Advertisement

Rubik’s Cube: ರೂಬಿಕ್‌ ಕ್ಯೂಬ್‌ನಲ್ಲಿ ಶ್ರೀ ರಾಮನ ಅರಳಿಸಿದ ಬಾಲಕ

10:57 AM Jan 19, 2024 | Team Udayavani |

ಪಿರಿಯಾಪಟ್ಟಣ: ದೇಶಾದ್ಯಂತ ರಾಮ ಜಪ ಆರಂಭವಾಗಿದ್ದು, ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮವಿಗ್ರಹ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣದ ಬಾಲಕನೋರ್ವ ರೂಬಿಕ್‌ ಕ್ಯೂಬ್‌ನಲ್ಲಿ ರಾಮನ ಚಿತ್ರ ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

Advertisement

ಪಟ್ಟಣದ ನಿವಾಸಿ ಮೃದುಲಾ ಮತ್ತು ಪಿ.ಎನ್‌.ವಿನಯ್‌ ದಂಪತಿ ಪುತ್ರ ಪ್ರಣವ್‌ ಪಿ.ವಿನಯ್‌ ಈ ಸಾಧನೆ ಮಾಡಿದ ಬಾಲಕ. ಈತ ಪುಷ್ಪಾ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದು ರೂಬಿಕ್‌ ಕ್ಯೂಬ್‌ ಸಾಲ್‌Ì ಮಾಡುವುದರಲ್ಲಿ ಪರಿಣಿತ. ಈತ 22 ಬಗೆಯ ಕ್ಯೂಬ್‌ಗಳನ್ನು ಸಾಲ್‌Ì ಮಾಡಿ ಕರ್ನಾಟಕ ಬುಕ್‌ ಆಫ್‌ ರೆಕಾರ್ಡ್‌ ದಾಖಲೆ ನಿರ್ಮಿಸಿದ್ದಾನೆ. ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿಯೂ ಈತನ ಸಾಧನೆ ದಾಖಲಾಗಿದೆ. ಮೊದಲು 400 ಕ್ಯೂಬ್‌ ಬಳಸಿ ಶ್ರೀ ಕೃಷ್ಣನ ರಚಿಸಿದ್ದ ಈತ ಈಗ ಬರೋಬ್ಬರಿ 498 ಕ್ಯೂಬ್‌ಗಳನ್ನು ಬಳಿಸಿ ಶ್ರೀರಾಮನ ಚಿತ್ರ ಬಿಡಿಸಿದ್ದಾನೆ.

ಈ ಹಿಂದೆಯೂ ಪ್ರಣವ್‌ ಶ್ರೀಕೃಷ್ಣ, ವಿರಾಟ್‌ ಕೊಹ್ಲಿ, ರಾಹುಲ್‌ ದ್ರಾವಿಡ್‌, ಶಿವಕುಮಾರ ಸ್ವಾಮೀಜಿ ಮುಂತಾದ ಮಹನೀಯರ ಚಿತ್ರಗಳನ್ನು ರೂಬಿಕ್‌ ಕ್ಯೂಬ್‌ನಲ್ಲಿ ರಚಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next