Advertisement
ಟೀ ವಿರಾಮದ ಬಳಿಕ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡಿದ್ದು 335 ರನ್ ಗಳಿಸಿ ಆಡುತ್ತಿದೆ. ಸದ್ಯ 228 ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಬೇರ್‌ಸ್ಟೊ ಮತ್ತು ವೋಕ್ಸ್ ಆರನೇ ವಿಕೆಟಿಗೆ 189 ರನ್ ಜತೆಯಾಟ ನಡೆಸಿದ್ದರಿಂದ ಇಂಗ್ಲೆಂಡ್ ಸುಸ್ಥಿತಿಗೆ ತಲುಪುವಂತಾಯಿತು. ಬೇರ್‌ಸ್ಟೊ 93 ರನ್ನಿಗೆ ಔಟಾದರೆ ವೋಕ್ಸ್ 111 ರನ್ ಗಳಿಸಿ ಆಡುತ್ತಿದ್ದಾರೆ.
ಇಂಗ್ಲೆಂಡ್ ತಂಡ ಎಚ್ಚರಿಕೆಯಿಂದ ಆಟ ಆರಂಭಿಸಿತು. ಆದರೆ 32 ರನ್ನಿಗೆ 2 ವಿಕೆಟ್ ಉರುಳಿದಾಗ ಭಾರತದಂತೆ ಇಂಗ್ಲೆಂಡ್ ಆಟಗಾರರೂ ಕುಸಿಯಬಹುದೆಂದು ಭಾವಿಸ ಲಾಗಿತ್ತು. ಆದರೆ ಆ ಬಳಿಕದ ಆಟಗಾರರು ಕ್ರೀಸ್‌ಗೆ ಅಂಟಿಕೊಡು ನಿಂತ ಕಾರಣ ಭಾರತ ಒತ್ತಡಕ್ಕೆ ಬೀಳುವಂತಾಯಿತು. ಊಟದ ವಿರಾಮದ ವೇಳೆ ಶಮಿ ಅವರು ಜೋ ರೂಟ್ ವಿಕೆಟ್ ಹಾರಿಸಿದ್ದರಿಂದ ಇಂಗ್ಲೆಂಡ್ ಆಘಾತಕ್ಕೆ ಒಳಗಾಯಿತು. ಆಗ ಇಂಗ್ಲೆಂಡ್ 89 ರನ್ನಿಗೆ 4 ವಿಕೆಟ್ ಕಳೆದುಕೊಂಡಿತ್ತು. ಊಟದ ವಿರಾಮದ ಬಳಿಕ ಜಾನಿ ಬೇರ್‌ಸ್ಟೊ ಮತ್ತು ಬಟ್ಲರ್ ಐದನೇ ವಿಕೆಟಿಗೆ 41 ರನ್ ಪೇರಿಸಿದರು. ಇದರಿಂದಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವಂತಾಯಿತು. ಬಟ್ಲರ್ 24 ರನ್ ಗಳಿಸಿ ಶಮಿಗೆ ಮೂರನೇ ಬಲಿಯಾದರು. ಆ ಬಳಿಕ ಬೇರ್‌ಸ್ಟೊ ಮತ್ತು ಕ್ರಿಸ್ ವೋಕ್ಸ್ ಭರ್ಜರಿ ಆಟವಾಡಿದರು.
ಭಾರತ 107ಕ್ಕೆ ಆಲೌಟ್
ದ್ವಿತೀಯ ದಿನ ಮಳೆ ನಿಂತ ಬಳಿಕ ಆಟ ಆರಂಭಿಸಿದ ಭಾರತ ಆ್ಯಂಡರ್ಸನ್ ದಾಳಿಗೆ ತತ್ತರಿಸಿ ಹೋಯಿತು. ಮಳೆ ಹನಿ ಬಿದ್ದಂತೆ ವಿಕೆಟ್ ಕಳೆದುಕೊಳ್ಳುತ್ತ ಹೋಯಿತು. ಕೊಹ್ಲಿ ಮತ್ತು ಆರ್. ಅಶ್ವಿನ್ ಮಾತ್ರ 20 ಪ್ಲಸ್ ರನ್ ಗಳಿಸಿದ ಸಾಧನೆ ಮಾಡಿದರು.
Related Articles
Advertisement
ಸ್ಕೋರ್ಪಟ್ಟಿಭಾರತ ಪ್ರಥಮ ಇನ್ನಿಂಗ್ಸ್
ಮುರಳಿ ವಿಜಯ್ ಬಿ ಆ್ಯಂಡರ್ಸನ್ 0
ಕೆಎಲ್ ರಾಹುಲ್ ಸಿ ಬೇರ್‌ಸ್ಟೊ ಬಿ ಆ್ಯಂಡರ್ಸನ್ 8
ಚೇತೇಶ್ವರ ಪೂಜಾರ ರನೌಟ್ 1
ವಿರಾಟ್ ಕೊಹ್ಲಿ ಸಿ ಬಟ್ಲರ್ ಬಿ ವೋಕ್ಸ್ 23
ಅಜಿಂಕ್ಯ ರಹಾನೆ ಸಿ ಕುಕ್ ಬಿ ಆ್ಯಂಡರ್ಸನ್ 18
ಹಾರ್ದಿಕ್ ಪಾಂಡ್ಯ ಸಿ ಬಟ್ಲರ್ ಬಿ ವೋಕ್ಸ್ 11
ದಿನೇಶ್ ಕಾರ್ತಿಕ್ ಬಿ ಕುರಾನ್ 1
ಆರ್. ಅಶ್ವಿನ್ ಎಲ್‌ಬಿಡಬ್ಲ್ಯು ಬಿ ಬ್ರಾಡ್ 29
ಕುಲದೀಪ್ ಯಾದವ್ ಎಲ್‌ಬಿಡಬ್ಲ್ಯು ಬಿ ಆ್ಯಂಡರ್ಸನ್ 0
ಮೊಹಮ್ಮದ್ ಶಮಿ ಔಟಾಗದೆ 10
ಇಶಾಂತ್ ಶರ್ಮ ಎಲ್‌ಬಿಡಬ್ಲ್ಯು ಬಿ ಆ್ಯಂಡರ್ಸನ್ 0
ಇತರ 6
ಒಟ್ಟು (ಆಲೌಟ್) 107
ವಿಕೆಟ್ ಪತನ: 1-0, 2-10, 3-15, 4-49, 5-61, 6-62, 7-84, 8-96, 9-96
ಬೌಲಿಂಗ್: ಜೇಮ್ಸ್ ಆ್ಯಂಡರ್ಸನ್ 13.2-5-20-5
ಸ್ಟುವರ್ಟ್ ಬ್ರಾಡ್ 10-2-37-1
ಕ್ರಿಸ್ ವೋಕ್ಸ್ 6-2-19-2
ಸ್ಯಾಮ್ ಕುರಾನ್ 6-0-26-1