Advertisement
ಥರ್ಡ್ ಪಾರ್ಟಿ ಪ್ರೀಮಿಯಮ್ ಏಕಾಏಕಿ 27 ಸಾವಿರದಿಂದ 37 ಸಾವಿರಕ್ಕೆ ಹೆಚ್ಚಿಸಿರುವುದನ್ನು ಕೈ ಬಿಡುವುದು ಒಳಗೊಂಡಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಕ್ಷಿಣ ಭಾರತ ಲಾರಿ ಮಾಲಿಕರ ಸಂಘ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ಜಿಲ್ಲೆಯಲ್ಲಿ 5 ಸಾವಿರಕ್ಕೂ ಅಧಿಕ ಲಾರಿಗಳು ಕಳೆದ 5 ದಿನದಿಂದ ರಸ್ತೆಗೆ ಇಳಿಯದ ಕಾರಣ ದಿನಕ್ಕೆ ಕೋಟ್ಯಂತರ ನಷ್ಟ ಆಗುತ್ತಿದೆ.
Related Articles
Advertisement
ನಗರದಲ್ಲಿ 50-60 ಲಕ್ಷ ನಷ್ಟ…: ಲಾರಿ ಮುಷ್ಕರದಿಂದ ವಾಣಿಜ್ಯ ನಗರಿ ದಾವಣಗೆರೆಯಲ್ಲಿ 2 ಸಾವಿರ ಲಾರಿ, 500ಕ್ಕೂ ಹೆಚ್ಚು ಮಿನಿ ಲಾರಿಗಳು ರಸ್ತೆಗೆ ಇಳಿಯದೇ ಈವರೆಗೆ 50-60 ಲಕ್ಷ ನಷ್ಟವಾಗಿದೆ. ಸರಕು, ತರಕಾರಿ ಸಾಗಾಣಿಕೆಯಿಂದ ಪ್ರತಿ ದಿನ 8 ರಿಂದ 10 ಲಕ್ಷದ ವರೆಗೆ ವಹಿವಾಟು ನಡೆಯುತ್ತಿತ್ತು.
ಮುಷ್ಕರದಿಂದಾಗಿ ಅನಿವಾರ್ಯದ ರಜೆಯಲ್ಲಿರುವ ಚಾಲಕರು, ಕೀÉನರ್ ಇತರರು ದಿನ ಲಾರಿ ನಿಲ್ಲಿಸಿರುವ ಸ್ಥಳಕ್ಕೆ ಬರುವುದು, ಸಾಕಾಗುವಷ್ಟು ಕಾಲ ಅಲ್ಲೇ ಇರುವುದು, ಮನೆಗೆ ತೆರಳುವುದು ಸಾಮಾನ್ಯ. ಲಾರಿ ನಿಂತಿರುವುದು ದೈನಂದಿಕ ಜೀವನ ನಿರ್ವಹಣೆಯ ತೊಂದರೆಗೆ ಕಾರಣವಾಗುತ್ತದೆ. ಅವರಲ್ಲಿ ಚಿಂತೆ ಹೆಚ್ಚಾಗುತ್ತಿದೆ. ಸರ್ಕಾರ ಏನಾದರೂ ಮಾಡಿ ಸಮಸ್ಯೆ ಬಗೆಹರಿಸಿದರೆ ಸಾಕು ಎನ್ನುವ ಭಾವನೆ ವ್ಯಕ್ತವಾಗುತ್ತಿದೆ.
ಮಾರ್ಕೇಟ್ ಭಣ ಭಣ…: ಲಾರಿ ಮುಷ್ಕರದಿಂದ ಸದಾ ಗಿಜಿಗುಡುತ್ತಿದ್ದ ಈರುಳ್ಳಿ, ಎಪಿಎಂಸಿ ಮಾರ್ಕೆಟ್‌ನಲ್ಲಿ ಎಲ್ಲಾ ವಹಿವಾಟು ಸ್ತಬ್ದ. ದಿನಕ್ಕೆ 10-20 ಲಾರಿ ಲೋಡ್ ಈರುಳ್ಳಿ ಬೇರೆ ಕಡೆಗೆಲ್ಲಾ ಟ್ರಾನ್ಸ್‌ಪೊàರ್ಟ್ ಆಗುತ್ತಿತ್ತು. ಬೇರೆ ಕಡೆಯಿಂದ ಸಾಕಷ್ಟು ಮಾಲು(ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ) ಬರುತ್ತಿತ್ತು. ಏ. 1 ರಿಂದ ಎಲ್ಲವೂ ನಿಂತಿದೆ. ಮುಷ್ಕರ ಇನ್ನೂ ಮುಂದುವರೆಯುತ್ತೆ ಎನ್ನಲಾಗುತ್ತಿದೆ.
ಹಾಗಾಗಿ ನಾವು ಲಾಸ್ ಅನುಭವಿಸಲೇಬೇಕಾಗುತ್ತದೆ ಎನ್ನುತ್ತಾರೆ ಈರುಳ್ಳಿ ವರ್ತಕರಾದ ಎಸ್.ವಿ.ಟಿ. ರಾಜಣ್ಣ ಇತರರು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಎಲ್ಲಿಯೋ ಒಂದರೆಡು ಕಡೆ ಮೆಕ್ಕೆಜೋಳ, ಭತ್ತದ ತೂಕ ನಡೆಯುತ್ತಿದೆ. ಬೇರೆ ಕಡೆಯಿಂದ ಬಂದು ನಿಂತಿರುವ ಲಾರಿ ಬಿಟ್ಟರೆ ಧಾವಂತದಿಂದ ದೌಡಾಯಿಸುತ್ತಿದ್ದ ಲಾರಿಗಳು ಈಗ ಕಂಡು ಬರುತ್ತಿಲ್ಲ.
* ರಾ.ರವಿಬಾಬು