ಚಾಮರಾಜನಗರ: ಮಾಸ್ಕ್ ಹಾಕಿಕೊಳ್ಳಿ ಎಂದು ಜನರಿಗೆ ತಿಳಿ ಹೇಳಬೇಕಾದ ಪೊಲೀಸರೇ ಮಾಸ್ಕ್ ಹಾಕದೇ ಚೆಕ್ ಪೋಸ್ಟ್ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಅವರಿಗೆ ಲಾರಿ ಚಾಲಕನೋರ್ವ ಮಾಸ್ಕ್ ಹಾಕಿ, ಚೆಕ್ ಮಾಡಿ ಎಂದು ಬುದ್ದಿ ಹೇಳುವ ವಿಡಿಯೋ ವೈರಲ್ ಆಗಿದೆ.
ಜಿಲ್ಲೆಯ ಪುಣಜನೂರು ಚೆಕ್ ಪೋಸ್ಟ್ ನಲ್ಲಿ ಪೂರ್ವ ಪೊಲೀಸ್ ಠಾಣೆಯ ಎಎಸ್ ಐ ಓರ್ವರು ತಮಿಳುನಾಡಿನಿಂದ ಬರುವ ವಾಹನಗಳ ದಾಖಲಾತಿ ಪರೀಕ್ಷೆ ಮಾಡುವಾಗ ಈ ಪ್ರಸಂಗ ನಡೆದಿದೆ.
ಇದನ್ನೂ ಓದಿ:ನಂದಿಗಿರಿಧಾಮದಲ್ಲಿ ಹರಿದುಬಂದ ಜನಸಾಗರ; ಕಣ್ಮರೆಯಾದ ಕೋವಿಡ್ ರೂಲ್ಸ್!
ತಮಿಳುನಾಡಿನ ಲಾರಿ ಚಾಲಕನ ದಾಖಲೆಗಳನ್ನು ನೋಡಿದ ಎಎಸ್ ಐ ಅದನ್ನು ವಾಪಸ್ ಚಾಲಕನಿಗೆ ನೀಡುತ್ತಾರೆ. ಆಗ ಚಾಲಕ ನೀವು ಮಾಸ್ಕ್ ಹಾಕದೇ ಹೀಗೆ ಪರಿಶೀಲನೆ ಮಾಡುವುದು ಸರಿಯಲ್ಲ. ಮಾಸ್ಕ್ ಹಾಕಿ ಎನ್ನುತ್ತಾನೆ. ನಂತರ ಆ ಎ ಎಸ್ ಐ ಮಾಸ್ಕ್ ಹಾಕಿಕೊಳ್ಳುತ್ತಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ವಿಡಿಯೋ;ಪೊಲೀಸರಿಗೆ ಮಾಸ್ಕ್ ಹಾಕಿಕೊಳ್ಳಿ ಎಂದ ಲಾರಿ ಚಾಲಕ! ವಿಡಿಯೋ ವೈರಲ್