Advertisement
ಈ ಬಗ್ಗೆ ಹಿರಿಯ ನಾಯಕರ ಹಂತದಲ್ಲಿ ಚರ್ಚೆಯಾಗಿದೆ. ಅಷ್ಟೇ ಅಲ್ಲ, ಕೆ.ಆರ್.ಪೇಟೆಯ ನಾರಾಯಣಗೌಡರು ಪರಾಭವಗೊಂಡರೂ ಮಂತ್ರಿ ಸ್ಥಾನ ನೀಡಲಾಗುತ್ತದೆ ಎಂದು ಬಲ್ಲ ಮೂಲಗಳು ಹೇಳಿವೆ.ಜತೆಗೆ ವಿಶ್ವನಾಥ್, ರಮೇಶ್ ಜಾರಕಿಹೊಳಿ ಮತ್ತು ಎಂಟಿಬಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಸಮರ್ಥವಾಗಿ ಎದುರಿಸುವ, ಮಾತಿನಲ್ಲೇ ಹಣಿಯುವ ಚಾಕಚಕ್ಯತೆ ಇರುವುದರಿಂದ ಅದನ್ನು ಬಳಸಿಕೊಳ್ಳುವುದೂ ಹಿರಿಯ ನಾಯಕರ ಲೆಕ್ಕಾಚಾರವಾಗಿದೆ.
ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಸಚಿವ ಸ್ಥಾನ ಹಾಗೂ ಇತರೆ ಸ್ಥಾನಮಾನದ ಆಕಾಂಕ್ಷಿಗಳು ಲಾಬಿ ಶುರು ಮಾಡಲು ಅಣಿಯಾಗುತ್ತಿದ್ದಾರೆ. ಅದರ ಜತೆಯಲ್ಲೇ ಅನರ್ಹ ಶಾಸಕರ ಹಿತ ಕಾಪಾಡುವ ವಾಗ್ಧಾನ ಪಾಲನೆ ಬಗ್ಗೆಯೂ
ಮಾತುಕತೆ ಶುರುವಾಗಿದೆ. ಉಪಚುನಾವಣೆಯಲ್ಲಿ 9ರಿಂದ 10 ಸ್ಥಾನ ಗೆಲ್ಲುವ ವಿಶ್ವಾಸ ಬಿಜೆಪಿ ನಾಯಕರಲ್ಲಿದೆ. ಹುಣಸೂರು, ಕೆ.ಆರ್.ಪೇಟೆ, ಕಾಗವಾಡ, ಹೊಸಕೋಟೆ, ರಾಣಿಬೆನ್ನೂರು ಸೇರಿದಂತೆ ಕೆಲವೆಡೆ ತೀವ್ರ ಹಣಾಹಣಿ ನಡೆಯುವ ಸಾಧ್ಯತೆಯಿದ್ದು, ಯಾರೇ ಗೆದ್ದರೂ ಗೆಲುವಿನ ಅಂತರ ಕಡಿಮೆ ಎಂಬ
ಮಾತುಗಳಿವೆ.
Related Articles
Advertisement
ಸಚಿವ ಸ್ಥಾನಕ್ಕೆ 11 ಮಂದಿ ಪರಿಗಣನೆಉಪಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಷ್ಟೇ ಅನರ್ಹ ಶಾಸಕರು ಸ್ಪರ್ಧಿಸಿದ್ದಾರೆ.
ಶಿವಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಶರವಣ, ರಾಣಿಬೆನ್ನೂರಿನಿಂದ ಸ್ಪರ್ಧಿಸಿರುವ ಅರುಣ್ ಕುಮಾರ್
ಪೂಜಾರ್ ಅವರು ಒಂದೊಮ್ಮೆ ಗೆದ್ದರೂ ಸಚಿವರಾಗುವ ಸಾಧ್ಯತೆ ಕಡಿಮೆ. ಹಾಗಾಗಿ ಸಚಿವ ಸ್ಥಾನಕ್ಕೆ 11
ಮಂದಿಯನ್ನಷ್ಟೇ ಪರಿಗಣಿಸಬಹುದು. ಅದರಲ್ಲೂ ಕಡಿಮೆ ಬಾರಿ ಗೆದ್ದವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸದೆ
ಪ್ರಭಾವಿ ನಿಗಮ- ಮಂಡಳಿ ಅಧ್ಯಕ್ಷಗಿರಿ ಇಲ್ಲವೇ ಇತರೆ ಸ್ಥಾನಮಾನ ನೀಡಿ ಸಮಾಧಾನಪಡಿಸಬಹುದು.
ಆರ್.ಶಂಕರ್‌ಗೆ ಯಡಿಯೂರಪ್ಪನವರೇ ಸಚಿವ ಸ್ಥಾನದ ಭರವಸೆ ನೀಡಿರುವುದರಿಂದ, ಅವರನ್ನು
ಪರಿಷತ್‌ಗೆ ಕಳುಹಿಸಿ ಮಂತ್ರಿ ಪದವಿ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ. ಎಂ. ಕೀರ್ತಿಪ್ರಸಾದ್