಪಿನಕಾಯಿಗೆ, ಚಟ್ನಿಗೆ ಬಳಸಬಹುದು. ಮತ್ತೆ ಉಳಿದ ತ್ಯಾಜ್ಯವನ್ನು ಸ್ವಲ್ಪ ಪ್ರಮಾಣದ ಉತ್ತಮ ಹಣ್ಣುಗಳೊಂದಿಗೆ ಮಿಕ್ಸ್‌ ಮಾಡಿ ಗೋಬರ್‌ ಗ್ಯಾಸ್‌ಗೆ ಬಳಸಬಹುದು ಎಂದು ಅವರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next