Advertisement
ಆ್ಯಪಲ್ ಸೈಡರ್ ವಿನೇಗರ್ ಆ್ಯಸಿಟಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತ¨. ರಕ್ತವು ಹೆಚ್ಚು ಕೊಬ್ಬನ್ನು ಹೀರಿಕೊಳ್ಳದಂತೆ ತಡೆಯುತ್ತದೆ. ತೂಕ ಇಳಿಸಲು ಸಹಾಯವಾಗುತ್ತದೆ. ಆ್ಯಪಲ್ ಸೈಡರ್ ವಿನೇಗರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಕಿಣ್ವಗಳನ್ನು ಹೊಂದಿರುತ್ತದೆ. ಇದರಿಂದ ಹಸಿವಿನ ಪ್ರಮಾಣ ಕಡಿಮೆಯಾಗುತ್ತದೆ.
ಸಲಾಡ್‌ನಲ್ಲಿಯೂ ಆ್ಯಪಲ್ ಸೈಡರ್ ವಿನೇಗರ್ ಬಳಸಬಹುದು. 50 ಮಿಲಿ ನೀರು, 50 ಮಿಲಿ ಆ್ಯಪಲ್ ಸೈಡ ರಲ್ ವಿನೇಗರ್, ಅರ್ಧ ಚಮಚ ಕರಿಮೆಣಸು ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಆಯ್ಕೆಯ ತರಕಾರಿಯೊಂದಿಗೆ ಒಂದು ಬೌಲ್‌ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸೇವಿಸಿ. ಸೇವನೆ ಹೇಗೆ?
8- 10 ಗ್ಲಾಸ್ ನೀರಿಗೆ 2- 3 ಚಮಚ ಆ್ಯಪಲ್ ಸೈಡರ್ ವಿನೇ ಗರ್ ಸೇವಿಸಿ ಒಂದು ಚಮಚ ನಿಂಬೆ ರಸ, ಒಂದು ಚಮಚ ದಾಲಿcನ್ನಿ ಪುಡಿ ಹಾಕಿ ಇಡಿ. ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಸೇವಿಸಿ. ಇದನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದು, ತಂಪು ಪಾನೀಯವಾಗಿ ಬಳಸಬಹುದು.
Related Articles
Advertisement
- ಧನ್ಯಶ್ರೀ ಬೋಳಿಯಾರ್