ಈ ಸಂಬಂಧ ಪರಿಷತ್ತಿನ ಹಾಲಿ ಕಾರ್ಯಕಾರಿ ಸಮಿತಿ ಈಗಾಗಲೇ ನುರಿತ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಿರತವಾಗಿದೆ. ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
Advertisement
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಚುನಾವಣೆಗೆ ಸ್ಪರ್ಧಿಸುವವರಿಗೆ ಠೇವಣಿ ಮೊತ್ತವೂ ಕಡಿಮೆ. ಠೇವಣಿ ಮೊತ್ತ ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಎರಡು ಅಥವಾ ಮೂರು ಬಾರಿ ನಿರಂತರವಾಗಿ ಠೇವಣಿ ಕಳೆದು ಕೊಂಡರೆ ಮತ್ತೆ ಸ್ಪರ್ಧಿಸುವುದನ್ನು ತಡೆಯುವ ನಿಯಮ ರೂಪಿಸಲಾಗು ವುದು ಎಂದು ಹೆಸರ ಹೇಳಲು ಇಚ್ಛಿಸದ ಕಸಾಪದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲಾವಾರು ಕೇಂದ್ರಗಳಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ದವರೇ ಮತ್ತೆಮತ್ತೆ ಗೆದ್ದು ಬರುತ್ತಿದ್ದಾರೆ. ಪರಿಷತ್ತಿನಲ್ಲಿ ಹೊಸಬರಿಗೂ ಅವಕಾಶ ಕಲ್ಪಿಸಲು ಪೂರಕವಾಗಿ ಕೆಲವು ಬದಲಾವಣೆ ತರಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಮಹೇಶ ಜೋಷಿ ಹೇಳಿದ್ದಾರೆ. ಇದನ್ನೂ ಓದಿ:29 ಹುಲಿಗಳಿಗೆ ಜನ್ಮನೀಡಿ, 17 ವರ್ಷದಷ್ಟು ದೀರ್ಘಾವಧಿ ಬದುಕಿದ ಮಹಾಮಾತೆ ನಿಧನ
Related Articles
ಈ ಹಿಂದೆ ಮನು ಬಳಿಗಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ವೇಳೆ ಪರಿಷತ್ತಿನ ಬೈಲಾದಲ್ಲಿ ಹಲವು ಬದಲಾವಣೆ ಮಾಡಿದ್ದರು. ಪರಿಷತ್ತಿನ ಸರ್ವಸದಸ್ಯರ ವಿಶೇಷ ಸಭೆಯನ್ನು ಉಡುಪಿಯ ಕೋಟದಲ್ಲಿ ಕರೆದು 3 ವರ್ಷವಿದ್ದ ಕಾರ್ಯಕಾರಿಣಿ ಅವಧಿಯನ್ನು 5 ವರ್ಷಕ್ಕೆ ಏರಿಸಿದ್ದರು. ಆ ವೇಳೆ 250 ರೂ.ಇದ್ದ ಆಜೀವ ಸದಸ್ಯತ್ವ ಶುಲ್ಕವನ್ನು 500 ರೂ.ಗೆ ಹೆಚ್ಚಿಸಿದ್ದರು. ಈ ಶುಲ್ಕವನ್ನು ಇಳಿಸುವುದು ಹಾಗೂ ಚುನಾವಣ ವೆಚ್ಚಗಳನ್ನು ತಗ್ಗಿಸುವ ನಿಟ್ಟಿನಲ್ಲೂ ಸುಧಾರಣೆ ತರುವ ನಿರೀಕ್ಷೆಯಿದೆ.
Advertisement
ಪರಿಷತ್ತಿನ ಬೈಲಾಕ್ಕೆ ಕೆಲವು ಬದಲಾವಣೆ ಆಗಬೇಕಿದೆ. ಹೊಸಬರಿಗೆ ಅವಕಾಶ ಸಿಗಬೇಕು ಎಂಬ ಕಾರಣಕ್ಕಾಗಿ ಒಬ್ಬರಿಗೆ ಒಂದೇ ಅವಕಾಶ ಎಂಬ ಕಾನೂನು ಜಾರಿಗೆ ತರುವ ಆಲೋಚನೆಯಿದೆ.– ಡಾ| ಮಹೇಶ ಜೋಷಿ,
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್