Advertisement

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

01:58 AM Dec 28, 2024 | Team Udayavani |

ಉಡುಪಿ:ತಾನು ತಾನಾ ಗಿಯೇ ನಿರ್ವಾತದಿಂದ ಯಾರೂ ಬೆಳೆಯುವುದಿಲ್ಲ. ಪೂರ್ವಿಕತೆ ಇದ್ದೇ ಇರುತ್ತದೆ. ಅದನ್ನು ಅರಿಯಬೇಕು ಹಾಗೂ ಅದಕ್ಕಾಗಿ ಕೃತಜ್ಞ ಭಾವ ಇರಬೇಕು. ಪೂರ್ವಿಕತೆ ಬಗ್ಗೆ ಕೃತಜ್ಞತೆ ಇಲ್ಲದವನು ಎಂದೂ ಬೆಳೆಯಲಾರ. ಅದು ಇದ್ದಾಗ ಸತ್ಯದ ಅರಿವಾಗುವುದು ಎಂದು ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ವಿಶ್ಲೇಷಿಸಿದರು.

Advertisement

ಶ್ರೀ ಕೃಷ್ಣಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆ ಯುತ್ತಿರುವ ಬೃಹತ್‌ ಗೀತೋತ್ಸವ ದಲ್ಲಿ ಶುಕ್ರವಾರ ರಾಜಾಂಗಣದಲ್ಲಿ ವಚನ ಸಾಹಿತ್ಯದ ಮೇಲೆ ಗೀತೆಯ ಪ್ರಭಾವ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ವೇದ, ಪುರಾಣ, ಮಹಾಭಾರತ, ರಾಮಾಯಣ ಹಾಗೂ ವಚನ ಸಾಹಿತ್ಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕೆಲವರು ಹೇಳುತ್ತಾರೆ. ಕೆಲವು ವಚನಗಳನ್ನು ಪೂರ್ಣವಾಗಿ ವಿಶ್ಲೇಷಿಸಿದಾಗ ಸತ್ಯದ ಅರಿವು ಆಗು ತ್ತದೆ. ಶ್ರೀ ಕೃಷ್ಣ ಏನು ಹೇಳಿದ್ದಾನೋ ಅದನ್ನೇ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮೊದಲಾದ ವಚನ ಕಾರರ ವಚನಗಳಲ್ಲಿವೆ ಎಂದರು.

ಸನಾತನ ಧರ್ಮವನ್ನು ವಚನ ಧರ್ಮಕ್ಕಿಂತ ಭಿನ್ನ ಎಂದು ಬಿಂಬಿಸ ಲಾಗುತ್ತಿದೆ. ಭಗವದ್ಗೀತೆ, ಉಪನಿಷತ್‌ಗಳು ಕನ್ನಡದಲ್ಲಿ ಸರಳವಾಗಿ ಅರ್ಥ ಮಾಡಿಕೊಳ್ಳಲು ವಚನ ಸಾಹಿತ್ಯ ಅಧ್ಯಯನ ಅಗತ್ಯ. ಕರ್ಮದ ಬಗ್ಗೆ ಶ್ರೀ ಕೃಷ್ಣ ಏನು ಹೇಳಿದ್ದಾನೋ ಅದನ್ನೇ ಬಸವಣ್ಣ ಕಾಯಕವೇ ಕೈಲಾಸ ಎಂದಿದ್ದಾರೆ ಎಂದು ವಿವರಿಸಿದರು.
ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರು, ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿದರು.
ಕೊಯಮತ್ತೂರಿನ ಉದ್ಯಮಿ ದಿ| ಗಣಪತಿ ಭಟ್‌ ಅವರಿಗೆ ಮರಣೋತ್ತರವಾಗಿ ನೀಡಿದ ಶ್ರೀಕೃಷ್ಣಗೀತಾನುಗ್ರಹ ಪ್ರಶಸ್ತಿಯನ್ನು ಅವರ ಪುತ್ರ ರಾಜೇಶ್‌ ಭಟ್‌ ಉಭಯ ಶ್ರೀಪಾದರಿಂದ ಸ್ವೀಕರಿಸಿದರು. ಮಹಿತೋಷ್‌ ಆಚಾರ್ಯ ನಿರ್ವಹಿಸಿದರು.

ಇಂದು ಭಗವದ್ಗೀತೆ ಮಹಾಯಾಗ
ಡಿ.28ರಂದು ರಾಜಾಂಗಣದಲ್ಲಿ ಬೆಳಗ್ಗೆ 7ರಿಂದ ಶ್ರೀಪಾದರ ಮಾರ್ಗ ದರ್ಶನದಲ್ಲಿ ವಿ| ಯೋಗೀಂದ್ರ ಭಟ್‌ ನೇತೃತ್ವದಲ್ಲಿ ಭಗವದ್ಗೀತೆ ಮಹಾ ಯಾಗ ನಡೆಯಲಿದ್ದು, ಬೆಳಗ್ಗೆ 10.30ಕ್ಕೆ ಪೂರ್ಣಾಹುತಿ ನಡೆಯಲಿದೆ. ಸಂಜೆ 5.30ರಿಂದ ಅನಿವಾಸಿ ಭಾರತೀಯರಿಂದ ಭಗವದ್ಗೀತೆ ಕುರಿತು ಉಪನ್ಯಾಸ, ವಿವಾಹ ಕುರಿತಂತೆ ಪರಿಹಾರೋಪಾಯವಾಗಿ ಶ್ರೀಮಠದಿಂದ ಸಿದ್ಧಪಡಿಸಿದ ಸುಸಜ್ಜಿತ ವೆಬ್‌ಸೈಟ್‌ “ದಂಪತಿ ಡಾಟ್‌ ಕಾಮ್‌’ ಬಿಡುಗಡೆ ಹಾಗೂ ಎರಡು ಕೃತಿಗಳ ಲೋಕಾರ್ಪಣೆ ಇದೆ. ರಾತ್ರಿ 7ರಿಂದ ಅಂತಾರಾಷ್ಟ್ರೀಯ ಖ್ಯಾತಿಯ ವಿದುಷಿ ಸ್ನೇಹಾ ನಾರಾಯಣ್‌ ಹಾಗೂ ವಿದ್ವಾನ ಯೋಗೀಶ್‌ ಕುಮಾರ್‌ ಬೆಂಗಳೂರು ಅವರಿಂದ ಭಗವದ್ಗೀತೆ ನೃತ್ಯರೂಪಕ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next