Advertisement

ಚೆನ್ನೈಗೆ ಸೋಲು; ಫೈನಲ್‌ಗೆ ನೆಗೆದ ಮುಂಬೈ

02:32 AM May 08, 2019 | sudhir |

ಚೆನ್ನೈ: ಮೂರು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಐಪಿಎಲ್‌ ಪ್ರಶಸ್ತಿ ಸುತ್ತಿಗೆ ನೆಗೆದಿದೆ. ಮಂಗಳವಾರ ರಾತ್ರಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ರೋಹಿತ್‌ ಪಡೆ ಹಾಲಿ ಚಾಂಪಿಯನ್‌ ಖ್ಯಾತಿಯ ಆತಿಥೇಯ ಚೆನ್ನೈಗೆ 6 ವಿಕೆಟ್‌ಗಳ ಸೋಲುಣಿಸಿ ಪರಾಕ್ರಮ ಮೆರೆಯಿತು.

Advertisement

ತವರಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಚೆನ್ನೈ 4 ವಿಕೆಟಿಗೆ ಕೇವಲ 131 ರನ್‌ ಗಳಿಸಿದರೆ, ಮುಂಬೈ 18.3 ಓವರ್‌ಗಳಲ್ಲಿ 4 ವಿಕೆಟಿಗೆ 132 ರನ್‌ ಬಾರಿಸಿತು. ಇದು ಪ್ರಸಕ್ತ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ ಮುಂಬೈ ಸಾಧಿಸಿದ ಹ್ಯಾಟ್ರಿಕ್‌ ಗೆಲುವು. ಪರಾಜಿತ ಧೋನಿ ಪಡೆಗೆ ಇನ್ನೂ ಒಂದು ಅವಕಾಶವಿದ್ದು, ಶುಕ್ರವಾರದ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಬೇಕಿದೆ.

ರೋಹಿತ್‌ ಶರ್ಮ ಮತ್ತು ಡಿ ಕಾಕ್‌ ಅವರನ್ನು 12 ರನ್‌ ಆಗುವಷ್ಟರಲ್ಲಿ ಕಳೆದುಕೊಂಡ ಮುಂಬೈ ಭಾರೀ ಆಘಾತ ಎದುರಿಸಿತು. ಆದರೆ ಸೂರ್ಯಕುಮಾರ್‌ ಯಾದವ್‌ ಮತ್ತು ಇಶಾನ್‌ ಕಿಶನ್‌ ಸೇರಿಕೊಂಡು ಚೆನ್ನೈ ದಾಳಿಗೆ ದಿಟ್ಟ ಉತ್ತರ ನೀಡಿದರು. 3ನೇ ವಿಕೆಟಿಗೆ 80 ರನ್‌ ಹರಿದು ಬಂತು. ಯಾದವ್‌ ಅಜೇಯ 71 ರನ್‌ (54 ಎಸೆತ, 10 ಬೌಂಡರಿ) ಬಾರಿಸಿ ಮೆರೆದರು.

ಸ್ಪಿನ್ನರ್‌ಗಳ ಪರಾಕ್ರಮ
ಮುಂಬೈ ಸ್ಪಿನ್ನರ್‌ಗಳ ಜಬರ್ದಸ್ತ್ ಪ್ರದರ್ಶನದಿಂದಾಗಿ ಚೆನ್ನೈರನ್ನಿಗಾಗಿ ತಿಣುಕಾಡಿತು. ಆರಂಭಿಕರಾದ ಡು ಪ್ಲೆಸಿಸ್‌ (6), ಶೇನ್‌ ವಾಟ್ಸನ್‌ (10) ಮತ್ತು ಸುರೇಶ್‌ ರೈನಾ (5) 32 ರನ್‌ ಆಗುವಷ್ಟರಲ್ಲಿ ಆಟ ಮುಗಿಸಿ ವಾಪಸಾದರು.
ಈ ಹಂತದಲ್ಲಿ ಜತೆಗೂಡಿದ ಮುರಳಿ ವಿಜಯ್‌ ಮತ್ತು ಅಂಬಾಟಿ ರಾಯುಡು ಸ್ವಲ್ಪ ಹೊತ್ತು ಆಧಾರವಾಗಿ ನಿಂತರು. 4ನೇ ವಿಕೆಟಿಗೆ 33 ರನ್‌ ಒಟ್ಟುಗೂಡಿಸಿದರು.

ರಾಯುಡು-ಧೋನಿ ಅಜೇಯ
4ನೇ ವಿಕೆಟ್‌ ಪತನದ ಬಳಿಕ ತಂಡಕ್ಕೆ ಹಾನಿಯಾಗದಂತೆ ನೋಡಿಕೊಂಡ ರಾಯುಡು-ಧೋನಿ 48 ಎಸೆತಗಳಿಂದ ಮುರಿಯದ 5ನೇ ವಿಕೆಟಿಗೆ 66 ರನ್‌ ಒಟ್ಟುಗೂಡಿಸಿತು. ರಾಯುಡು 37 ಎಸೆತಗಳಿಂದ ಸರ್ವಾಧಿಕ 42 ರನ್‌ ಹೊಡೆದರು (3 ಬೌಂಡರಿ, 1 ಸಿಕ್ಸರ್‌). ಧೋನಿ ಕೊಡುಗೆ 37 ರನ್‌. 29 ಎಸೆತಗಳ ಈ ಆಟದಲ್ಲಿ 3 ಸಿಕ್ಸರ್‌ ಒಳಗೊಂಡಿತ್ತು. ಮುಂಬೈ ಪರ ಚಹರ್‌ 14 ರನ್ನಿಗೆ 2 ವಿಕೆಟ್‌ ಹಾರಿಸಿ ಅಮೋಘ ಬೌಲಿಂಗ್‌ ಪ್ರದರ್ಶನವಿತ್ತರು. ಬುಮ್ರಾ ಕೊನೆಯ ಓವರ್‌ನಲ್ಲಿ ಅಮೋಘ ನಿಯಂತ್ರಣ ಸಾಧಿಸಿ ಕೇವಲ 9 ರನ್‌ ನೀಡಿದರು.

Advertisement

ಸ್ಕೋರ್‌ಪಟ್ಟಿ
ಚೆನ್ನೈ ಸೂಪರ್‌ ಕಿಂಗ್ಸ್‌
ಫಾ ಡು ಪ್ಲೆಸಿಸ್‌ ಸಿ ಅನ್ಮೋಲ್‌ ಬಿ ಚಹರ್‌ 6
ಶೇನ್‌ ವಾಟ್ಸನ್‌ ಸಿ ಜಯಂತ್‌ ಬಿ ಕೆ.ಪಾಂಡ್ಯ 10
ಸುರೇಶ್‌ ರೈನಾ ಸಿ ಮತ್ತು ಬಿ ಜಯಂತ್‌ 5
ಮುರಳಿ ವಿಜಯ್‌ ಸಿ ಡಿ ಕಾಕ್‌ ಬಿ ಚಹರ್‌ 26
ಅಂಬಾಟಿ ರಾಯುಡು ಔಟಾಗದೆ 42
ಎಂ.ಎಸ್‌. ಧೋನಿ ಔಟಾಗದೆ 37
ಇತರ 5
ಒಟ್ಟು (4 ವಿಕೆಟಿಗೆ) 131
ವಿಕೆಟ್‌ ಪತನ: 1-6, 2-12, 3-32, 4-65.
ಬೌಲಿಂಗ್‌:
ಲಸಿತ ಮಾಲಿಂಗ 3-0-26-0
ಕೃಣಾಲ್‌ ಪಾಂಡ್ಯ 4-0-21-1
ರಾಹುಲ್‌ ಚಹರ್‌ 4-0-14-2
ಜಯಂತ್‌ ಯಾದವ್‌ 3-0-25-1
ಜಸ್‌ಪ್ರೀತ್‌ ಬುಮ್ರಾ 4-0-31-0
ಹಾರ್ದಿಕ್‌ ಪಾಂಡ್ಯ 2-0-13-0

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಎಲ್‌ಬಿಡಬ್ಲ್ಯು ಚಹರ್‌ 4
ಕ್ವಿಂಟನ್‌ ಡಿ ಕಾಕ್‌ ಸಿ ಡು ಪ್ಲೆಸಿಸ್‌ ಬಿ ಹರ್ಭಜನ್‌ 8
ಸೂರ್ಯಕುಮಾರ್‌ ಔಟಾಗದೆ 71
ಇಶಾನ್‌ ಕಿಶನ್‌ ಬಿ ತಾಹಿರ್‌ 28
ಕೃಣಾಲ್‌ ಪಾಂಡ್ಯ ಸಿ ಮತ್ತು ಬಿ ತಾಹಿರ್‌ 0
ಹಾರ್ದಿಕ್‌ ಪಾಂಡ್ಯ ಔಟಾಗದೆ 13
ಇತರ 8
ಒಟ್ಟು (18.3 ಓವರ್‌ಗಳಲ್ಲಿ 4 ವಿಕೆಟಿಗೆ) 132
ವಿಕೆಟ್‌ ಪತನ: 1-4, 2-21, 3-101, 4-101.
ಬೌಲಿಂಗ್‌:
ದೀಪಕ್‌ ಚಹರ್‌ 3.3-0-30-1
ಹರ್ಭಜನ್‌ ಸಿಂಗ್‌ 4-0-25-1
ರವೀಂದ್ರ ಜಡೇಜ 4-0-18-0
ಡ್ವೇನ್‌ ಬ್ರಾವೊ 3-0-25-0
ಇಮ್ರಾನ್‌ ತಾಹಿರ್‌ 4-0-33-2

Advertisement

Udayavani is now on Telegram. Click here to join our channel and stay updated with the latest news.

Next