Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಮಾತನಾಡಿ, ಜು.20ರಿಂದ ನಡೆಯಲಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತರಕಾರಿ ಸಾಗಣೆ ಲಾರಿಗಳ ಮಾಲೀಕರು ಸೇರಿ ಎಲ್ಲ ಸರಕು ಸಾಗಣೆ ವಾಹನಗಳ ಮಾಲೀಕರು-ಚಾಲಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಔಷಧ ಮತ್ತು ಹಾಲು ಸಾಗಣೆ ವಾಹನಗಳನ್ನು ಹೊರತುಪಡಿಸಿ ದೇಶದಾದ್ಯಂತ 90 ಲಕ್ಷಕ್ಕೂ ಅಧಿಕ ಮತ್ತು ರಾಜ್ಯಾದ್ಯಂತ 6 ಲಕ್ಷಕ್ಕೂ ಅಧಿಕ ಲಾರಿಗಳು ರಸ್ತೆಗಿಳಿಯುವುದಿಲ್ಲ ಎಂದರು.
Related Articles
Advertisement
ಟೋಲ್ ಪ್ಲಾಜಾಗಳಲ್ಲಿ ಪ್ರತಿ ವಾಹನ 15 ರಿಂದ 20 ನಿಮಿಷಗಳ ಕಾಲ ನಿಂತು ಹೋಗುವುದರಿಂದ ಗಾಳಿಯಲ್ಲಿ ವ್ಯರ್ಥವಾಗುವ ಡೀಸೆಲ್ ಹಾಗೂ ಸಮಯ, ವಾಹನದ ರಿಪೇರಿ ಮತ್ತು ಟೋಲ್‌ಗಳ ನಿರ್ವಹಣಾ ವೆಚ್ಚಗಳಿಂದ 84 ಸಾವಿರ ಕೋಟಿ ರೂ.ಗಳ ನಷ್ಟವಾಗುತ್ತಿದೆ ಎಂದು ಐಐಎಂ ಸಂಸ್ಥೆ ವರದಿ ನೀಡಿದೆ. ಇದನ್ನೆಲ್ಲಾ ಪರಿಗಣಿಸಿ ಕೇಂದ್ರ ಸರ್ಕಾರ ಟೋಲ್ ಮುಕ್ತ ಭಾರತ ಮಾಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಡೀಸೆಲ್‌ನ್ನು ಜಿಎಸ್‌ಟಿಯಡಿ ತರಬೇಕು. ಮೂರನೇ ವ್ಯಕ್ತಿ ವಿಮಾ ಪಾಲಿಸಿ ದರ ಕಡಿತಗೊಳಿಸಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಟಿಡಿಎಸ್ ರದ್ದುಗೊಳಿಸಬೇಕು. ಪೂರ್ವ ಭಾವಿ ಆದಾಯ ಕಾಯ್ದೆ ಪರಿವರ್ತಿಸಬೇಕು. ಈ-ವೇ ಬಿಲ್ ಕುರಿತ ಸಮಸ್ಯೆ ಬಹೆಗರಿಸಬೇಕು. ಪ್ರವಾಸಿ ವಾಹನ ಹಾಗೂ ಬಸ್‌ಗಳಿಗೆ ರಾಷ್ಟ್ರೀಯ ಪರವಾನಗಿ ನೀಡಬೇಕು ಎಂದು ಮನವಿ ಮಾಡಿದರು.