Advertisement
ಇದನ್ನೆಲ್ಲಾ ಓದುತ್ತಿದ್ದರೆ, “ನಾವೇನೇ ಮಾಡಿದರೂ ದೇವರು ನೋಡ್ತಾ ಇರ್ತಾನೆ’ ಎಂಬ ಮಾತು ನೆನಪಾಗಬಹುದು. ಆದರೆ ಇಲ್ಲಿ ನಿಮ್ಮ ಚಲನವಲನ ವೀಕ್ಷಿಸುತ್ತಿರುವುದು ದೇವರಲ್ಲ, ನಗರದ ಬೀದಿ, ಕಟ್ಟಡ, ಕಂಬ, ಸಿಗ್ನಲ್ ಸೇರಿ ನಮಗೆ ಕಾಣದ ಸ್ಥಳಗಳಲ್ಲೂ ಇರಬಹುದಾದ ಸಿಸಿಟಿವಿ ಕ್ಯಾಮೆರಾಗಳು! ಬೆಂಗಳೂರು ಕೇವಲ ಸಿಲಿಕಾನ್ ಸಿಟಿಯಲ್ಲ. “ಸಿಸಿಟಿವಿ ಸಿಟಿ’ಯೂ ಹೌದು.
Related Articles
Advertisement
ಸಿಸಿಟಿವಿ ಭಯದಿಂದ ದುಷ್ಕರ್ಮಿಗಳು ಅಪರಾಧ ಕೃತ್ಯವೆಸಗಲು ಹಿಂಜರಿಯುತ್ತಾರೆ. ಸಂಚಾರ ನಿಯಮ ಉಲ್ಲಂಘನೆ ಪತ್ತೆಯಾಗುತ್ತದೆ. ಇದರಿಂದ ಆರೋಪಿಗಳ ಕುರಿತು ಸಾಕ್ಷ್ಯಗಳು ಸಿಗುತ್ತವೆ. ಆದರೆ, ಕಳ್ಳರೂ ಅಪ್‌ಡೇಟ್ ಆಗಿದ್ದಾರೆ. ಕೃತ್ಯವೆಸಗುವ ಮುನ್ನ ಸಿಸಿಟಿವಿ ಎಲ್ಲಿವೆ ಎಂದು ಪರಿಶೀಲಿಸುತ್ತಾರೆ. ಅದರಿಂದ ಬಚಾವಾಗಲು ಬೇಕಿರುವ ಸಿದ್ಧತೆ ಮಾಡಿಕೊಳ್ಳುತ್ತಾರೆ.
ಈ ಸಿಸಿಟಿವಿ ಏಕೆ ಬೇಕು?: ಕಳ್ಳರ ಕುಕೃತ್ಯ ಪತ್ತೆ, ಕಂಪನಿ ಸಿಬ್ಬಂದಿ ಕೆಲಸ ಮಾಡುತ್ತಾರೋ ಇಲ್ಲವೋ ಎಂದು ತಿಳಿಯಲು, ಕೆಲಸಗಾರರ ಚಲನವಲನಗಳ ಮೇಲೆ ನಿಗಾ ಇಡಲು, ಮನೆಯಲ್ಲಿ ಪತ್ನಿ, ಪತಿ ಇಲ್ಲವೇ ಕೆಲಸದಾಳು ಏನು ಮಾಡುತ್ತಾರೆ, ಯಾರೊಂದಿಗಿದ್ದಾರೆ, ಬ್ಯಾಂಕ್ ಮತ್ತು ಎಟಿಎಂನಲ್ಲಿ ಸಿಬ್ಬಂದಿ ಹಾಗೂ ಅಪರಿಚಿತರ ಚಟುವಟಿಕೆ ಮೇಲೆ ಕಣ್ಣಿಡಲು ಸಿಸಿಟಿವಿಗಳು ಸಾಮಾನ್ಯವಾಗಿ ಬಳಲಕೆಯಾಗುತ್ತವೆ. ಇವೆಲ್ಲವುಗಳ ಹೊರತಾಗಿ, ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರ ಮೇಲೆ ನಿಗಾ ಇರಿಸಲು, ಮನೆಗೆ ಯಾರು ಬಂದರು, ಹೋದರೆಂದು ತಿಳಿಯಲು ಸಿಸಿಟಿವಿ ಬೇಕೇಬೇಕು.
ವಿಕೃತ ಉದ್ದೇಶ: ಸಿಸಿಟಿವಿ ಅಥವಾ ಅಡಗಿಸಿಡುವ ಸ್ಪೈ ಕ್ಯಾಮೆರಾಗಳು ಕೆಲ ಸಂದರ್ಭದಲ್ಲಿ ದುರುದ್ದೇಷ, ವಿಕೃತ ಉದ್ದೇಶಕ್ಕೂ ಬಳಕೆಯಾಗುತ್ತವೆ. ಕೆಲ ಬಟ್ಟೆ ಮಳಿಗೆಗಳಲ್ಲಿ ಮಹಿಳೆಯರು ಬಟ್ಟೆ ಬದಲಿಸುವ ಕೊಠಡಿ, ಹಜೋಟೆಲ್, ಲಾಡ್ಜ್ಗಳಲ್ಲಿನ ಶೌಚಾಲಯ, ಬೆಡ್‌ರೂಮ್‌ಗಳಲ್ಲಿ ಕಾಣದಂತೆ ಕ್ಯಾಮೆರಾ ಇರಿಸಿ ತಮ್ಮ ವಿಕೃತ ಚಪಲ ತೀರಿಸಿಕೊಳ್ಳುವವರೂ ಇದ್ದಾರೆ. ಇನ್ನು ಲೈಂಗಿಕ ಕ್ರಿಯೆ ನಡೆಸುವುದನ್ನು ಚಿತ್ರೀಕರಿಸಿ ಪುರುಷ ಅಥವಾ ಮಹಿಳೆಯನ್ನು ಬ್ಲಾಕ್‌ವೆುàಲ್ ಮಾಡಲು ಕ್ಯಾಮೆರಾಗಳು ಬಳಕೆಯಾಗುತ್ತವೆ.
ಕ್ಯಾಮೆರಾ ಕಣ್ಣು ಎಲ್ಲೇಲ್ಲಿ?: ರಸ್ತೆಗಳು, ವೃತ್ತಗಳು, ಪೊಲೀಸ್ ಠಾಣೆ, ಕಾರಾಗೃಹ, ಸರ್ಕಾರಿ, ಖಾಸಗಿ ಆಸ್ಪತ್ರೆ, ಶಾಲಾ, ಕಾಲೇಜು, ನ್ಯಾಯಾಲಯ ಆವರಣ, ಹೋಟೆಲ್, ಮಾಲ್‌ಗಳಲ್ಲಿ, ದೇವಾಲಯ, ಮಸೀದಿ, ಚರ್ಚ್‌ಗಳು, ಸೈಬರ್ ಸೆಂಟರ್‌ಗಳು, ಬಸ್, ವಿಮಾನ, ರೈಲು ನಿಲ್ದಾಣಗಳಲ್ಲಿ, ಕಾಫಿ ಶಾಪ್, ಸರ್ಕಾರಿ, ಖಾಸಗಿ ಕಚೇರಿಗಳು, ಕಾರ್ಪೊರೇಟ್ ಕಂಪನಿಗಳು, ಬ್ಯಾಂಕ್, ಎಟಿಎಂ, ದಿನಸಿ ಅಂಗಡಿ, ಸೂಪರ್ ಮಾರ್ಕೆಟ್ ಸೇರಿ ಬಹುತೇಕ ಎಲ್ಲ ಕಡೆ ಸಿಸಿಟಿವಿ ಕ್ಯಾಮೆರಾಗಳಿರುತ್ತವೆ.
ವಿಧಾನಸೌಧ ಸುತ್ತಲಿನ ಪ್ರಮುಖ ವೃತ್ತಗಳು, ರೈಲು ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ, ವಿಮಾನ ನಿಲ್ದಾಣ ಸೇರಿ ವಿವಿಧಡೆ 200ಕ್ಕೂ ಅಧಿಕ ಸಿಸಿಟಿವಿಗಳಿವೆ. ಇದರೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಗರದ 160 ಠಾಣೆಗಳ ವ್ಯಾಪ್ತಿಯಲ್ಲಿ 800 ಸಿಸಿಟಿವಿ ಅಳವಡಿಸಲಾಗಿದೆ. ವುಗಳ ಫುಟೇಜ್ ವೀಕ್ಷಿಸಲು ಸಂಚಾರ ಹಾಗೂ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಇದೆ. ಹೊಸ ವರ್ಷಾಚರಣೆ, ಹಬ್ಬ, ಉತ್ಸವ, ಮೆರವಣಿಗೆ, ಪ್ರತಿಭಟನೆ, ಪ್ರಧಾನಿ, ರಾಷ್ಟ್ರಪತಿ ಸೇರಿ ಪ್ರಮುಖರು ಭಾಗವಹಿಸುವ ಕಾರ್ಯಕ್ರಮ ಸ್ಥಳಗಳಲ್ಲಿ ಹೆಚ್ಚುವರಿ ಕ್ಯಾಮೆರಾಗಳನ್ನು ಬಳಸಲಾಗುತ್ತದೆ.
ಎಷ್ಟು ವಿಧದ ಸಿಸಿಟಿವಿಗಳಿವೆ?ಡೋಮ್ ಕ್ಯಾಮೆರಾ: ಮನೆ, ಕಚೇರಿಗಳ ಒಳಾಂಗಣಗಳಲ್ಲಿ ಗುಮ್ಮಟ ಆಕಾರದ ಈ ಕ್ಯಾಮೆರಾ ಹೆಚ್ಚು ಬಳಕೆಯಾಗುತ್ತದೆ. ಇವುಗಳನ್ನು ಪಿಟಿಝಡ್ ಕ್ಯಾಮೆರಾ ಎಂದೂ ಕರೆಯುತ್ತಾರೆ. ಬುಲೆಟ್ ಕ್ಯಾಮೆರಾ: ಈ ಕ್ಯಾಮೆರಾಗಳು ಒಂದೇದ ಕಡೆ ಕೇಂದ್ರಿಕೃತವಾಗಿದ್ದು, ಹೆಚ್ಚಾಗಿ ಪೊಲೀಸರು ಈ ಕ್ಯಾಮೆರಾಗಳನ್ನು ಬಳಸುತ್ತಾರೆ. 2ರಿಂದ 3 ಮೆಗಾಪಿಕ್ಸೆಲ್ ಸಾಮರ್ಥಯ ಹೊಂದಿರುತ್ತವೆ. ಪಿಟಿಝಡ್ ಕ್ಯಾಮೆರಾ: (ಪ್ಯಾನಿಂಗ್, ಟಿಲ್ಟಿಂಗ್, ಜೂಮ್) ಪ್ರಮುಖ ಕಚೇರಿ, ಬೃಹತ್ ಕಟ್ಟಡಗಳಲ್ಲಿ ಈ ಕ್ಯಾಮೆರಾಗಳು, ಪೊಲೀಸ ಇಲಾಖೆಯಲ್ಲಿ ಹೆಚ್ಚು ಬಳಕೆಯಲ್ಲಿವೆ. ಸಿ-ಮೌಂಟ್ ಕ್ಯಾಮೆರಾ: ವಿವಿಧ ಭಂಗಿಗಳಲ್ಲಿ ಘಟನಾ ದೃಶ್ಯಗಳನ್ನು ಸೆರೆ ಹಿಡಿಯುವುದು ಸಿ-ಮೌಂಟ್ ಕ್ಯಾಮೆರಾ ವಿಶೇಷತೆ. ಇವುಗಳಲ್ಲಿನ ವಿಶೇಷ ಲೆನ್ಸ್ ನೆರವಿನಿಂದ 40 ಅಡಿ ದೂರದವರೆಗಿನ ದೃಶ್ಯಗಳನ್ನು ಚಿತ್ರಿಸಬಹುದು. ಡೇ, ನೈಟ್ ಕ್ಯಾಮೆರಾ: ಹಗಲು ಮಾತ್ರವಲ್ಲದೆ ರಾತ್ರಿ ವೇಳೆಯೂ ಸ್ಪಷ್ಟ ಚಿತ್ರೀಕರಣ ಮಾಡುವ ಸಾಮರ್ಥ್ಯ ಈ ಕ್ಯಾಮೆರಾಗಳಿಗಿದೆ. ಇವುಗಳನ್ನು ಹೊರಾಂಗಣದಲ್ಲಿ ಹೆಚ್ಚು ಬಳಸಲಾಗುತ್ತದೆ. ನೈಟ್ ವಿಷನ್ ಕ್ಯಾಮೆರಾ: ಹೆಸರೇ ಹೇಳುವಂತೆ ಕತ್ತಲಲ್ಲಿ ಅಥವಾ ರಾತ್ರಿ ಚಿತ್ರೀಕರಣಕ್ಕೆ ಈ ಕ್ಯಾಮೆರಾಗಳು ಸೂಕ್ತ. ಇನಾ#†ರೆಡ್ ಎಲ್‌ಇಡಿ ನೆರವಿನಿಂದ ಮಂದಬೆಳಕಿನಲ್ಲಿನ ಚಿತ್ರಗಳೂ ಸ್ಪಷ್ಟವಾಗಿ ಕಾಣುತ್ತವೆ. ಐಪಿ ಕ್ಯಾಮೆರಾ: ಇವು ವೈರ್‌ಲೆಸ್ ಕ್ಯಾಮೆರಾಗಳು. ಇವುಗಳಿಗೆ ಸಂಬಂಧಿಸಿದ ಹಾರ್ಡ್‌ವೇರ್ ಅಳವಡಿಸಿ, ಆನ್‌ಲೈನ್ ಮೂಲಕ ಫುಟೇಜ್ ಪಡೆಯಬಹುದು. ವೈರ್‌ಲೆಸ್ ಕ್ಯಾಮೆರಾ: ಈ ಮಾದರಿಯ ಕ್ಯಾಮೆರಾಗಳಲ್ಲೂ ವೈರ್ ಬಳಕೆ ಆಗುವುದಿಲ್ಲ. ಇವು ಐಪಿ ಆಧರಿಸಿ ಕಾರ್ಯನಿರ್ವಹಿಸುವುದಿಲ್ಲ. ಬದಲಿಗೆ ಕ್ಯಾಮೆರಾದಲ್ಲಿ ಚಿಪ್ ಅಳವಡಿಸಲಾಗುತ್ತದೆ. ಹೈ ಡೆಫಿನಿಷನ್ ಕ್ಯಾಮೆರಾ: ಈ ಕ್ಯಾಮೆರಾಗಳನ್ನು ಹೆಚ್ಚಾಗಿ, ಬ್ಯಾಂಕ್, ಮಾರುಕಟ್ಟೆಗಳಲ್ಲಿ ಬಳಸಲಾಗುತ್ತದೆ. ಎಚ್‌ಡಿ ಕ್ಲಾರಿಟಿಯ ದೃಶ್ಯಗಳನ್ನು ನೀಡುವುದು ಈ ಕ್ಯಾಮೆರಾ ವಿಶೇಷತೆ. ಹಿಡನ್ ಕ್ಯಾಮೆರಾ: ಮಾಧ್ಯಮಗಳಲ್ಲಿ ನಡೆಸುವ ರಹಸ್ಯ ಕಾರ್ಯಾಚರಣೆಗಳಿಗೆ ಹಿಡನ್ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಕೆಟ್ಟ ಉದ್ದೇಶಗಳಿಗೂ ಈ ಕ್ಯಾಮೆರಾಗಳನ್ನು ಬಳಸುತ್ತಾರೆ. ವೈ-ಫೈ ಹಾಟ್‌ಸ್ಪಾಟ್ ಕ್ಯಾಮೆರಾ: ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ಕ್ಯಾಮೆರಾಗಳಿವು. ಇವುಗಳಲ್ಲಿ ಸೆರೆಯಾಗುವ ದೃಶ್ಯಗಳನ್ನು ಮೊಬೈಲ್ ಅಥವಾ ಸ್ಮಾರ್ಟ್ ಸಾಧನದಲ್ಲಿ ನೇರವಾಗಿ ಪಡೆಯಬಹುದು. ನಿರ್ದಿಷ್ಟ ಪ್ರದಶದಲ್ಲಿ ಯಾರದಾದರೂ ಚಲನವಲನ ಕಂಡುಬಂದರೆ ಸ್ಮಾರ್ಟ್ ಸಾಧನಗಳಿಗೆ ಸಂದೇಶ ರವಾನಿಸುವುದು ಈ ಕ್ಯಾಮೆರಾಗಳ ವಿಶೇಷ. ಇವುಗಳಿಗೆ ಪ್ರತ್ಯೇಕ ಮೆಮೋರಿ ಕಾರ್ಡ್, ರಿಮೋಟ್ ಕೂಡ ಸಿಗುತ್ತದೆ. ನೂರರಿಂದ ಲಕ್ಷದವರೆಗೂ ಇದೆ ಬೆಲೆ: ಸಿಟಿಟಿವಿ ಕ್ಯಾಮೆರಾಗಳು 250 ರೂಪಾಯಿಂದ ಒಂದು ಲಕ್ಷಕ್ಕೂ ಅಧಿಕ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿವೆ. ಕೆಲವರು ಹೆದರಿಸಲು ಡಮ್ಮಿ ಕ್ಯಾಮೆರಾಗಳನ್ನು ಖರೀಸುತ್ತಾರೆ. ಇವುಗಳ ಬೆಲೆ ಕೇವಲ 300-500 ರೂ. ಇರುತ್ತದೆ. ನಂತರದ ಮೊತ್ತ 900 ರೂ.ಯಿಂದ ಆರಂಭವಾಗುತ್ತದೆ. ಮನೆ, ಕಚೇರಿಯ ಒಳಾಂಗಣ, ಹೊರಾಂಗಣಗಳಲ್ಲಿ ಅಳವಡಿಸಲು ಪ್ರತ್ಯೇಕ ಸಿಸಿಟಿವಿ ಕ್ಯಾಮೆರಾಗಳಿವೆ. ಸಾರ್ವಜನಿಕರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಕ್ಯಾಮೆರಾ ಖರೀದಿಸುಯತ್ತಾರೆ. ಸ್ಪೈ ಕ್ಯಾಮೆರಾ ಎಲ್ಲಿರುತ್ತೆ?: ಸ್ಪೈ ಕ್ಯಾಮೆರಾ ಹಾಗೂ ರೆಕಾರ್ಡ್ ಮಾಡಿಕೊಂಡು ಅದರ ವಿಡಿಯೋ ಸಂಗ್ರಹಿಸಿಟ್ಟುಕೊಳ್ಳಬಲ್ಲ ಮೈಕ್ರೋ ಚಿಪ್ ಅನ್ನು ಒಂದು ಕೀಚೈನ್‌ನಲ್ಲಿ ಅಥವಾ ಪೆನ್‌ನ ಕ್ಯಾಪ್, ಶರ್ಟ್‌ನ ಬಟನ್‌ನಲ್ಲೋ, ಪೆನ್‌ಸ್ಟಾಂಡ್, ಗೊಂಬೆಗಳ ಕಣ್ಣು, ಗಡಿಯಾರದ ಮುಳ್ಳು, ಪರ್ಸ್, ಡಿವಿಡಿ ಕೇಸ್, ಏರ್‌ಫಿಲ್ಟರ್, ಟಿವಿ ಮೇಲಿಡುವ ಫೋಟೋ ಫ್ರೆàಮ್, 3 ಪಿನ್ ಪ್ಲಗ್ ಇತರೆಡೆ ಇರಿಸಬಹುದು. ಒಂದು ರಿಮೋಟ್ ಕಂಟ್ರೋಲ್ ಮೂಲಕ ಸರಿ ಸುಮಾರು 6 ಗಂಟೆಗಳ ಕಾಲ ವೀಡಿಯೋವನ್ನು ಇವುಗಳಲ್ಲಿ ರೆಕಾರ್ಡ್ ಮಾಡಬಹುದು. ಕಸ ಹಾಕಿದರೂ ನೋಡುತ್ತೆ ಸಿಸಿಟಿವಿ: ನಗರದಲ್ಲಿ ನಾಗರಿಕರು ಎಲ್ಲೆಂದರಲ್ಲಿ ಕಸ ಎಸೆದು ಸೃಷ್ಟಿಸುತ್ತಿರುವ ಕಪ್ಪು ಪ್ರದೇಶ (ಬ್ಲಾಕ್ ಸ್ಪಾಟ್) ನಿಯಂತ್ರಣಕ್ಕಾಗಿ ಬಿಬಿಎಂಪಿ ಪ್ರತಿ ವಾರ್ಡ್‌ನ ಹತ್ತು ಕಡೆ ಸಿಸಿಟಿವಿ ಅಳವಡಿಸಲು ಚಿಂತನೆ ನಡೆಸಿದೆ. ಇದರೊಂದಿಗೆ ಸ್ಥಳೀಯ ಸಂಘ, ಸಂಸ್ಥೆಗಳು ಬಡಾವಣೆಗಳಲ್ಲಿ ಅಳವಡಿಸಿಕೊಂಡಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪಡೆದು ಕಪ್ಪು ಪ್ರದೇಶಗಳ ಸೃಷ್ಟಿಗೆ ಕಾರಣವಾಗಿರುವವರ ವಿರುದ್ಧ ಕ್ರಮಕೈಗೊಳ್ಳಲು ಮಾರ್ಷಲ್‌ಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಕ್ಯಾಮೆರಾ ಅಳವಡಿಕೆ ಪ್ರಕ್ರಿಯೆ ಆರಂಭವಾಗಿದ್ದು, ಕೆಲ ವಾರ್ಡ್‌ಗಳು ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮೆರಾ ಪರಿಮಿತಿಗೆ ಒಳಪಟ್ಟಿವೆ. ಪತಿ, ಪತ್ನಿಯ ವಿಚಾರ ತಿಳಿಯಲು: ತಂತ್ರಜ್ಞಾನವನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೊಂಡರೆ ಒಳಿತು. ಕೆಟ್ಟ ಕಾರ್ಯಕ್ಕೆ ಬಳಸಿದರೆ ಕೆಡುಕು ಕಟ್ಟಿಟ್ಟ ಬುತ್ತಿ. ದುರಂತವೆಂದರೆ ಇದು, ಸಿಸಿಟಿವಿ ಹಾಗೂ ಸ್ಪೈ ಕ್ಯಾಮೆರಾಗಳನ್ನು ಕೆಲವರು ತಮ್ಮದೇ ಪತಿ, ಪತ್ನಿಯ ಬಗ್ಗೆ ತಿಳಿದುಕೊಳ್ಳಲು ಬಳಸುತ್ತಾರೆ. ತಾವು ಕೆಲಸಕ್ಕೆ ಹೋದಾಗ ಮನೆಯಲ್ಲಿ ಪತ್ನಿ ಏನು ಮಾಡುತ್ತಾಳೆ? ಮನೆಗೆ ಯಾರು ಬರುತ್ತಾರೆ? ಯಾರೊಂದಿಗೆ ಹೇಗೆ ಇರುತ್ತಾಳೆ ಎಂದು ತಿಳಿಯಲು ಪತಿ ಆಕೆಗೆ ಗೊತ್ತಿಲ್ಲದೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುತ್ತಾನೆ. ಇನ್ನು ಪತ್ನಿ ಕೂಡ ತನ್ನ ಪತಿಯ ಕಚೇರಿಯಲ್ಲಿ ಯಾರೊಂದಿಗೆ ಹೇಗೆ ನಡೆದುಕೊಳ್ಳುತ್ತಾನೆ ಎಂದು ತಿಳಿಯಲು ಆತನ ಶರ್ಟ್‌ನಲ್ಲಿ ಸ್ಪೈ ಕ್ಯಾಮೆರಾ ಅಥವಾ ಕಚೇರಿಯ ಕ್ಯಾಬಿನ್‌ನಲ್ಲಿ ಕ್ಯಾಮೆರಾ ಅಳವಡಿಸುತ್ತಾಳೆ. ಇತ್ತೀಚೆಗ ಆಗ್ನೇಯ ವಿಭಾಗದ ಠಾಣೆ ವ್ಯಾಪ್ತಿಯೊಂದರಲ್ಲಿ ಟೆಕ್ಕಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಮನೆಯ ಬೆಡ್‌ರೂಂನಲ್ಲಿ ಸಿಸಿಟಿವಿ ಅಳವಡಿಸಿದ್ದ. ಸಿಸಿಟಿವಿಗಳಿದ್ದೂ ಬಗೆಹರಿಯದ ಪ್ರಕರಣಗಳು: 2016ರಲ್ಲಿ ಸಂಜಯ್‌ನಗರ ಠಾಣೆ ವ್ಯಾಪ್ತಿಯಲ್ಲಿ ಸುರೇಂದ್ರ ಪಚೌರಿ ಎಂಬ ಉದ್ಯಮಿಯನ್ನು ಮನೆಯ ಮುಂದೆಯೇ ದುಷðಮಿಗಳು ಗುಂಡಿಕ್ಕಿ ಕೊಂದಿದ್ದರು. ಇದಕ್ಕೂ ಮೊದಲು ಮನೆಯ ಸಿಸಿಟಿವಿಗಳಿಗೆ ಹಾನಿಗೊಳಿಸಿ ಕೃತ್ಯವೆಸಗಿದ್ದರು. ಇನ್ನು ಅಕ್ಕ-ಪಕ್ಕದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆರೋಪಿಗಳ ಚಹರೆ ಸ್ಪಷ್ಟವಾಗಿ ಸೆರೆಯಾಗಿರಲಿಲ್ಲ. 2017ರಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಮನೆ ಮುಂದೆಯೇ ಗುಂಡಿಕ್ಕಿ ಕೊಂದಿದ್ದರು. ಆದರೆ, ಸಿಸಿಟಿವಿಯ ಅಸ್ಪಷ್ಟ ದೃಶ್ಯಾವಳಿಯಿಂದ ಆರೋಪಿಗಳ ಪತ್ತೆ ಇರಲಿ, ಚಹರೆ ಕೂಡ ಪತ್ತೆಯಾಗಲಿಲ್ಲ. 20 ಕೋಟಿ ಮಂಜೂರು: ಸಿಲಿಕಾನ್ ಸಿಟಿಯಲ್ಲಿ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ನಗರದ 198 ವಾರ್ಡ್‌ಗಳಲ್ಲಿ ಸಿಸಿಟಿವಿ ಅಳವಡಿಸಲು ಪೊಲೀಸ್ ಇಲಾಖೆಗೆ ಸರ್ಕಾರ 20 ಕೋಟಿ ರೂ. ಮಂಜೂರು ಮಾಡಿದೆ. ಪೊಲೀಸರ ಸುಪರ್ದಿಯಲ್ಲಿ ಸಾವಿರ ಸಿಸಿಟಿವಿಗಳಿದ್ದರೆ, ಖಾಸಗಿಯವರು 5 ಲಕ್ಷಕ್ಕೂ ಅಧಿಕ ಕ್ಯಾಮೆರಾಗಳನ್ನು ಬಳಸುತ್ತಿದ್ದಾರೆ. ಈ ನಡುವೆ ವಾರ್ಡ್ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಪತ್ತೆಗೆ ಪೂರಕವಾಗಿ ಸಿಸಿಟಿವಿ ಅಳವಡಿಸಲು ಗೃಹ ಸಚಿವರು ಸೂಚಿಸಿದ ಹಿನ್ನೆಲೆಯಲ್ಲಿ ನಗರ ಪೊಲೀಸರು ಸಿಸಿಟಿವಿ ಖರೀದಿಗೆ ಮುಂದಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸಿಸಿಟಿವಿ ಕ್ಯಾಮೆರಾಗಳ ಮಾರಾಟ ತ್ತಮವಾಗಿ ನಡೆಯುತ್ತಿದೆ. ನಿತ್ಯ ಕನಿಷ್ಠ 50ರಿಂದ 60 ಸಿಸಿಟಿವಿ ಮಾರಾಟವಾಗುತ್ತಿವೆ. ಮಾರಾಟಕ್ಕೂ ಮೊದಲು ಖರೀದಿದಾರರ ಉದ್ದೇಶ ಕೇಳುತ್ತೇವೆ. ನಂತರ ಅವರ ಅನೂಕೂಲಕ್ಕೆ ತಕ್ಕ ಕ್ಯಾಮೆರಾ ಕೊಡುತ್ತೇವೆ.
-ಚೇತನ್, ಆರ್.ಎಲ್.ಕಂಪ್ಯೂಟರ್ಸ್, ಜೀವನ್ ಭೀಮಾನಗರ * ಮೋಹನ್ ಭದ್ರಾವತಿ