Advertisement

“ಸೋಲು, ಕಷ್ಟ, ನಷ್ಟಗಳನ್ನು ಮನಗಂಡರೆ ಸಾಧನೆ’

10:00 PM May 06, 2019 | Team Udayavani |

ನೆಹರೂನಗರ: ಪ್ರತಿಯೊಬ್ಬನ ಜೀವನ ಶೂನ್ಯದಿಂದ ಆರಂಭವಾದರೆ ಬದುಕಿನಲ್ಲಿ ಯಶಸ್ಸು ಖಂಡಿತ. ಸೋಲು, ಕಷ್ಟ, ನಷ್ಟಗಳನ್ನು ಮನಗಂಡರೆ ಸಾಧನೆ ಸುಲಭ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಹೇಳಿದರು.

Advertisement

ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ಅಂತಿಮ ವರ್ಷದ ಸ್ನಾತ ಕೋತ್ತರ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳ ಮೂಲಕ ಸಾಧನೆಯನ್ನು ಮಾಡಿ ಹೆಸರು ಗಳಿಸಬಹುದು. ಸಮಾಜದಲ್ಲಿ ವ್ಯಕ್ತಿತ್ವಕ್ಕೆ ಮೊದಲ ಗೌರವ. ಹಾಗಾಗಿ ಆತನ ಗುಣ, ನಡತೆ ಅಥವಾ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಪ್ರತಿಯೊಬ್ಬನ ಕೆಲಸ. ಯಾವುದೇ ವ್ಯಕ್ತಿ ಸಮಾಜದಲ್ಲಿ ಮುಂದೊಂದು ದಿನ ದೊಡ್ಡ ವ್ಯಕ್ತಿಯಾದಾಗ ಜೀವನ ಕ್ರಮವನ್ನು ಅರ್ಥ ಮಾಡಿಕೊಂಡು ಜೀವಿಸಬೇಕು ಎಂದು ಹೇಳಿದರು.

ಮೌಲ್ಯಯುತ ಶಿಕ್ಷಣ
ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ಸಂಯೋಜಕಿ
ಡಾ| ವಿಜಯಾ ಸರಸ್ವತಿ ಮಾತನಾಡಿ, ಕಾಲೇಜಿನಲ್ಲಿ ಪಠ್ಯ ವಿಷಯದ ಜೊತೆಗೆ ಜೀವನ ನಡೆಸುವ ಮೌಲ್ಯಯುತ ಶಿಕ್ಷಣವನ್ನು ಪಡೆಯುವ ಅವಕಾಶ ಲಭಿಸಿದೆ. ಇವುಗಳನ್ನು ಸರಿಯಾಗಿ ಜೀವನದಲ್ಲಿ ಉಪಯೋಗಿಸಿಕೊಂಡು ಸಾಧನೆ ಮಾಡುವಂತಾಗಲಿ ಎಂದರು.

ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ವಿಜಯ ಗಣಪತಿ ರಮೇಶ ಕಾರಂತ ಶುಭಹಾರೈಸಿದರು. ಸ್ನಾತಕೋತ್ತರ ವಾಣಿಜ್ಯ, ರಸಾಯನಶಾಸ್ತ್ರ, ಪತ್ರಿಕೋ ದ್ಯಮ ವಿಭಾಗದ ಉಪ ನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಮಧುರಾ ಸ್ವಾಗತಿಸಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮೀ ವಂದಿಸಿ ದರು. ಉಪನ್ಯಾಸಕಿಯರಾದ ಅನನ್ಯಾ ಮತ್ತು ರಾಧಿಕಾ ಕಾನತ್ತಡ್ಕ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next