ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಸೆನೆಟ್ ನಲ್ಲಿ ಭಾರಿ ಜಯವಾಗಿದೆ. ಸೆನೆಟ್ ನಲ್ಲಿ ಡೆಮಾಕ್ರೆಟಿಕ್ ಪಕ್ಷ ಮಂಡಿಸಿದ್ದ ವಾಗ್ದಂಡನೆಗೆ ಸೋಲಾಗಿದೆ. ಇದರಿಂದಾಗಿ ಅಧ್ಯಕ್ಷ ಟ್ರಂಪ್ ದಾರಿ ಸಲೀಸಲಾಗಿದೆ.
ಡೊನಾಲ್ಡ್ ಟ್ರಂಪ್ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಮತ್ತು ಸಂಸತ್ ತನಿಖೆಗೆ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಿ ಡೆಮಾಕ್ರೆಟಿಕ್ ಪಕ್ಷ ವಾಗ್ದಂಡನೆ ಮಂಡಿಸಿತ್ತು.
ಡೆಮಾಕ್ರೆಟಿಕ್ ಪಕ್ಷ ಮಾಡಿರುವ ವಾಗ್ದಂಡನೆ ದುರ್ಬಲವಾಗಿದ್ದು, ಇದು ಸಂವಿಧಾನದ ಅಪಾಯಕ ಕೃತ್ಯ ಎಂದು ಟ್ರಂಪ್ ಪರ ಕಾನೂನು ತಂಡ ವಾದಿಸಿತ್ತು. ಅಧ್ಯಕ್ಷರು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ವಾಗ್ದಂಡನೆಯನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿದ್ದರು.
ಬಳಿಕ ನಡೆದ ಮತದಾನದಲ್ಲಿ ಟ್ರಂಪ್ ಪರವಾಗಿ 52 ಮತಗಳು ಬಿದ್ದರೆ, ವಿರುದ್ಧವಾಗಿ 48 ಮತಗಳು ಲಭಿಸಿದ್ದವು. ಹೀಗಾಗಿ ಟ್ರಂಪ್ ವಾಗ್ದಂಡನೆಯಿಂದ ಮುಕ್ತಿ ಪಡೆದರು. ವಾಗ್ದಂಡನೆಯಿಂದ ಪಾರಾದ ಮೂರನೇ ಅಧ್ಯಕ್ಷ ಇವರಾಗಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಜೋ ಬಿಡೆನ್ ಅವರ ವ್ಯಕ್ತಿತ್ವಕ್ಕೆ ಚ್ಯತಿ ಬರುವ ಮಾಹಿತಿ ಬಹಿರಂಗಪಡಿಸುವಂತೆ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಅವರ ಮೇಲೆ ಒತ್ತಡ ಹಾಕಿರುವ ಆರೋಪವಿದೆ.