Advertisement
ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯಲಿದೆ ಹಾಗೂ ಲಾರಿ, ಟೆಂಪೋಗಳು ಸದ್ಯ ಖಾಸಗಿ ಮೈದಾನದಲ್ಲಿ ಇರುವುದರಿಂದ ಅಲ್ಲೇ ಇರಲಿವೆ. ನಮ್ಮ ಸಮಸ್ಯೆ ಬಗೆಹರಿವ ವರೆಗೂ ಮುಷ್ಕರ ಕೈಬಿಡುವುದಿಲ್ಲ. ಜಿಲ್ಲಾಡಳಿತ ಸಹಿತ ಎಲ್ಲರೂ ನಮ್ಮ ಸಮಸ್ಯೆ ಆಲಿಸುತ್ತಿದ್ದಾರೆಯೇ ಹೊರತು ಪರಿಹಾರ ನೀಡುತ್ತಿಲ್ಲ ಎಂದು ಒಕ್ಕೂಟದ ರಾಘವ ಶೆಟ್ಟಿ ತಿಳಿಸಿದ್ದಾರೆ.
ಲಾರಿ, ಟೆಂಪೋ ಮಾಲಕರ ಮುಷ್ಕರ ಹಾಗೂ ಜಿಲ್ಲೆಯ ಕಟ್ಟಡ ಸಾಮಗ್ರಿ ಸಾಗಾಟ ಸಮಸ್ಯೆ ಕುರಿತು ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಶೀಘ್ರವೇ ಮುಖ್ಯಮಂತ್ರಿ ಯವರನ್ನು ಭೇಟಿಯಾಗಿ ಮನವಿ ಸಲ್ಲಿಸುವ ಸಾಧ್ಯತೆಯಿದೆ. ಜಿಲ್ಲೆಯ ಶಾಸಕರು ಮಂಗಳವಾರ ಲಾರಿ, ಟೆಂಪೋ ಮಾಲಕರ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.