Advertisement
ಅಮೆರಿಕದಲ್ಲಿ ಚುನಾವಣೆಗೂ ಮುನ್ನ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವೆ ಚರ್ಚೆಗಳನ್ನು ಏರ್ಪಡಿಸಲಾಗುತ್ತದೆ. ನಾಲ್ಕರಿಂದ ಐದು ವಿಷಯಗಳನ್ನು ಆಯ್ಕೆ ಮಾಡಿ ಅದರ ಮೇಲೆ ಅಭ್ಯರ್ಥಿಗಳಿಬ್ಬರೂ ತಮ್ಮ ವಾದ ಮಂಡಿಸಬೇಕು. ಸೆಪ್ಟೆಂಬರ್ 29ರಂದು ಟ್ರಂಪ್ ಮತ್ತು ಜೋ ಬೈಡೆನ್ ನಡುವೆ ನಡೆದ ಚರ್ಚೆಯು ಇದುವರೆಗಿನ ಅತ್ಯಂತ ಕಳಪೆ ಚರ್ಚೆ ಎಂದು ಕರೆಯಿಸಿಕೊಂಡಿದೆ.
Related Articles
Advertisement
ಎರಡನೇ ಹಾಗೂ ಕೊನೆಯ ಸುತ್ತಿನ ಅಧ್ಯಕ್ಷೀಯ ಚರ್ಚೆಯಲ್ಲಿ, ಹವಾಮಾನ ವೈಪರೀತ್ಯದ ಕುರಿತು ಕೈಗೊಂಡ ಕ್ರಮದಲ್ಲಿ ಅಮೆರಿಕಕ್ಕೆ ಅನ್ಯಾಯವಾಗಿದೆ ಎಂಬ ಟೀಕೆಯನ್ನು ಪುನರ್ ವಿಮರ್ಶಿಸಬೇಕು ಎಂದ ಟೊನಾಲ್ಡ್ ಟ್ರಂಪ್, ಚೀನಾ ದೇಶವನ್ನು ನೋಡಿ ಅದರ ಹವಾಮಾನ ಹೊಲಸಾಗಿದೆ, ರಷ್ಯಾ, ಭಾರತದ ಹವಾಮಾನ ಕೂಡಾ ಕಲುಷಿತಗೊಂಡಿದೆ ಎಂದು ಅಮೆರಿಕದ ನ್ಯಾಶ್ ವಿಲ್ಲೆಯಲ್ಲಿ ಆಯೋಜಿಸಿದ್ದ ಚರ್ಚೆಯಲ್ಲಿ ಆರೋಪಿಸಿದರು.
ಪ್ರಮುಖವಾದ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುತ್ತಿರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದು, ಭಾರತ, ಚೀನಾ ಮತ್ತು ರಷ್ಯಾ ಹವಾಮಾನ ವೈಪರೀತ್ಯದ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.
ಪ್ಯಾರಿಸ್ ಒಪ್ಪಂದದಿಂದ ಚೀನಾ ಮತ್ತು ಭಾರತದಂತಹ ದೇಶಗಳು ಹೆಚ್ಚಿನ ಲಾಭ ಪಡೆಯುತ್ತಿದೆ ಎಂದು ಟ್ರಂಪ್ ನಿರಂತರವಾಗಿ ವಾದ ಮಂಡಿಸುತ್ತಿದ್ದಾರೆ. ಕಳೆದ ವಾರ ಉತ್ತರ ಕರೋಲಿನಾದಲ್ಲಿ ನಡೆದ ಚುನಾವಣಾ ಪ್ರಚಾರ ರಾಲಿಯಲ್ಲಿ ಮಾತನಾಡುತ್ತ, ಜಾಗತಿಕ ವಾಯುಮಾಲಿನ್ಯಕ್ಕೆ ಚೀನಾ, ರಷ್ಯಾ ಮತ್ತು ಭಾರತದಂತಹ ದೇಶಗಳ ಕೊಡುಗೆ ಹೆಚ್ಚಿದೆ ಎಂದು ಆರೋಪಿಸಿದ್ದರು.