ನವದೆಹಲಿ: ಯಮುನಾ ನದಿ ತೀರದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿದ್ದ ಶಿವ ದೇವಾಲಯವನ್ನು ಒಡೆಯಲು ದೆಹಲಿ ಹೈಕೋರ್ಟ್ ಗುರುವಾರ (ಮೇ 30) ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಹೊರಬಿತ್ತು ಅಂಬಾನಿ ಪುತ್ರನ ವೆಡ್ಡಿಂಗ್ ಕಾರ್ಡ್: ಎಲ್ಲಿ,ಯಾವಾಗ,ವಿಶೇಷಗಳೇನು? ಇಲ್ಲಿದೆ ವಿವರ
“ಭಗವಾನ್ ಶಿವನಿಗೆ ನಮ್ಮ ರಕ್ಷಣೆಯ ಅಗತ್ಯವಿಲ್ಲ ಮತ್ತು ಒಂದು ವೇಳೆ ಯುಮುನಾ ನದಿ ಪಾತ್ರದಲ್ಲಿರುವ ಅನಧಿಕೃತ ಕಟ್ಟಡ, ಅತಿಕ್ರಮಣವನ್ನು ತೆರವುಗೊಳಿಸಿದರೆ ಬಹುಶಃ ಶಿವ ಸಂತಸಪಡಬಹುದು” ಎಂದು ಹೈಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.
ಶಿವ ದೇವಾಲಯವನ್ನು ಒಡೆಯಲು ಅನುಮತಿ ನೀಡಬಾರದು ಎಂದು ಪ್ರಾಚೀನ್ ಶಿವ ಮಂದಿರ್ ಏವಂ ಅಖಾಡ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಜಸ್ಟೀಸ್ ಧರ್ಮೇಶ್ ಶರ್ಮಾ ವಜಾಗೊಳಿಸಿ, ಗೀತಾ ಕಾಲೋನಿಯ ತಾಜ್ ಎನ್ ಕ್ಲೇವ್ ಸಮೀಪದ ಶಿವ ದೇವಾಲಯವನ್ನು ಒಡೆಯಲು ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ.
“ಶಿವನಿಗೆ ನಮ್ಮ ರಕ್ಷಣೆ ಬೇಕಿಲ್ಲ, ಆದರೆ ನಮಗೆ ಮತ್ತು ಜನರಿಗೆ ಶಿವನ ರಕ್ಷಣೆ ಹಾಗೂ ಆಶೀರ್ವಾದ ಬೇಕಾಗಿದೆ ಎಂದು ಜಸ್ಟೀಸ್ ಧರ್ಮೇಶ್ ಶರ್ಮಾ ಮೇ 29ರಂದು ನೀಡಿರುವ ಆದೇಶದಲ್ಲಿ ತಿಳಿಸಿದ್ದಾರೆ.