Advertisement
ಜಿಲ್ಲೆಯಾದ್ಯಂತ ಕೊಳೆರೋಗದಿಂದ ರೈತರು ಕೋಟ್ಯಂತರ ರೂ. ನಷ್ಟ ಅನುಭವಿಸಿದ್ದಾರೆ. ಇದೇ ಪರಿಸ್ಥಿತಿ ಕುಪ್ಪೆಪದವು, ಎಡಪದವು ವ್ಯಾಪ್ತಿಯಲ್ಲೂ ನಡೆದಿದೆ. ಈ ಬಾರಿ ಎಡೆಬಿಡದೆ ಸುರಿದ ಮಳೆಯೇ ಕೊಳೆರೋಗ ಭಾದಿಸಲು ಕಾರಣವಾಗಿದೆ. ಕೊಳೆರೋಗ ನಿವಾರಣೆಗೆ ಔಷಧ ಸಿಂಪಡಿಸಲು ಎಡೆಬಿಡದೆ ಉಂಟಾದ ಮಳೆ ಅಡ್ಡಿಪಡಿಸಿದ್ದರಿಂದ ಈ ಭಾದೆ ಉಂಟಾಗಲು ಕಾರಣವಾಗಿದೆ. ಔಷಧ ಸಿಂಪಡಿಸಿದ ಬಳಿಕ ಕನಿಷ್ಠ ಎರಡು ಗಂಟೆಯಾದರೂ ಬಿಸಿಲು ಬಿದ್ದರೆ ಕೊಳೆರೋಗ ಬಾರದಂತೆ ತಡೆಗಟ್ಟುಲು ಸಾಧ್ಯವಾಗಬಹುದಿತ್ತು. ಆದರೆ ಈ ಬಾರಿ ಮಳೆಯಿಂದಾಗಿ ಇದು ಸಾಧ್ಯವಾಗಲಿಲ್ಲ ಎಂಬುವುದು ಕೃಷಿಕರ ಅಭಿಪ್ರಾಯ.
ಕಿಲೆಂಜಾರ್, ಕುಳವೂರು, ಮುತ್ತೂರು ಸೇರಿ ಹಲವಾರು ಪ್ರದೇಶದಲ್ಲಿ ರೋಗ ಬಾಧೆ ಉಂಟಾಗಿದ್ದು ಇಲ್ಲಿನ ಭಾಸ್ಕರ ಶೆಟ್ಟಿ ಬಾರ್ದಿಲ, ರಾಜೇಶ್ ಶೆಟ್ಟಿ ಉಳಿಪಾಡಿ, ದಯಾನಂದ ಶೆಟ್ಟಿ ಕುಳವೂರು ಅಪಾರ ನಷ್ಟ ಅನುಭವಿಸಿದ್ದಾರೆ. ಅಡಿಕೆಯು ಪಕ್ವವಾಗುವ ಮುನ್ನವೇ ಉದುರಿ ಬಿದ್ದು ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಸರಕಾರ ಸೂಕ್ತ ಪರಿಹಾರ ಕೊಡುವಂತೆ ಆಗ್ರಹಿಸಿದ್ದಾರೆ. ಕೊಳೆರೋಗ: ಅರ್ಜಿನೀಡಿ
ಕೊಳೆರೋಗ ನಷ್ಟ ಅನುಭವಿಸಿದ ಕೃಷಿಕರಿಗೆ ಪಂಚಾಯತ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಕೃಷಿಕರು ಗ್ರಾಮ ಕರಣಿಕರಲ್ಲಿ ಅಥವಾ ಪಂಚಾಯತ್ ಕಚೇರಿಗೆ ಆಗಮಿಸಿ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್ ಹಾಗೂ ಆರ್‌ಟಿಸಿ ಅಗತ್ಯವಿದ್ದು ಕೃಷಿಕರು ಅರ್ಜಿ ಸಲ್ಲಿಸಿದರೆ ಅದನ್ನು ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯವರು ಸ್ವೀಕರಿಸುತ್ತಾರೆ. ನಮ್ಮ ಪಂಚಾಯತ್‌ಗೆ ಇದುವರೆಗೆ ಹತ್ತು ಅರ್ಜಿಗಳು ಬಂದಿದೆ. ಈ ಬಗ್ಗೆ ಪಂಚಾಯತ್‌ನಲ್ಲಿ ಸಮಗ್ರ ಮಾಹಿತಿ ನೀಡಲಾಗುವುದು.
– ಡಾ| ಮನೋಹರ್,ಕುಪ್ಪೆಪದವು ಪಿಡಿಒ
Related Articles
ಈ ಬಾರಿ ಎಡೆಬಿಡದೆ ಉಂಟಾದ ಮಳೆಯಿಂದಾಗಿ ಕೊಳೆರೋಗ ಉಂಟಾಗಿದ್ದು, ಔಷ ಧ ಸಿಂಪಡಿಸಲು ಸಾಧ್ಯವಾಗಿಲ್ಲ. ಇದರಿಂದ ಅಡಿಕೆ ಉದುರಿ ಅಪಾರ ನಷ್ಟ ಉಂಟಾಗಿದೆ ಇದಕ್ಕೆ ಸೂಕ್ತ ಪರಿಹಾರ ಕೊಡಬೇಕು.
– ಭಾಸ್ಕರ ಶೆಟ್ಟಿ ಬಾರ್ದಿಲ, ಕೃಷಿಕರು
Advertisement
ಗಿರೀಶ್ ಮಳಲಿ