Advertisement

ಕೊಪ್ಪ ಸರ್ಕಾರಿ ಆಸತ್ರೆ ಸಮಸ್ಯೆಗಳ ಆಗರ

01:29 PM May 14, 2019 | Team Udayavani |

● ಎಸ್‌.ಪುಟ್ಟಸ್ವಾಮಿ

Advertisement

ಮದ್ದೂರು: ತಾಲೂಕು ಕೇಂದ್ರದಿಂದ 18 ಕಿ.ಮೀ. ದೂರದಲ್ಲಿರುವ ಹಾಗೂ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡ ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಸಮಸ್ಯೆಗಳ ಆಗರವಾಗಿದೆ.

ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಸುರೇಶ್‌ಗೌಡ ಸೇರಿದಂತೆ ಸಂಸದ ಶಿವರಾಮೇಗೌಡ, ವಿಧಾನ ಪರಿಷತ್‌ ಸದಸ್ಯರಾದ ಶ್ರೀಕಂಠೇ ಗೌಡ, ಅಪ್ಪಾಜಿಗೌಡ ಒಳಗೊಂಡಂತೆ ಜಿಪಂ, ತಾಪಂ ಜನಪ್ರತಿನಿಧಿಗಳ ದೊಡ್ಡಪಟ್ಟಿಯೇ ಇದ್ದು ಆಸ್ಪತ್ರೆಯ ಅವ್ಯವಸ್ಥೆ ಯಾರ ಕಣ್ಣಿಗೂ ಬೀಳದಿರುವುದು ದುರಂತವೇ ಸರಿ.

ಶತಮಾನದಷ್ಟು ಹಳೆಯದಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲ ಸೌಲಭ್ಯಗಳ ಜತೆಗೆ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ಕೇಂದ್ರ ಸ್ಥಾನದಲ್ಲಿ ನೆಲಸದ ವೈದ್ಯರು, ವಾರಕ್ಕೆ ಮೂರು ದಿನ ಬಂದು ಹೋಗುವ ನಿಯೋಜಿತ ಆಯುರ್ವೇದ ವೈದ್ಯ, ಜಿಲ್ಲಾಕೇಂದ್ರಕ್ಕೆ ವಾಪಸ್ಸಾಗಿ ಕೊಪ್ಪಕ್ಕೆ ತಲೆಹಾಕದ ತುರ್ತು ಚಿಕಿತ್ಸಾ ವಾಹನ ಮತ್ತು ಇದರ ಚಾಲಕ, ಖಾಲಿ ಇರುವ ಪ್ರಯೋಗಾಲಯ ಸಿಬ್ಬಂದಿ ಇಂತಹ ಅವ್ಯವಸ್ಥೆಗಳೇ ಇಲ್ಲಿನ ಕಾರ್ಯಪಡೆಯಾಗಿದೆ.

ಕೊಪ್ಪದ ಅವ್ವೇರಹಳ್ಳಿ ದೊಡ್ಡ ಬಿಳೀಗೌಡರ ಸ್ಮರಣಾರ್ಥ ನಿರ್ಮಾಣಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಂದಿನ ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್ಲೋಕಾರ್ಪಣೆ ಗೊಳಿಸಿದ್ದರು. ಇತ್ತೀಚೆಗೆ ನಿರ್ಮಿಸಿದ ನೂತನ ಕಟ್ಟಡವು ನಿರ್ಮಿಸಲಾಗಿದೆ. ಆದರೆ, ಅದಕ್ಕೊಂದು ಸುತ್ತುಗೋಡೆ ನಿರ್ಮಿಸಲು ಆರೋಗ್ಯ ಇಲಾಖೆ ವಿಫ‌ಲವಾಗಿದೆ.

Advertisement

8 ತಿಂಗಳಿಂದ ವೇತನವಿಲ್ಲ: ವೈದ್ಯರು ಕೇಂದ್ರ ಸ್ಥಾನದಲ್ಲಿ ನೆಲೆಸದೆ ಒಮ್ಮೊಮ್ಮೆ ದಾದಿಯರೇ ತುರ್ತು ಸಂದರ್ಭಗಳಲ್ಲಿ ಹೆರಿಗೆ ಮತ್ತು ಅಪಘಾತ ಪ್ರಕರಣಗಳನ್ನು ನಿಭಾಯಿಸುತ್ತಾರೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಡಿ.ಗ್ರೂಫ್ ನೌಕರರಿಗೆ ಸೇವಾ ಭದ್ರತೆ ಇರಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವವರಿಗೂ ಎಂಟು ತಿಂಗಳಿಂದ ವೇತನ, ಭತ್ಯೆ ನೀಡಿಲ್ಲ

ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್‌ ಇಲ್ಲದ ಕಾರಣ ಖಾಸಗಿ ಸಹಭಾಗಿತ್ವದ 108 ವಾಹನವನ್ನೇ ಅವಲಂಭಿಸಬೇಕಿದೆ. ಈ ಹಿಂದೆ ಕೆಟ್ಟುನಿಂತು ವಾಪಸ್ಸಾದ ಇಲ್ಲಿನ ತುರ್ತು ಚಿಕಿತ್ಸಾ ವಾಹನವನ್ನು ವಾಪಸ್‌ ತರುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಗಮನ ಹರಿಸುವರೆ ಎಂದು ಕಾದು ನೋಡಬೇಕಿದೆ?

● ಎಸ್‌.ಪುಟ್ಟಸ್ವಾಮಿ

 

Advertisement

Udayavani is now on Telegram. Click here to join our channel and stay updated with the latest news.

Next