Advertisement

Katapadi: ಕೊರಗಜ್ಜನಿಗೆ ಲಾರಿ, ಟೆಂಪೋ ಮಾಲಕರ ಮೊರೆ

04:49 PM Sep 29, 2023 | Team Udayavani |

ಕಟಪಾಡಿ: ಕಟ್ಟಡ ಸಾಮಗ್ರಿ ಸಾಗಾಟದ ಲಾರಿ, ಟೆಂಪೋ ಮಾಲಕರ ಸಂಘದ ಒಕ್ಕೂಟದ ವತಿಯಿಂದ ತಮಗೆ ಉಂಟಾಗುತ್ತಿರುವ ಸಮಸ್ಯೆಗೆ ಪರಿಹಾರ, ದುಡಿಯುವ ಕೈಗಳಿಗೆ ನ್ಯಾಯವನ್ನು ಒದಗಿಸಬೇಕು ಎಂಬ ನಿಟ್ಟಿನಲ್ಲಿ ಕಟಪಾಡಿಯ ಶ್ರೀ ಕ್ಷೇತ್ರ ಪೇಟೆಬೆಟ್ಟು
ಭಗವಾನ್‌ ಶ್ರೀ ಬಬ್ಬುಸ್ವಾಮಿ, ಶ್ರೀ ಸ್ವಾಮಿ ಕೊರಗಜ್ಜನಿಗೆ ಮೊರೆ ಹೋದ ಘಟನೆಯು ಸೆ.28ರಂದು ನಡೆದಿದೆ.

Advertisement

ರಾ.ಹೆ.66ರ ಉದ್ಯಾವರ ಬಲಾಯಿಪಾದೆ ಬಳಿ ದಿಢೀರ್‌ ಸುಮಾರು 200ಕ್ಕೂ ಅಧಿಕ ವಾಹನಗಳನ್ನು ನಿಲುಗಡೆಗೊಳಿಸಿ
ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯ ಹೊಸ ನಿಯಮದಿಂದ ಉಂಟಾಗುತ್ತಿರುವ ಸಮಸ್ಯೆಯ ವಿರುದ್ಧ ಮೌನ ಪ್ರತಿಭಟನೆಯು ಎರಡನೇ ದಿನವೂ ಮುಂದುವರೆದಿದ್ದು, ಸಂಘಟನೆಯವರು ಒಟ್ಟಾಗಿ ಕಟಪಾಡಿಯಲ್ಲಿನ ಕೊರಗಜ್ಜನ ದೈವಸ್ಥಾನಕ್ಕೆ ತೆರಳಿ ತೊಂದರೆಗೆ ಪರಿಹಾರ ಹಾಗೂ ಪರಿಹಾರ ಕಲ್ಪಿಸುವವರಿಗೆ ಸಮಸ್ಯೆಯನ್ನು ಅರ್ಥ ಆಗಿಸುವಂತೆ
ಪ್ರಾರ್ಥನೆಯನ್ನು ಸಲ್ಲಿಸಲಾಗಿದೆ ಎಂದು ಕಟ್ಟಡ ಸಾಮಗ್ರಿ ಸಾಗಾಟದ ಟೆಂಪೋ ಲಾರಿ ಮಾಲಕರ ಸಂಘದ ಕಟಪಾಡಿ
ವಲಯದ ಅಧ್ಯಕ್ಷರಾದ ಚಂದ್ರ ಪೂಜಾರಿ, ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಉಡುಪಿ ವಲಯಾಧ್ಯಕ್ಷ ರಮೇಶ್‌
ಶೆಟ್ಟಿ ಹೆರ್ಗ, ಮನೋಹರ್‌ ಕುಂದರ್‌, ಗಿರೀಶ್‌ ಉದ್ಯಾವರ, ಕೃಷ್ಣ ಅಂಬಲಪಾಡಿ, ಹರೀಶ್‌ ಪೂಜಾರಿ ಸಂತೆಕಟ್ಟೆ ಮಾಹಿತಿ
ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next