Advertisement

ವಿಶ್ವದಾಖಲೆಯ ಮಾರುತಿ; ಇಂದೋರ್‌ನಲ್ಲಿ ಅಷ್ಟಲೋಹ ಹನುಮಂತ ವಿಗ್ರಹ

10:04 AM Dec 02, 2019 | Sriram |

ಇಂದೋರ್‌: ವಿಶ್ವದಲ್ಲೇ ಅತೀ ಎತ್ತರದ, ಅಷ್ಟ ಲೋಹಗಳ ಬೃಹತ್‌ ಹನುಮಂತನ ವಿಗ್ರಹವನ್ನು ಇಂದೋರ್‌ನಲ್ಲಿ ನಿರ್ಮಿಸಲಾಗಿದ್ದು, ಮುಂದಿನ ಫೆಬ್ರವರಿಯಲ್ಲಿ ಅದು ಲೋಕಾರ್ಪಣೆಗೊಳ್ಳಲಿದೆ ಎಂದು ಅಲ್ಲಿನ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯ ವರ್ಗಿಯಾ ತಿಳಿಸಿದ್ದಾರೆ.

Advertisement

ವಿಗ್ರಹದ ಬಗ್ಗೆ ವಿವರಣೆ ನೀಡಿದ ಅವರು, ಈ ಬೃಹತ್‌ ವಿಗ್ರಹವನ್ನು ನಿರ್ಮಿಸಲು 15ರಿಂದ 17 ವರ್ಷಗಳು ಸಂದಿವೆ. ಪ್ರತಿಮೆ ಸ್ಥಾಪನೆಗೊಂಡಿರುವ ಪ್ರಾಂತ್ಯವನ್ನು ಧಾರ್ಮಿಕ ಕೇಂದ್ರವನ್ನಾಗಿಸಲು 2002ರಲ್ಲೇ ತೀರ್ಮಾನಿಸಲಾಗಿತ್ತು. ಅಂದೇ ಇಲ್ಲಿ ವಿಗ್ರಹ ಸ್ಥಾಪನೆಗೆ ಚಾಲನೆ ನೀಡಲಾಗಿತ್ತು. ಈಗ ಅದು ಪೂರ್ಣಗೊಂಡಿದೆ. ಇದು ವಿಶ್ವದಲ್ಲಿರುವ ಯಾವುದೇ ಅಷ್ಟಲೋಹದ ಹನುಮಂತ ವಿಗ್ರಹಕ್ಕಿಂತ ದೊಡ್ಡದು.

ಭಾರತದಲ್ಲಿರುವ 5 ಅತೀ ಎತ್ತರದ ಹನುಮನ ವಿಗ್ರಹಗಳು
ಆಂಧ್ರಪ್ರದೇಶದ ಮಡಪ್ಪಂ ಹನುಮಾನ್‌ 176
ಆಂಧ್ರಪ್ರದೇಶದ ಪರಿತಾಳ ಆಂಜನೇಯ 135
ಒಡಿಶಾದ ದಮನ್‌ ಜೋಡಿ ಹನುಮಾನ್‌ 108.9
ಶಿಮ್ಲಾದ ಜಾಖುಹನುಮಾನ್‌ 108
ದಿಲ್ಲಿಯ ಸಂಕಟ್‌ ಮೋಚನ್‌ 108 ಎತ್ತರ (ಅಡಿಗಳಲ್ಲಿ)

Advertisement

Udayavani is now on Telegram. Click here to join our channel and stay updated with the latest news.

Next